2,879 total views
ಅರಸೀಕೆರೆ ತಾಲ್ಲೋಕ್ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿ ಶ್ರೀ ಆಂಜನೇಯ ದೇವರ ಹೆಸರಿನಲ್ಲಿಸರ್ವೇ ನಂಬರ್ 160 ರಲ್ಲಿ 3:31 ಎಕರೆ ಜಮೀನು ಇದ್ದು, ಮೂಲ ದಾಖಲಾತಿಗಳಾದ 5/6- ಇಂಡಕ್ಸ್, ಕೈಬರಹದ ಪಹಣಿಗಳು ಇದ್ದು MR 224/1981 ರಲ್ಲಿ ಭೂನ್ಯಾಯ ಮಂಡಳಿಯ ಆದೇಶದನ್ವಯ ತಹಶೀಲ್ದಾರ್ ಸರ್ಕಾರ, ಶ್ರೀ ಆಂಜನೇಯ ದೇವರು ಹೆಸರಿಗೆ ಕಾಯ್ದೆರಿಸಲಾಗಿದೆ ಸರದಿ ಸ್ವತ್ತಿನಲ್ಲಿ ಸುಮಾರು 40 ವರ್ಷಗಳ ಹಿಂದೆಯೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವಿದ್ದು ಪ್ರಸ್ತುತವಾಗಿಯೂ ಕೂಡ ಕಾರ್ಯನಿರ್ವಹಿಸುತ್ತಿದೆ ಈ ಸ್ವತ್ತನ್ನು ಪಡೆಯಲು ಭೂ ನ್ಯಾಯ ಮಂಡಳಿಯ ಮುಂದೆ ಖಾಸಗಿ ವ್ಯಕ್ತಿ ಅರ್ಜಿ ಸಲ್ಲಿಸಿದ್ದು ಖಾಸಗಿ ವ್ಯಕ್ತಿಯು ಸಲ್ಲಿಸಿದ್ದ ಅರ್ಜಿ ,ದಾಖಲಾತಿಗಳನ್ನು ಮತ್ತು ಸ್ಥಳ ಪರಿಶೀಲನೆ ಮಾಡಿ ಈಗಾಗಲೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಿರುವುದರಿಂದ ಖಾಸಗಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೊಳಪಡಿಸಿ ವಜಗೊಳಿಸಿ ತಹಶೀಲ್ದಾರ್ ಸರ್ಕಾರ ಮತ್ತು ಆಂಜನೇಯ ದೇವರಿಗೆ ಸೇರಿದ್ದಾಗಿ ತೀರ್ಪು ನೀಡಿರುತ್ತಾರೆ,
ಇಷ್ಟೆಲ್ಲಾ ಘಟನೆ ನಡೆದಿದ್ದರೂ ಕೂಡ ಕೆಲ ಸರ್ಕಾರಿ ಅಧಿಕಾರಿಗಳು ಸೇರಿಕೊಂಡು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಶ್ರೀ ಚನ್ನಬಸವೇಶ್ವರ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಎಮ್ ಶಂಕರಪ್ಪ ರವರಿಗೆ ಮಾಡಾಳು ಚೇರ್ಮನ್ ಎಂ ಶಂಕ್ರಪ್ಪನವರಿಂದ ಎಂದು ಮೆಟೇಶನ್ ವಹಿಯಲ್ಲಿ ನಮೂದು ಮಾಡಿ 160 ರಲ್ಲಿ 0.30 ಗುಂಟೆ ಸ್ವತನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು ನಂತರದಲ್ಲಿ ಇದೇ 160 ಸರ್ವೇ ನಂಬರ್ ನಲ್ಲಿ 3 ಎಕರೆ ಸ್ವತನ್ನು ನೇರಾ ನೇರವಾಗಿ ಕೇವಲ ಕಂಪ್ಯೂಟರ್ ಪಹಣಿಯಲ್ಲಿ ಎಮ್ ಶಂಕರಪ್ಪ ಮಾಡಾಳು ಅವರಿಗೆ ಕೂರಿಸಿದ್ದು, ನಂತರ ಇವರ ಜೇಷ್ಠ ಪುತ್ರನಾದ MSV ಸ್ವಾಮಿ ಯವರು 2019-20ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಇವರು