2,756 total views
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಕಾರ್ಯಕ್ರಮ.
ದಿನಾಂಕ: 19-02-2024ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ಪಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್- ಹರಪನಹಳ್ಳಿ ಕಚೇರಿ ಹಾಗೂ ಸೇವಾ ಮೊಬ್ ಸಹ ಭಾಗಿತ್ವದಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಗ್ರಾಮಸ್ತರಿಗೆ ಬಿ.ಪಿ, ಶುಗರ್ ಹಾಗು ರಕ್ತ ತಪಾಸಣೆ ಮಾಡಿ, ಉಚಿತ ಮಾತ್ರೆಗಳನ್ನು ನೀಡಲಾಯಿತು, ಅಲ್ಲದೆ ರಕ್ತಹೀನತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ 150ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಈ ಶಿಬಿರವನ್ನು ಆಯೋಜಿಸಿದ್ದ ಗ್ರಾಮದ ಗ್ರಾಮದ ಗ್ರಾಮಸ್ಥರು, ಪಿನ್ ಕೇರ್ ಫೈನಾನ್ಸ್ ಬ್ಯಾಂಕಿನ ಮುಖ್ಯಸ್ಥರಾದ ಶ್ರೀ ಭೂಪತಿ ರೆಡ್ಡಿ, (ZH) ಶ್ರೀ ಸುರೇಶ್ ಬಾಬು (DM), ಪರಮೇಶ(DM-CSR), ಶ್ರೀ ರಾಜಶೇಖರಯ್ಯ RM, ರವಿಕುಮಾರ್ (BM), ಸಂತೋಷ್ ಬ್ಯಾಂಕ್ ಸಿಬ್ಬಂದಿಗಳಾದ ಸಂತೋಷ್ ಮತ್ತು ಸೋಮಪ್ಪ ಹಾಗೂ Dr. ವಿಜಯ್ ಹಾಗೂ ಸೇವಾ ಮೊಬ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಗ್ರಾಮದ ಎಲ್ಲ ಸದಸ್ಯರು ಭಾಗವಹಿಸಿದ್ದರು.
ವರದಿ ಭರ್ಮಪ್ಪ ಮಾಗಳದ