2,777 total views
ಮರೆಯಲಾಗದ ಮಾಣಿಕ್ಯ,ಕನ್ನಡಿಗರ ರತ್ನ ಪುನಿತ್ ರಾಜಕುಮಾರ್ ಅವರ 49 ನೇ ವರ್ಷದ ಹುಟ್ಟುಹಬ್ಬ. ನಮ್ಮನ್ನೆಲ್ಲ ಅಗಲಿ ಮೂರು ವರ್ಷಗಳೇ ಕಳೆದು ಹೋದವು. ದೇಶದಲ್ಲಿ ಅನೇಕ ಗಣ್ಯರು ಅಗಲಿದಾಗ ಕಂಬನಿ ಮಿಡಿದು ಸ್ವಲ್ಪ ದಿನ, ತಿಂಗಳಗಳವರೆಗೂ ನೆನದು ಮರೆತುಬಿಡುತ್ತಾರೆ. ಆದರೆ ಕನ್ನಡಿಗರ ಪ್ರೀತಿಯ ಮಗ ಅಪ್ಪು ವಿಷಯದಲ್ಲಿ ಅದು ಹಾಗಾಗಲಿಲ್ಲ. ಅಗಲಿ ಮೂರು ವರ್ಷವಾದರೂ ಇಂದಿಗೂ ಪ್ರತಿದಿನ ಕಂಬನಿ ಮಿಡಿಯುವವರಿದ್ದಾರೆ. ಹಿರೇಮುರಾಳ ಗ್ರಾಮದಲ್ಲಿ ಅಪ್ಪು ಅಭಿಮಾನಿ ಬಳಗದವರು ಚಿಕ್ಕಮಕ್ಕಳಯಿಂದ ಕೇಕ್ ಕಟ್ ಮಾಡುವ ಮೂಲಕ ಪುನೀತ್ ರಾಜಕುಮಾರ ರವರ ಹುಟ್ಟುಹಬ್ಬದ ಆಚರಿಸಿದರು ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಮಾಡಲಾಯಿತು ಈ ಸಂರ್ಭದಲ್ಲಿ ಮಾತನಾಡಿದ ಗಿರೀಶ್ ಗೌಡ ಪಾಟೀಲ್ ಹಾಗೂ ನಿಂಗಣ್ಣಗೌಡ ಬಿರಾದಾರ್ ಮತ್ತು ಅಲ್ಲಿಸಾಬ್ ಸುರಪುರ ಮಾತನಾಡಿದರು ಈ ವೇಳೆ ವಿರೇಶ್ ಬಾಗೇವಾಡಿ ಪಿರಸಾಬ್ ಮುಲ್ಲಾ ಎಚ್.ಎನ್. ಭೋವಿ ಅಯ್ಯಪ್ಪ ತಂಗಡಗಿ ಮುದಕಪ್ಪ ಗೌಡ ಅರಲಡ್ಡಿ ಲೋಕೇಶ್ ಢವಳಗಿ ಇನ್ನೂ ಅಭಿಮಾನಿಗಳು ಇದ್ದರು