2,789 total views
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣಾ ಪೂರ್ವ ಭಾವಿಯಾಗಿ ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹ ಕಾರ್ಯದಲ್ಲಿ ಪಕ್ಷದ ವೀಕ್ಷಕರುಗಳಾದ ಶ್ರೀಮತಿ ರೂಪಾಲಿ ಎಸ್.ನಾಯ್ಕ ಹಾಗೂ ಶ್ರೀ ಯಶಪಾಲ್ ಸುವರ್ಣ ಪಾಲ್ಗೊಂಡು ಮಾತನಾಡಿ, ಅಲ್ಲಿನ ಪಕ್ಷದ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ, ಶಾಸಕರಾದ ಶ್ರೀ ಅರಗ ಜ್ಞಾನೇಂದ್ರ, ಉಡುಪಿ ಶಾಸಕ ಶ್ರೀ ಯಶಪಾಲ್ ಸುವರ್ಣ, ವಿಧಾನ ಪರಿಷತ್ ಶಾಸಕ ಶ್ರೀ ರುದ್ರೇಶ, ಪ್ರಭಾರಿ ಶ್ರೀ ಗಿರೀಶ ಪಟೇಲ್, ಜಿಲ್ಲಾ ಅಧ್ಯಕ್ಷ ಶ್ರೀ ಮೇಘರಾಜ್, ರಾಜ್ಯ ಪ್ರೋಕೋಷ್ಠಗಳ ಸಂಯೋಜಕರಾದ ಶ್ರೀ ದತ್ತಾತ್ರೇಯ, ಮೋಹನ ಭಂಡಾರಿ, ಪಕ್ಷದ ವಿವಿಧ ಪದಾಧಿಕಾರಿಗಳು ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.