3,757 total views
ಒಂದು ಸಾವಿರ ವರ್ಷವಾದರೂ ಬೇಕಾದಬಹುದಂತೆ. ಕೋಟ್ಯಾಂತರ ವರ್ಷಗಳಿಂದ ರಚಿತವಾದ ಭೂಮಿಯನ್ನು ನಮ್ಮ ಸ್ವಾರ್ಥಕ್ಕಾಗಿ, ಕೃಷಿಯ ಸುಲುಭಕ್ಕಾಗಿ, ಕಳೆ ಎಂದು ಉದ್ಘೋಷಿಸಿ ನಾಶ ಮಾಡಲು ನಮಗೆ ಹಕ್ಕಿದೆಯೇ? ಪ್ರಕೃತಿ ಸಹಜ ವಿಧಾನದಿಂದ ನಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ನಿವಾರಿಸಿಕೊಂಡು ಸಹಜೀವನಕ್ಕೆ ಶರಣು ಹೋಗುವುದು ಲೇಸೆಂಬ ಸಿದ್ದಾಂತವನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂಬುದು ನನ್ನ ನಂಬಿಕೆ. ಕಳೆಯನ್ನು ಬೆಳೆಸಿ ಮತ್ತೆ ಕತ್ತರಿಸಿ.
ಬುಡ ಸಮೇತ ಕಿತ್ತು ಹಾಕುವುದು ಬೇಡ ಪಾರ್ಕ ಗಳಲ್ಲಿರುವಂತೆ ಒಂದು ಇಂಚು ಕಳೆ ಉಳಿಯಲು ಬಿಡಿ , ಸುಲಭವಾಗಿ ಕಳೆ ಕತ್ತರಿಸುವ ಯಂತ್ರಗಳನ್ನು ಬಳಸಿ, ಪದೇ ಪದೇ ಬರುವ ಕಳೆ ನಮಗೆ ಹಸಿರು ಎಲೆ ಗೊಬ್ಬರವಾಗಿ ಭೂಮಿಯಲ್ಲಿ ಸೂಕ್ಷ್ಮ ಜೀವಾಣಗಳು ಎರೆಹುಳು ಸಮೃದ್ಧವಾಗಿ ಬೆಳೆಯುತ್ತವೆ. ತೋಟದ ಇಳುವರಿಯನ್ನು ಹೆಚ್ಚಿಸುವುದು ದಯವಿಟ್ಟು ಕಳೆನಾಶಕ ಕ್ರಿಮಿನಾಶಕ ಬಳಕೆ ಬಿಡಿ