2,781 total views
ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೋಕ್ ನ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ನಾಗರಾಜ್ NJರವರು ಹಬ್ಬನಘಟ್ಟ ಗ್ರಾಮ ಪಂಚಾಯಿತಿ pdo ಆದ ಶ್ರೀ ಕುಮಾರಸ್ವಾಮಿರವರು ಇದೇ ಗ್ರಾಮ ಪಂಚಾಯಿತಿಯ ಕಾಮಗಾರಿಗಳ ಹಗರಣಗಳಲ್ಲಿ ಬಾಗಿಯಾಗಿರುವುದು & ಇದಕ್ಕೆ ಸಂಬಂಧಿಸಿದಂತೆ ಮಾನ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳು, ಜಿಲ್ಲಾ ಪಂಚಾಯಿತಿ, ಹಾಸನ ರವರು ಸದರಿ ಪಂಚಾಯಿತಿ PDO ಅಧಿಕಾರಿಯಿಂದ 1.32 ಕೋಟಿಗಳನ್ನು ವಸೂಲಿ ಮಾಡುವಂತೆ ನೋಟೀಸ್ ಜಾರಿ ಮಾಡಿದ್ದರೂ ಸಹ ಇವರನ್ನು ಮೇಲಾಧಿಕಾರಿಗಳ ಅನುಮತಿಯಿಲ್ಲದೇ, ಹಬ್ಬನಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನಾಗಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿರುವುದು ನಿಯಮಬಾಹಿರವಾಗಿದ್ದು, ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿದ್ದು,ಈ ವಿಚಾರವಾಗಿ ಶ್ರೀ KR ಜಗದೀಶ್, ಸಮಾಜ ಸೇವಕರು, ವಿಜಯನಗರ, ಬೆಂಗಳೂರು ರವರು ಸಲ್ಲಿಸಿದ ದೂರಿನ ಮೇರೆಗೆ ಮಾನ್ಯ, ಆಯುಕ್ತರು, ಪಂಚಾಯತ್ ರಾಜ್ ಆಯುಕ್ತಾಲಯವು ಶ್ರೀ ನಾಗರಾಜ್ NJ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೋಕ್ ಪಂಚಾಯಿತಿ ಅರಸೀಕೆರೆ ರವರು ಓರ್ವ ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯಾಗಿದ್ದು, ಹಬ್ಬನಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಾರೀ ಭ್ರಷ್ಟಾಚಾರ & ಅವ್ಯವಹಾರ ಮಾಡಿರುವ PDO ಶ್ರೀ ಕುಮಾರಸ್ವಾಮಿರವರನ್ನು ಪುನಃ ಅದೇ ಗ್ರಾಮ ಪಂಚಾಯಿತಿಗೆ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಲು ದಿನಾಂಕ -11-12-2023 ರಂದು ಆದ್ದೇಶಿಸಿ, ನಂತರ ಈ ಆದೇಶವನ್ನು ದಿನಾಂಕ -16-12-2023 ರ ರಂದು ಅಧಿಕೃತ ಜ್ಞಾಪನದ ಮುಖೆನ ರದ್ದುಪಡಿಸಲಾಗಿರುತ್ತದೆ. ಸರ್ಕಾರದ ನಿಯಮಾನುಸಾರ ಕರ್ತವ್ಯ ನಿರ್ವಹಿಸದೇ ಮೇಲಾಧಿಕಾರಿ /ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೇ PDO ಅಧಿಕಾರಿಯನ್ನು ನಿಯಮ ಭಾಹೀರವಾಗಿ ಪ್ರಭಾರದಲ್ಲಿರಿಸಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ
ಕಂಡು ಬಂದಿರುವುದರಿಂದ ಸದರಿ ಅಧಿಕಾರಿಯವರ ವಿರುದ್ಧದ ಶಿಸ್ತು ಕ್ರಮವನ್ನು ಬಾಕಿಯಿರಿಸಿ ಕರ್ನಾಟಕ ನಾಗರಿಕ ಸೇವಾ (ವ. ನಿ &ಮೇ )ನಿಯಮಗಳು 1957ರ ನಿಯಮ 10(1)(ಡಿ ) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲು ಸರ್ಕಾರವು ತೀರ್ಮಾನಿಸಿದ್ದು, ಅದರಂತೆ
ಸರ್ಕಾರದ ಆದೇಶ ಸಂಖ್ಯೆ : ಗ್ರಾ ಅಪ 11ವಿಸೇಬಿ 2024, ಬೆಂಗಳೂರು, ದಿನಾಂಕ :14.02.2024.ರ ಆದೇಶದಲ್ಲಿ, ಶ್ರೀ ನಾಗರಾಜ್ N J ರವರನ್ನು ಕರ್ನಾಟಕ ನಾಗರಿಕ ಸೇವಾ (ವ, ನಿ &ಮೇ ) ನಿಯಮಗಳು 1957 ರ ನಿಯಮ 10(1)( ಡಿ ) ರನ್ವಯ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ & ಸದರಿಯವರ ಹುದ್ದೆಯ ಹಕ್ಕನ್ನು (ಲೀನ್ ) ಸಹಾಯಕ ಕಾರ್ಯದರ್ಶಿ, ಜಿಲ್ಲಾಪಂಚಾಯಿತಿ, ಚಿಕ್ಕಮಗಳೂರು ಇಲ್ಲಿನ ಹುದ್ದೆಗೆ ವರ್ಗಾಯಿಸಿ ಆದೇಶಿಸಿ, ಅಮಾನತ್ತುಗೊಂಡಿರುವ ಅಧಿಕಾರಿಯವರು ಅಮಾನತ್ತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಎಂದು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಶ್ರೀ ಬಾಲಪ್ಪ, ಸರ್ಕಾರದ ಅಧೀನ ಕಾರ್ಯದರ್ಶಿ ((ಸೇ -ಬಿ ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರವರು ಲಿಖಿತವಾಗಿ ಆದ್ದೇಶಿಸಿದ್ದಾರೆ.ಹಾಗೂ ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರವು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಅನುದಾನದ ರೂಪದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಹಣ ಬಿಡುಗಡೆಯನ್ನು ಮಾಡಿದ್ದರೆ, ಈ ಅನುದಾನದ ಹಣವನ್ನು ಗ್ರಾಮೀಣಾಭೀವೃದ್ಧಿಯ ಹೆಸರಲ್ಲಿ ಲೂಟಿ ಹೊಡೆದು ಬಾರೀ ಭ್ರಷ್ಟಾಚಾರ & ಅವ್ಯವಹಾರದಲ್ಲಿ ತೊಡಗಿದ್ದ PDO ಶ್ರೀ ಕುಮಾರಸ್ವಾಮಿಯವರನ್ನು ಕೂಡ ಸೇವೆಯಿಂದ ವಜಾಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ವರದಿ : ಮಾಡಾಳ್ ರವಿ.