2,747 total views
ಜೇವರ್ಗಿ : ತಾಲೂಕಿನ ಬಿರಾಳ(ಬಿ) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಅತಿ ಹಿಂದುಳಿದ ಗ್ರಾಮ ಮಲ್ಲಾ(ಕೆ) ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಲ್ಲಾ(ಕೆ) ಅವ್ಯವಸ್ಥೆಯಿಂದ ಕೂಡಿದೆ ಇಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ ಶಿಕ್ಷಣ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಅಷ್ಟಕ್ಕೂ ಈ ಶಾಲೆಯಲ್ಲಿ ಏನಾಗಿದೆ ಅಂದ್ರೆ ಏನಾಗಿದೆ ಅಂತ ನೀವು ಕೇಳಬಹುದು ಅಂದ ಹಾಗೆ ಈ ಶಾಲೆಯ ಶೌಚಾಲಯ ಅರ್ಧಕ್ಕೆ ನಿಂತಿದೆ ಇದ್ದ ಶೌಚಾಲಯವನು ಕೆಡವಿ ಅರ್ಧ ಮುರ್ದ ಕಟ್ಟಿ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇದೆ ಅದನ್ನು ದುರಸ್ತಿ ಮಾಡಿಸಬೇಕಾದಂತ ಇಲಾಖೆವನ್ನು ಕೈಕಟ್ಟಿ ಸುಮ್ಮನೆ ಕುಳಿತುಕೊಂಡಿದ್ದಾರೆ. ಒಂದು ಶಾಲೆ ಅಂದ್ರೆ ಆ ಶಾಲೆಗೆ ಮೂಲಭೂತ ಸೌಕರ್ಯಗಳು ಕೊಡಲೇಬೇಕು ಅದು ಸರ್ಕಾರದ ಹೊಣೆ ಕೂಡ ಹೌದು ಆದರೆ ಇಲ್ಲಿ ಶೌಚಾಲಯವು ಇದ್ರೂ ಇಲ್ಲದಂತೆ ಇದೆ ಮತ್ತು ಶುದ್ಧ ಕುಡಿಯುವ ನೀರು ಕೂಡ ಇಲ್ಲ ಶಾಲೆಯ ಮುಖ್ಯದ್ವಾರ ಪ್ರವೇಶ ಗೇಟು ಮುರಿದುಹೋಗಿದೆ ಶಾಲೆಯ ಸುತ್ತ ಮುತ್ತ ಪರಿಸರ ವಾತಾವರಣ ಜಾಲಿ ಕಂಠಿ ಮುಳ್ಳು ಕಂಟೆಗಳು ಗಿಡಗಳು ಬೆಳೆದುಕೊಂಡಿದೆ ಸರಕಾರಿ ಶಾಲೆ ಆವರಣ ಒಳಗಡೆ ಮತ್ತು ಹೊರಗಡೆ ಕಟ್ಟಿಗೆ ಮರಳು ಉಸುಕು ಕಲ್ಲುಗಳು ಮುಂತಾದ ವಸ್ತುಗಳನ್ನು ಸಾರ್ವಜನಿಕರು ಹಾಕುತ್ತಿದ್ದರು ಶಾಲೆಯ ಮುಖ್ಯಪಾದ್ಯರು ಸಹ ಶಿಕ್ಷಕರು ಇದರ ಬಗ್ಗೆ ತುಟಿ ಬಾಯಿ ಬಿಚ್ಚುತ್ತಿಲ್ಲ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕಡಿಮೆ ಇಳಿಮುಖವಾಗ್ತನೆ ಇದೆ. ಸರ್ಕಾರಿ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಮಾತೆ ಎತ್ತುತ್ತಿಲ್ಲ ಗಪ್ ಚುಪ್ ಆಗಿ ಕುಳಿತುಕೊಂಡಿದ್ದಾರೆ, ಸರ್ಕಾರಿ ಶಾಲೆ ಉಳಿಸಬೇಕು ಉಳಿಸಬೇಕು ಅಂತ ಸರ್ಕಾರ ಬಾಯಿ ಬಡ್ಕೊಳ್ತಿದ್ರೆ ಆದರೆ ಸರ್ಕಾರಿ ಶಾಲೆ ಉಳಿಸೋದಕ್ಕೆ ಏನು ಮಾಡಬೇಕು