2,887 total views
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ದಿವಂಗತ ಶ್ರೀ ಭೀಮಾಜಿ ವೆಂಕಟೇಶ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶ್ರೀ ಸಂಗಯ್ಯ ಮಠಪತಿ, ಗುರುಗಳಿಂದ ಪೆನ್, ಪೆನ್ಸಿಲ್ , ಪ್ಯಾಡ್ ಮತ್ತು ಸಿಹಿ ಹಂಚುವುದರ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಶುಭ ಕೋರಿದರು.
ಇವರು ಅವರಾದಿ ಶಾಲೆಯ ಎಲ್ಲಾ ಮಕ್ಕಳಿಗೂ ಪ್ರತಿಯೊಂದು ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ, ಸಿಹಿ ಹಂಚುವುದನ್ನು ಮಾಡುತ್ತಾ ಬಂದಿರುತ್ತಾರೆ ಆದ್ದರಿಂದ ಮಕ್ಕಳಿಗೆ ಇವರು ಪ್ರೀತಿಯ ಗುರುಗಳಾಗಿದ್ದಾರೆ.ಪರೀಕ್ಷೆಗೆ ತೆರಳುವ ಎಲ್ಲಾ ಮಕ್ಕಳಿಗೆ ಪರೀಕ್ಷೆ ಎಂದರೆ ಭಯಬೇಡ ನಿರ್ಭಯವಾಗಿ ಪರೀಕ್ಷೆಯನ್ನು ಬರೆಯಿರಿ ಎಂದು ಧೈರ್ಯ ತುಂಬಿ ಎಲ್ಲಾ ಮಕ್ಕಳಲ್ಲಿ ಉತ್ಸಾಹವನ್ನು ತುಂಬುತ್ತಾರೆ ನಿಮ್ಮ ಮುಂದಿನ ವಿದ್ಯಾಭ್ಯಾಸ ಮುಂದುವರಿಯಲಿ ನಿಮ್ಮ ಕನಸುಗಳೆಲ್ಲ ಈಡೇರಲಿ ಎಂದು ಎಲ್ಲ ಮಕ್ಕಳಿಗೆ ಶುಭ ಹಾರೈಸಿದರು.