2,803 total views
ಸಿರುಗುಪ್ಪ ತಾಲೂಕಿನ ಟಿ. ರಾಂಪುರ ಕೆಲವು ಗ್ರಾಮೀಣ ಭಾಗಗಳಲ್ಲಿ ಆತಂಕದಲ್ಲಿ ಸಾರ್ವಜನಿಕರು ತಾಲೂಕು ರಾಂಪುರ ಶಿಥಿಲ ವ್ಯವಸ್ಥೆಗೆ ತಲುಪಿರುವ ಕುಡಿಯುವ ನೀರಿನ ಟ್ಯಾಂಕ್, ಆತಂಕದಲ್ಲಿ ಸಾರ್ವಜನಿಕರು ಗ್ರಾಮಕ್ಕೆ ಕುಡಿಯುವನೀರು ಸರಬರಾಜು ಮಾಡಲು ಸುಮಾರು 20-30 ವರ್ಷಗಳ ಹಿಂದೆ ರಾಂಪುರ ಮತ್ತು ತೊಂಡೆಹಾಳು ರಸ್ತೆಯ ಪಕ್ಕದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿರುತ್ತಾರೆ. ಈ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು,ಯಾವ ಸಂದರ್ಭದಲ್ಲಿ ಬೀಳುತ್ತದೆಯೊ ಎಂಬ ಆತಂಕದಲ್ಲಿ ಸಾರ್ವಜನಿಕರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ಸಾರ್ವಜನಿಕರು ಆರೋಪಿಸುತ್ತಿದ್ದಾರೆ ಗ್ರಾಮಸ್ಥರು ಮಾತನಾಡಿ ರಾಂಪುರ ಮತ್ತುತೊಂಡೆಹಾಳು ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್ ಸುಮಾರು 5 0,000 ಲೀಟರ್ ನೀರಿನ ಸಾಮರ್ಥ್ಯ ಹೊಂದಿರುವ ಓವರ್ ಹೆಡ್ ಟ್ಯಾಂಕ್ ಇದಾಗಿದೆ. ಈ ನೀರಿನ ಟ್ಯಾಂಕ್ ಶಿಥಿಲಗೊಂಡಿರುತ್ತದೆ. ಈ ರಸ್ತೆಯ ಮಾರ್ಗವಾಗಿ ಬೇರೆ ಗ್ರಾಮಕ್ಕೆ ವಿದ್ಯಾಬ್ಯಾಸಕ್ಕೆ ಹೋಗುವ ಮಕ್ಕಳು, ಹೊಲಗದ್ದೆಗಳಿಗೆ ಕೆಲಸ ಮಾಡಲು ಹೋಗುವ ರೈತರು, ಮಹಿಳೆಯರು ಪ್ರತಿನಿತ್ಯವೂ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಈ ನೀರಿನ ಟ್ಯಾಂಕ್ ರಸ್ತೆಯ ಪಕ್ಕದಲ್ಲಿರುವುದರಿಂದ, ಇದೇ ರಸ್ತೆಯಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾಗಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನೀರಿನ ಟ್ಯಾಂಕ್ ಶಿಥಿಲಗೊಂಡಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬೇಟಿನೀಡಿ ಪರಿಶೀಲನೆ ನಡೆಸಿರುತ್ತಾರೆ. ಪರಿಶೀಲನೆ ನಡೆಸಿ 2 ವರ್ಷಗಳು ಕಳೆದರು ಇಲ್ಲಿಯವರೆಗೆ ಟ್ಯಾಂಕ್ನ ದುರಸ್ತಿ ಕಾರ್ಯವನ್ನು ಕೈಗೊಳ್ಳದೆ ಕುಂಟು ನೆಪಗಳನ್ನು ಹೇಳುತ್ತಾ, ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಕಾಲಹರಣ ಮಾಡುತ್ತಾ ಕರ್ತವ್ಯ ಲೋಪವೆಸಗುತ್ತಿದ್ದಾರೆ. ಗ್ರಾಮದಲ್ಲಿ ಅನಾಹುತ ಆಗುವ ಮುಂಚೆಯೇ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಕುಡಿಯುವ ನೀರೊದಗಿಸಲು ಪರ್ಯಾಯ ನೀರಿನ ಟ್ಯಾಂಕ್ ನಿರ್ಮಿಸಿ ಶಿಥಿಲಗೊಂಡಿರುವ ಟ್ಯಾಂಕ್ ತೆರವುಗೊಳಿಸಿ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಆಗ್ರಹಿಸಿರುತ್ತಾರೆ ಹಾಗೆಯೇ ರಸ್ತೆಯ ಮುಂಭಾಗದಲ್ಲಿರುವ ಮುಂಭಾಗದಲ್ಲಿ ಇರುವ ಹೆಡ್ ಓವರ್ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು . ರಸ್ತೆಯ ಬದಿಯಲ್ಲಿ ಇದ್ದು .ವಿದ್ಯುತ್ ಕಂಬಗಳು ಕೂಡ ಅದರ ಸನಿಹದಲ್ಲಿ ಇದು ಸುಮಾರು ಮೂವತ್ತು ವರ್ಷಗಳ ಕಳೆದು ಹೋಗಿದೆ .