2,968 total views
ಕಾರವಾರದಲ್ಲಿ ನಡೆದ ಪಡ್ತಿ ಸಮಾಜದ ಪಿಪಿಎಲ್ ಕ್ರಿಕೇಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಮಾಜಿ ಶಾಸಕಿ ಶ್ರೀಮತಿ ರೂಪಾಲಿ ಎಸ್ ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮೊದಲ ಬಾರಿಗೆ ಈ ರೀತಿಯ ಪಂದ್ಯಾವಳಿಯನ್ನು ಆಯೋಜಿಸಿದ್ದು, ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಪಂದ್ಯಾವಳಿ ಆಡಲು ಬಂದ ಎಲ್ಲ ತಂಡಗಳು ಉತ್ತಮವಾಗಿ ಆಟ ಆಡಬೇಕು. ಕೇವಲ ಗೆಲುವಿಗಾಗಿಯೇ ಆಡುವುದಲ್ಲ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ದೇಶದ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಾದವರಿಗೆ ಸನ್ಮಾನಿಸಿದ್ದು ಅತೀವ ಸಂತಸವನ್ನುಂಟು ಮಾಡಿದೆ. ನಾವು ಇಲ್ಲಿ ಬದುಕುವುದಕ್ಕೆ ಗಡಿಯಲ್ಲಿ ಕಾಯುವ ಸೈನಿಕರು ಕಾರಣ. ಅವರು ಶತ್ರುಗಳಿಂದ ರಕ್ಷಿಸುವುದರಿಂದ ನಾವು ಇಲ್ಲಿ ಬದುಕಬಹುದಾಗಿದೆ. ನಮ್ಮ ಸಮಾಜದವರು ಇಷ್ಟು ಜನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದರೆ ನನಗೆ ಹೆಮ್ಮೆ ಎನ್ನಿಸುತ್ತದೆ. ಅಂತಹವರನ್ನು ಇಂದು ಸನ್ಮಾನಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. ನಾಣ್ಯವನ್ನು ಚಿಮ್ಮಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ತಂಡದ ಮಾಲೀಕರಿಗೆ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೂ ಸನ್ಮಾನಿಸಿ ಗೌರವಿಸಲಾಯಿತು.