2,902 total views
ಕಾರ್ಕಳ, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಭಯ ಜಿಲ್ಲಾ ಕಾರ್ಕಳವಲಯದ ದ್ವಿತೀಯ ಬಾರಿಗೆ ಸದಸ್ಯರ ಒಗ್ಗೂಡುವಿಕೆಗಾಗಿ ಆಯೋಜಿಸುವಲೀಗ್ ಕ್ರಿಕೆಟ್ ಪಂದ್ಯಾಟವನ್ನು ಉಭಯ ಜಿಲ್ಲಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ಇಂದು ಗಾಂಧಿ ಮೈದಾನದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದವರು ಕಳೆದ ವರ್ಷ ಪ್ರಥಮ ಬಾರಿಗೆ ಪ್ರಥಮ ಬಾರಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಆ ಪಂದ್ಯಾಟದ ಯಶಸ್ವಿ ನ ನಂತರ ನಾವು ಇಂದು ದ್ವಿತೀಯ ವರ್ಷದ ಪಂದ್ಯಾಟಕ್ಕೆ ಚಾಲನೆ ನೀಡು ತಿದ್ದೇವೆ. ನಮ್ಮ ಸಂಘದ ಭವಿಷ್ಯಕ್ಕಾಗಿ ಹಾಗೂ ಐಕ್ಯತೆಗಾಗಿ ಈ ಪಂದ್ಯಾಟವನ್ನು ಆಯೋಜನೆ ಮಾಡಿದ್ದೇವೆ ಎಂದು ಹೇಳಿದರು. ನಂತರ ಮಾತನಾಡಿದ ರೊಟೇರಿಯನ್ ಜಾನ್ ಆರ್ ಡಿ ಸಿಲ್ವಾ ಮಾತನಾಡಿದವರು ಛಾಯಾಗ್ರಾಹಕರು ಬಹು ಒತ್ತಡದ ಕಾರ್ಯವನ್ನು ನಿರ್ವಹಿಸು ವವರು. ಅದರ ಮಧ್ಯೆಯು ಇಂಥ ಪಂದ್ಯಾಟನ್ನು ನಡೆಸುವಂಥದ್ದು ಉತ್ತಮ ಬೆಳವಣಿಗೆ ಆಗಿದೆ. ಈ ಪಂದ್ಯಾಟದಿಂದ ಸಂಘಟನೆ ಇನ್ನು ಉತ್ತಮವಾಗಿ ಬೆಳೆಯುತ್ತದೆ ಎಂದು ಹೇಳಿದರು. ಕಾರ್ಕಳ ವಲಯದ ಅಧ್ಯಕ್ಷರಾದ ಟಿ ವಿ ಸುಶೀಲ್ ಕುಮಾರ್ ಶುಭ ಹಾರೈಸಿದರು. ಪ್ರಸಾದ ಐಸಿರ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗಳು ಸಮರ್ಪಿಸಿದರು. ವೇದಿಕೆಯಲ್ಲಿ ಪ್ರಸನ್ನ ಶೆಟ್ಟಿ, ತಾರಾನಾಥ ಪೂಜಾರಿ ವಿಜಯ ಹನಿ, ಕಾರ್ಯದರ್ಶಿ ಪ್ರಸನ್ನ ಹೆಗಡೆ ಉಪಸ್ಥಿತರಿದ್ದರು.