ಇದು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ ಏಕೆಂದರೆ ನೀರಿನ ಟ್ಯಾಂಕ್ ಸುತ್ತಲೂ ಕಬ್ಬಿಣದಸರಳುಗಳುಹೊರಬಂದಿದ್ದು ಸಿಮೆಂಟ್ ಉದುರುತ್ತಿದೆ ಕಂಬಗಳು ಹಾಗೂ ಮೇಲ್ಚಾವಣಿ ತಳಪಾಯದ ಸಿಮೆಂಟ್ ಲೇಪನ ಉದುರಿ ಕುಸಿಯುವ ಹಂತ ತಲುಪಿದೆ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನಹರಿಸುತ್ತಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ ಏಕೆಂದರೆ ಇದು ರಸ್ತೆಯ ಬದಿ ದಿನನಿತ್ಯದ ಕಾರ್ಯ ಚಟುವಟಿ ಮಾಡುವುದಕ್ಕೆಹೊಲಗದ್ದೆ ಗಳಿಗೆ ಸಾರ್ವಜನಿಕರ ಬಸ್ ಚಲಿಸುತ್ತವೆ ಪಕ್ಕದಲ್ಲಿ ಇರುತ್ತದೆ ಜನ-ಜಾನುವಾರುಗಳು ಅಂಗನವಾಡಿ ಸಣ್ಣಪುಟ್ಟ ಶಾಲೆಯ ಮಕ್ಕಳು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣ.ಇದೆ ಮಾರ್ಗದಲ್ಲಿ ಸಂಚರಿಸುತ್ತಾರೆ ಎಷ್ಟೇ ಅಲ್ಲ ನೀರಿನ ಟ್ಯಾಂಕ್ ಹಾಗೂ ಶುದ್ಧ ನೀರಿನ ಘಟಕ ಹಾಗೂ ಮಿನಿ ನೀರಿನ ಟ್ಯಾಂಕ್ ದಿನನಿತ್ಯ ಬಳಕೆಗೆ ಬಳಕೆಗೆ ಎದ್ದು ಇಲ್ಲದಂತಾಗಿದೆ ಹಾಗೂ ಹಲವಾರು ಕುಟುಂಬಗಳು ವಾಸಿಸುತ್ತಿದ್ದಾರೆ ನೀರಿನ ಸಮಸ್ಯೆ ತಾಂಡವಾಡುತ್ತಿದೆ ನೀರಿನ ಟ್ಯಾಂಕ್ ಯಾವಗ ಗಾಳಿ-ಮಳೆಗೆ ಬೀಳುತ್ತದೆಯೋ ಎಂದು ದಿನನಿತ್ಯದ ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ ಈ ಆಂಧ್ರದ ಗಡಿಭಾಗದಜನರು ಇವರು ಕೂಲಿ ಕಾರ್ಮಿಕರಾಗಿದ್ದು ಕೆಲಸಮಯದಲ್ಲಿ ಮಕ್ಕಳು ನೀರಿನ ಟ್ಯಾಂಕ್ ಹತ್ತಿರ ಆಟ ಆಡುತ್ತಿರುತ್ತಾರೆ ಟ್ಯಾಂಕ್ ಒಳಗಡೆ ಭಾಗದಲ್ಲಿ ಶೇಕಡ 50ರಷ್ಟು ಕುಸಿದಿದ್ದು ಒಳಗಡೆ ತ್ಯಾಜ್ಯ ಸಂಗ್ರಹಣೆಯಾಗಿದೆ ಶಿಥಿಲಗೊಂಡಿರುವ ನೀರಿನ ಟ್ಯಾಂಕ್ ಗಳನ್ನು ಬೀಳಿಸುವ ನಿಯಇದ್ದರೂ ಕೂಡ ಗ್ರಾಮದಲ್ಲೂ ಈಗ ಊರಿನ ವಿದ್ಯುತ್ ಕಂಬಗಳು ಕೂಡ ಅದರ ಸನಿಹದಲ್ಲಿ ಇದೆ ನೀರಿನ ಟ್ಯಾಂಕ್ ಈಗ ಸಂಪೂರ್ಣಶಿಥಿಲ ವ್ಯವಸ್ಥೆಗೆ ತಲುಪಿರುತ್ತದೆ ಯಾವ ಸಂದರ್ಭದಲ್ಲಿ ಬೀಳುತ್ತದೆಯೋ ಎಂಬ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ ಹಲವು ಬಾರಿ ಮನವಿ ಮಾಡಿದ್ದರು ಗಮನಹರಿಸುತ್ತಿಲ್ಲ ಗ್ರಾಮಸ್ಥರ ಆಕ್ರೋಶ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳುಮಾತ್ರ ಕ್ರಮಕ್ಕೆ ಮುಂದಾಗದೆ ಸಮಸ್ಯೆಗಳಿಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಕಂಡರಿಯದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಡಾಫೆ ಉತ್ತರಗಳು ನೀಡಿದ್ದಾರೆ ತಾಲೂಕಿನ ಕುಡಿಯುವ ನೀರು ಮತ್ತು ನೈರ್ಮಲ್ಯ ತಾಲೂಕು ಮೇಲಧಿಕಾರಿ ರವೀಂದ್ರ ನಾಯ್ಕ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಕಣ್ಮುಚ್ಚಿ ಕುಳಿತ ಅಧಿಕಾರಿ ಎಂದು ಗ್ರಾಮಸ್ಥರ ಮನೆಮಾತು ಇದಾಗಿದ್ದು ಹೊಸದೊಂದು ನೀರಿನ ಟ್ಯಾಂಕ್ ಅನುಕೂಲ ಇಲ್ಲದಂತಾಗಿದೆ ಕೂಡಲೇ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಮುಂದಿನ ದಿನಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಮತ ಹಾಕುವುದಿಲ್ಲ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
ವರದಿ.ಶೇಖರ್ ಹೆಚ್