ತಮ್ಮ ಅಧಿಕಾರದ ಪ್ರಭಾವದಿಂದ, ಅಧಿಕಾರಿಗಳಿಂದ ಇವರ ಹೆಸರಿಗೆ ಈಗಿರುವ ಸರ್ಕಾರಿ ಕಟ್ಟಡ 0.22 ಗುಂಟೆ & ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿರುವ ಕಟ್ಟಡದ ಸ್ವತ್ತಿನ ವಿಸ್ತೀರ್ಣ 2:18 ಎಕರೆ ಈ ಎರಡು ಸ್ವತ್ತುಗಳನ್ನು MSV ಸ್ವಾಮಿಯವರ ಹೆಸರಿಗೆ ಪೌತಿ ಖಾತೆ ಮಾಡಿಸಿ, ನಂತರ ವಿಭಜನೆ ಮಾಡಿಸಿದ್ದು, ಈ ಎಲ್ಲಾ ಅಕ್ರಮಕ್ಕೂ ಕಂದಾಯ ಇಲಾಖೆಯ ತಳಮಟ್ಟದ ಅಧಿಕಾರಿಗಳಿಂದ ಹಿಡಿದು ತಹಶೀಲ್ದಾರ್ ವರೆಗಿನ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ಅವ್ಯವಹಾರದಲ್ಲಿ ತೊಡಗಿರುವುದು ವಿಪರ್ಯಾಸ. ಸಾರ್ವಜನಿಕರ ಹಿತದೃಷ್ಟಿಯಿಂದ, ಸರ್ಕಾರದ & ದೇವರ ಆಸ್ತಿಯನ್ನು ಉಳಿಸುವ ದೃಷ್ಟಿಯಿಂದ ಮಾಡಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ ಹೊಸಳ್ಳಿ ಗ್ರಾಮದ ಆರ್ಟಿಐ ಕಾರ್ಯಕರ್ತರಾದ ಶ್ರೀ ಎಚ್ ಸಿ ಶಿವಕುಮಾರ್ & ಮಾಡಾಳಿನ ದಲಿತ ಮುಖಂಡರು ಹಾಗೂ ಆರ್ ಟಿ ಐ ಕಾರ್ಯಕರ್ತರು ಆದ ಶ್ರೀ ತಿಮ್ಮಯ್ಯ ಎಂ ಆರ್ ಹಾಗೂ ಆರ್ಟಿಐ ಕಾರ್ಯಕರ್ತರು ಹಾಗೂ ತಾಲೂಕ್ ಪತ್ರಕರ್ತರು ಆದ ಮಾಡಾಳ್ ರವಿ ಈ ಅಕ್ರಮ ಖಾತೆಯ ಬಗ್ಗೆ ಗೌರವಾನ್ವಿತ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿದ್ದು, ಹಾಗೂ ಮಾನ್ಯ, ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಬೆಂಗಳೂರು ರವರಲ್ಲಿ, ಮಾನ್ಯ, ಜಿಲ್ಲಾಧಿಕಾರಿಗಳವರಲ್ಲಿ, ಮಾನ್ಯ, ಉಪ ವಿಭಾಗಾಧಿಕಾರಿಗಳವರಲ್ಲಿ, ಮಾನ್ಯ, ತಹಶೀಲ್ದಾರ್ ರವರಲ್ಲಿ ದೂರನ್ನು ಸಲ್ಲಿಸಿದ್ದು ಈ ವಿಷಯ ತಿಳಿದ ಕಣಕಟ್ಟೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ಎಸ್ ವಿ ಸ್ವಾಮಿಯವರುತಾನು ಮಾಡಿದ ಕರ್ಮಕಾಂಡ ಬಯಲಾದ ತಕ್ಷಣ ಅಕ್ರಮವಾಗಿ ಕಾತೆ ಮಾಡಿಸಿಕೊಂಡಿದ್ದ ಸರ್ವೇ ನಂಬರ್ 160/3 ರರಲ್ಲಿ 0.22 ಗುಂಟೆ ಸ್ವತನ್ನು & 160/1 ರ ರಲ್ಲಿ 2,18 ಎಕರೆಯಲ್ಲಿ 2 ಎಕರೆ ಮಾತ್ರ ಸರ್ಕಾರಕ್ಕೆ ಹಿಂದಿರುಗಿಸಿ ಉಳಿಕೆ 18 ಗುಂಟೆ ಎಂ ಎಸ್ ವಿ ಸ್ವಾಮಿಯವರು ಒಬ್ಬ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿ ಈ ರೀತಿ ತನ್ನ ಹೆಸರಿನಲ್ಲಿಯೇ ಉಳಿಸಿಕೊಂಡಿರುವುದು ದುರದೃಷ್ಟಕರ & ದುರ್ದೈವದ ಸಂಗತಿ ಮತ್ತು ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಗೌರವಾನ್ವಿತ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ಇದ್ದಾಗಿಯೂ ಕೂಡ ವಿಚಾರಣೆಗೂ ಮುನ್ನವೇ ಈ ರೀತಿ.018 ಗುಂಟೆ ಸ್ವತ್ತು & ಶ್ರೀ ಸ್ವರ್ಣ ಗೌರಿ ಪ್ರೌಢಶಾಲೆಯ 0.30 ಗುಂಟೆ ಈ ಎರಡು ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಳ್ಳದೆ ಅಪೂರ್ಣವಾಗಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಶಿರಸ್ತೆದಾರರು ಹಾಗೂ ತಹಶೀಲ್ದಾರರು ಸೇರಿ
ಕಣಕಟ್ಟೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಮಾಜಿ ಸದಸ್ಯರಾದ MSV ಸ್ವಾಮಿಯ ಜೊತೆ ಶಾಮೀಲಾಗಿ ಬಾರೀ ಭ್ರಷ್ಟಾಚಾರ & ಅವ್ಯವಹಾರದಲ್ಲಿ ತೊಡಗಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಆದ್ದರಿಂದ ಇಂತಹ ಸರತಿ ಸದರಿ ಅಧಿಕಾರಿಗಳ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಆಗಬೇಕು & ಈ ಇದೇ ಸ್ವತ್ತಿನಲ್ಲಿ ರಾಗಿ ಇತರೆ ಬೆಳೆಯ ವಿಮೆಗಳನ್ನು, ಖಾತೆ ಹೊಂದಿದ್ದ ಕಾರಣದಿಂದ ವಿಮೆ ಹಣ ಪಡೆದಿರುವ ಶಂಕೆಯಿದ್ದು ಇದನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಹಿಂದಿರುಗಿಸುವಂತೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಸ್ ವಿ ಸ್ವಾಮಿ ಅವರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು ಹಾಗೂ .RTI ಕಾರ್ಯಕರ್ತರಾದ HC ಶಿವಕುಮಾರ್, ತಿಮ್ಮಯ್ಯ MR & ಮಾಡಾಳ್ ರವಿ ರವರುಗಳು ಸೇರಿ ಈ ಹಿಂದೆ ನಡೆದಿದ್ದ ಭ್ರಷ್ಟಾಚಾರ & ಅವ್ಯವಹಾರವನ್ನು ಬಯಲಿಗೆಳೆದು ಸಾರ್ವಜನಿಕರ ಆಸ್ತಿಯನ್ನು ಕಾಪಾಡಿದ್ದಕ್ಕೆ ಸಾರ್ವಜನಿಕರು ಪ್ರಶಂಸಿಸಿದರು.ಹಾಗೂ ಅರಸೀಕೆರೆ ತಾಲ್ಲೋಕ್ ನ ಕಣಕಟ್ಟೆ ಹೋಬಳಿ ಕಣಕಟ್ಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿ ಇಂತಹ ರಣಹೇಡಿ,ಹೇಯ ಕೃತ್ಯ ವನ್ನು ಸಾರ್ವಜನಿಕರು ನೋಡಿ ಆಕೋಶ ವ್ಯಕ್ತಪಡಿಸಿದರು.
ವರದಿ : ಮಾಡಾಳ್ ರವಿ.