ಅನ್ನೋದು ಸರ್ಕಾರಕ್ಕೆ ಗೊತ್ತಾಗದಿಲ್ವಾ, ನಮ್ಮ ಮಕ್ಕಳನ್ನು ಶಾಲೆಗೆ ಕಳಿಸೋದು ಹೇಗೆ ಅಂತ ಪೋಷಕರ ಗೋಳಾಡುತ್ತಾರೆ ಈ ಶಾಲೆಯ ಪರಿಸ್ಥಿತಿ ನೋಡ್ತಾನೆ ಇದ್ರೆ ಶೌಚಾಲಯದ ದುಸ್ಥಿತಿ ಯಾವ ಮಟ್ಟದಲ್ಲಿ ಇದೆ ಅನ್ನುವಂತದು ಇನ್ನು ಮುಂದಾದರು ಏನಾದರೂ ಸರ್ಕಾರ ಎಚ್ಚೆತ್ತುಕೊಳ್ತಾರಾ ಆ ಮಕ್ಕಳಿಗೆ ಸರಿಯಾದ ಶಿಕ್ಷಣದ ಜೊತೆಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ. ಈ ಶಾಲೆಗೆ ಮಕ್ಕಳು ವಿದ್ಯಾರ್ಜನೆಗೆ ಬರುತ್ತಾರೆ ಆ ವಿದ್ಯಾರ್ಜನೆಗೆ ಬರುವಂತ ಮಕ್ಕಳಿಗೆ ಸರಿಯಾದಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸುವಂತದ್ದು ಸರ್ಕಾರದ ಜವಾಬ್ದಾರಿ ಆಗಿರುತ್ತದೆ. ಸರ್ಕಾರಿ ಶಾಲೆ ಉಳಿಸಬೇಕು ಸರ್ಕಾರಿ ಶಾಲೆ ಉಳಿಸಬೇಕು ಅಂತ ಹೇಳುತ್ತಾರೆ ಈ ರೀತಿಯಾದಂತ ಪರಿಸ್ಥಿತಿ ಇದ್ರೇ ಸರ್ಕಾರಿ ಶಾಲೆ ಉಳಿಯೋದು ಹೇಗೆ? ಇಂಥ ಶಾಲೆಗಳು ಇದ್ರೆ ಈ ಶಾಲೆಗೆ ಮಕ್ಕಳು ಪಾಠ ಕಲಿಯುವುದಕ್ಕೆ ಬರುತ್ತಾರ ಅದು ಕೂಡ ಶೌಚಾಲಯ ಮೂಲಭೂತ ಸೌಕರ್ಯಗಳಲ್ಲಿ ಪ್ರಮುಖವಾದಂತದು ಪ್ರತಿಯೊಬ್ಬರಿಗೂ ಕೂಡ ಇದು ಬೇಕೇ ಬೇಕು! ಸರ್ಕಾರ ಇದರ ಬಗ್ಗೆ ಸರ್ಕಾರ ಯಾಕೆ ಇನ್ನೂ ಕೂಡ ಕ್ರಮ ಯಾಕೆ ಕೈಗೊಂಡಿಲ್ಲ ಅದರಲ್ಲಿ ಕೂಡ ಈ ಶಾಲೆಗೆ ಆಗಾದ್ರೆ ಮಕ್ಕಳು ಪಾಠ ಹೇಗೆ ಕಲಿಯಬೇಕು ಇಲ್ಲಿ ಹೇಗೆ ಬರುವುದಕ್ಕೆ ಸಾಧ್ಯ! ಇಂತಹ ದುಸ್ಥಿತಿ ಇದ್ರೂ ಕೂಡ ಈ ಭಾಗದ ಜನಪ್ರತಿನಿಧಿಗಳು ಹಾಗೂ ಮಲ್ಲಾ(ಕೆ) ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಉಪಾಧ್ಯಕ್ಷರು ಯಾಕೆ ಇನ್ನೂ ಕೂಡ ಕ್ರಮವನ್ನು ಕೈಗೊಂಡಿಲ್ಲ ಅನ್ನುವಂತದೆ ಯಕ್ಷಪ್ರಶ್ನೆಯಾಗಿ ಉಳಿದಿದೆ. ಇಲ್ಲಿ ಗ್ರಾಮದ ಸಾರ್ವಜನಿಕರ ಪೋಷಕರ ಅಳಿಲು ನೋವು ಕೂಡ ಇದೇ ಆಗಿದೆ, ಇನ್ನು ಮುಂದು ಏನಾದರು ಇದರ ಬಗ್ಗೆ ಕ್ರಮವನ್ನು ಕೈಗೊಳ್ಳುತ್ತಾರಾ ಈ ವಿದ್ಯಾರ್ಥಿಗಳಿಗೆ ಒಳ್ಳೆಯ ಒಂದು ಪರಿಸರ ವಾತಾವರಣ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತಾರಾ ಅನ್ನೋದನ್ನ ಕಾದು ನೋಡಬೇಕು ಅಷ್ಟೇ.
ವರದಿ.ದೇವಿಂದ್ರ.M ದೊರೆ