2,765 total views
ಶಿಡ್ಲಘಟ್ಟ : ಮುಳಬಾಗಿಲು ಶ್ರೀ ಕ್ಷೇತ್ರ ಕುರುಡುಮಲೆ ವಿನಾಯಕನಿಗೆ ಚುನಾವಣೆ ಪ್ರಚಾರ ಪೂರ್ವವಾಗಿ ಪೂಜೆ ಸಲ್ಲಿಸಿ ಪ್ರಚಾರದಲ್ಲಿ ತೊಡಗುವುದು ವಾಡಿಕೆಯಾಗಿದೆ. ಶಿಡ್ಲಘಟ್ಟ ದಿಂದ ರಾಜೀವ್ ಗೌಡ ಬೆಂಬಲಿಗರು ಸಾವಿರಾರು ಸಂಖ್ಯೆ ಯಲ್ಲಿ ಭಾಗವಹಿಸಿ ಕೋಲಾರ ಲೋಕಸಭೆ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪುಟ್ಟು ಆಂಜಿನಪ್ಪ ಕಾಂಗ್ರೇಸ್ ಪಕ್ಷದ ಸಿದ್ಧಾಂತಗಳನ್ನು ವಿರೋಧಿಸಿ ಪಕ್ಷದಿಂದ ಉಚ್ಚಾಟನೆ ಆಗಿದ್ದರು. ಪಕ್ಷೇತರವಾಗಿ ಚುನಾವಣೆಗೆ ಸ್ಪರ್ದಿಸಿ 52000 ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು. ಇತ್ತೀಚೆಗೆ ಸಚಿವ ಎಂ ಸಿ ಸುಧಾಕರ್ ಕಾಂಗ್ರೆಸ್ ವಿರೋಧಿ ಪುಟ್ಟು ಆಂಜಿನಪ್ಪ ನನ್ನು ಪಕ್ಷಕ್ಕೆ ಸೇರ್ಪಡಿಸಲು ಹಲವಾರು ರೀತಿಯ ಕಸರತ್ತು ನೆಡೆಸುತ್ತಿದ್ದಾರೆ ಎಂಬುವುದು ಜಗತ್ಜಾಹಿರಾತು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ರಾಜೀವ್ ಗೌಡ ನೇತೃತ್ವದಲ್ಲಿ ಚುನಾವಣೆ ನೆಡೆಸುತ್ತೇವೆ. ರಾಜೀವ್ ಗೌಡ ನಮ್ಮ ನಾಯಕ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ ಪಾರಂ ಪಡೆದು ಸ್ಪರ್ದಿಸಿ ಕಾಂಗ್ರೇಸ್ ಪಕ್ಷವನ್ನು ಶಿಡ್ಲಘಟ್ಟ ಕ್ಷೇತ್ರದಲ್ಲಿ ಉಳಿಸಿದ್ದಾರೆ. ಅವರ ನಿಖರವಾದ ಬೆಂಬಲ ಪಕ್ಷಕ್ಕೆ ಅಗತ್ಯ ಎಂದು ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು. ಇದರಿಂದ ಕೆಂಡವಾದ ಎಂ ಸಿ ಸುಧಾಕರ್ ಸಭೆಯಲ್ಲಿ ರಾಜೀವ್ ಗೌಡ ಬೆಂಬಲಿಗರ ಮೇಲೆ ಎರಗಿ ಬಿದ್ದು ಮಾತಿನ ಚಕಮಕಿಯಾಗಿ ಕೆಲವು ಸಮಯ ಗದ್ದಲವಾಯಿತು. ರಾಜೀವ್ ಗೌಡ ಬೆಂಬಲಿಗರು ಎಂ ಸಿ ಸುಧಾಕರ್ ವಿರುದ್ದ ಘೋಷಣೆ ಕೂಗಿದರು. ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ಕಾಂಗ್ರೇಸ್ ಪಕ್ಷದ ಅಂತರಿಕ ಜಗಳದಿಂದ ಕೋಲಾರ ಮೀಸಲು ಲೋಕಸಭಾ ಅಭ್ಯರ್ಥಿಗೆ ನುಗ್ಗುಲಾರದ ತುತ್ತಾಗಿದೆ. ಒಂದು ಕಡೆ ಕೆ ಎಚ್. ಬಣ ಮತ್ತು ರಮೇಶ್ ಕುಮಾರ್ ಬಣ ರಾಜಕೀಯದಿಂದ ಕೊನೆ ಕ್ಷಣದಲ್ಲಿ ಟಿಕೇಟ್ ಪಡೆದ ಕೆ ವಿ ಗೌತಮ್ ಚುನಾವಣೆಯನ್ನು ಯಾವ ರೀತಿ ಎದರಿಸುತ್ತಾರೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೇಸ್ ಶಾಸಕರು, ಎಂ ಎಲ್ ಸಿ, ಮಾಜಿ ಶಾಸಕರು, ಬ್ಲಾಕ್ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.