2,979 total views
ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ (ರಿ) ಹಾಗೂ ಕಶಾರ್ಪ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿ.14/3/2023 ಹಾಗೂ ದಿ.15/3/2024ರಂದು ನಡೆದ ಕರ್ನಾಟಕ ರಾಜ್ಯ ಮಟ್ಟದ ಪ್ರಥಮ ಕ್ಲಾಸಿಕ್ ಸೀನಿಯರ್ ಹಾಗೂ ಜ್ಯೂನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆ ಯಲ್ಲಿ ಹೆಲ್ತ್ ಪಾಯಿಂಟ್, ಕುಮಟಾದ ಸದಸ್ಯೆ ಕುಮಾರಿ ನಂದಿತಾ ಪಟಗಾರ 76 ಕೆ.ಜಿ.ದೇಹತೂಕದ ಜ್ಯೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿಯ ಪದಕವನ್ನುಗಳಿಸಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನಂದಿತಾ ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗಳಿಸಿ ಬೆಳಗುವಂತಾಗಲಿ ಎಂದು ಅಭಿನಂದನೆ ಹಾರೈಸಿದ್ದಾರೆ