2,829 total views
ಮಹಾಲಿಂಗಪುರ: ಸ್ಥಳೀಯ ಮಹಾಲಿಂಗಪುರ ಅರ್ಬನ್ ಬ್ಯಾಂಕಿನ ನೂತನ ಅಧ್ಯಕ್ಷರಾದ ಶೇಖರ್ ಅಂಗಡಿ, ಉಪಾಧ್ಯಕ್ಷರಾದ ಗಿರಿಮಲ್ಲಪ್ಪ ಕಬಾಡಿ ಇವರನ್ನು ನಗರದ ಮಹರ್ಷಿ ಶ್ರೀ ಭಗೀರಥ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯ ಕೆಂಗೇರಿಮಡ್ಡಿಯ ಭಗೀರಥ ದೇವಸ್ಥಾನದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಭಗೀರಥ ಸಮಾಜದ ಮುಖಂಡರಾದ ಮಹಾಲಿಂಗಪ್ಪ ಲಾತುರು,ಲಕ್ಕಪ್ಪ ಲಾತುರ,ರಾಜು ಮುದಕಪ್ಪಗೊಳ, ಲಕ್ಷ್ಮಣ ಮುಗಳಖೋಡ,ಮುತ್ತಪ್ಪ ಲಾತುರ,ನಿಂಗಪ್ಪ ಉಸಳಿ, ನಂದೇಶ ಲಾತುರ, ಮುರಿಗೆಪ್ಪ ಲಾತುರ, ಮಲ್ಲಪ್ಪಾ ಮುದುಕಪ್ಪಗೋಳ, ಮಲ್ಲಪ್ಪ ಲಾತುರ, ಬಾಳೇಶ ಮನ್ನಿಕೇರಿ, ವಿಜಯ ಲಾತುರ, ಮಹಾದೇವ ಬೆಳವಣಿಕಿ, ಸೇರಿದಂತೆ ಇನ್ನೂ ಹಲವಾರು ಸಮಾಜದ ಮುಖಂಡರು ಭಾಗಿಯಾಗಿದ್ದರು.