2,992 total views
ಹೇವನ ಫೈಟರ್ ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ ಕುಮಾರ್ ಬೀರನೂರ ತಂಡದ ವತಿಯಿಂದ ಕರಾಟೇ ವಿದ್ಯಾರ್ಥಿಗಳ ಡಿಪ್ಲೋಮಾ ಬ್ಲಾಕ್ ಬೆಲ್ಟ್ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ
ಕಲ್ಬುರ್ಗಿ ಸುದ್ದಿ: ಹೇವನ ಫೈಟರ್ ಸಂಸ್ಥೆಯು ಶಿಟೋ-ರಿಯೋ ಕರಾಟೆ ಸ್ಟೈಲ್ ಕಲರ ಬೆಲ್ಟ್ ಮತ್ತು ಬ್ಲಾಕ್ ಬೆಲ್ಟ್ ಡಿಪ್ಲೋಮಾ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಆಲ್ ಇಂಡಿಯಾ ಶಿಟೋ-ರಿಯೋ ಕರಾಟೆ ಡು ಯುನಿಯನ ಅಧ್ಯಕ್ಷರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ ಎಸ್ ಅರುಣ ಮಾಚಯ್ಯನವರ ಮಾರ್ಗದರ್ಶನದಲ್ಲಿ ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ ಕುಮಾರ್ ಬೀರನೂರ ರವರ ನೇತೃತ್ವದಲ್ಲಿ ಸುಮಾರು 100 ಜನ ವಿದ್ಯಾರ್ಥಿಗಳು ಡಿಪ್ಲೊಮಾ ಪ್ರಶಸ್ತಿ ಪತ್ರ ಪಡೆದುಕೊಂಡರು ಕಲ್ಬುರ್ಗಿ
ನಗರದ ಕನ್ನಡ ಭವನದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಬುರ್ಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ್ ದರ್ಗಿ ಅವರು ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮಲ್ಲಿಕಾರ್ಜುನ ಮುತ್ಯ ಮಹಲ್ ರೋಜಾ ತಾ.ಶಹಾಪುರ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರವೇ ರಾಜ್ಯ ಉಪಧ್ಯಕ್ಷರಾದ ರಾಜಶೇಖರ್ ಪಾಟೀಲ್ ದೇವದುರ್ಗ ಬಿಜೆಪಿ ಹಿರಿಯ ಮುಖಂಡರಾದ ರಾಜು ಆರ್ ವಾಡೆಕರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ್ ತಾರಪೆಲ್ ಕರವೇ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಅಭಿಷೇಕ್ ಬಾಲಾಜಿ ಮತ್ತು ಕರಾಟೇ ತರಬೇತುದಾರರಾದ ಬಸವರಾಜ್ ಕಾಳಗಿಕರ ಮತ್ತು ದಿನೇಶ್ ನಾಯಕ್ ಡ್ಯಾನ್ಸ್ ಮಾಸ್ಟರ ಹಾಗೂ ಮಾಧ್ಯಮ ವರದಿಗಾರರು ಜೇವರ್ಗಿ ತಾಲೂಕ ಕರಾಟೆ ತರಬೇತುದರಾದ ಜೇಟ್ಟಪ್ಪ ಎಸ್ ಪೂಜಾರಿ ಮತ್ತು ಹವೆನ್ ಫೈಟರ್ ಸಂಸ್ಥೆಯ ಪದಾಧಿಕಾರಿಗಳು ಕ್ರೀಡಾಭಿಮಾನಿಗಳು ಹಾಜರಿದ್ದರು ಸಾಯಂಕಾಲ ಸಮಯದಲ್ಲಿ ಮಹಿಳೆಯರ ಆತ್ಮ ರಕ್ಷಣೆ ಗಾಗಿ ಕರಾಟೆ ಎಂಬ ಜಾಗೃತಿ ಜಾತವನ್ನು ಕೂಡಾ ಈ ಸಮಯದಲ್ಲಿ ಹಮ್ಮಿಕೊಳ್ಳಲಾಗಿತ್ತು
ವರದಿ ಜಟ್ಟಪ್ಪ ಎಸ್ ಪೂಜಾರಿ