2,610 total views
ಗಂಗಾವತಿ:- ಇತ್ತೀಚಿಗೆ ಮೈಸೂರು ಜಿಲ್ಲೆಯ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಾಲೆ ಶಿಕ್ಷಣ ಇಲಾಖೆ ಹಾಗೂ ವಿಜಯ ವಿಠಲ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗಂಗಾವತಿಯ ಬೇತಲ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉತ್ತಮ ಪ್ರದರ್ಶನ ತೋರಿದ್ದಾರೆ. ಕರಾಟೆ ಕುಮಿಟೆ (ಫೈಟ್) ವಿಭಾಗದಲ್ಲಿ ಪೃಥ್ವಿರಾಜ್ +80 KG ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಐಶ್ವರ್ಯ -48 KG, ಸಾವಿತ್ರಿ- 56 KG, ಅಜಯ್ ಕುಮಾರ್ – 54 KG, ಬಸವರಾಜ್ – 70KG, ಭವಾನಿ +68 KG ಭಾಗವಹಿಸಿ ಪ್ರದರ್ಶನವನ್ನು ತೋರಿ ರಾಜ್ಯಮಟ್ಟದ ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗೆ ಅಭಿನಂದಿಸಿ ಮತ್ತು ಭಾಗವಹಿಸಿದ ಕ್ರೀಡಾಪಟುಗಳಿಗೆ ಸೋಲೇ ಗೆಲುವಿನ ಮೆಟ್ಟಿಲು ಎನ್ನುವ ನಾನ್ನುಡಿಯಂತೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭ್ಯಾಸವನ್ನು ಮಾಡುವುದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಬೇಕು ಎಂದು ಕಾಲೇಜಿನ ಕಾರ್ಯದರ್ಶಿಯಾದ ಬ್ಯಾಬೇಜ್ ಮಿಲ್ಟನ್ ರವರು ತಿಳಿಸಿದ್ದಾರೆ . ಈ ಸಂದರ್ಭದಲ್ಲಿ BCFA ಆಡಳಿತ ಅಧಿಕಾರಿಗಳಾದ ಹೇಮಾ ಸುಧಾಕರ್ ಅಧ್ಯಕ್ಷರಾದ ಬಿಜಿಲಿಯಲ್ ಜೋಸೆಫ್ ರಾಜು, ಕಾರ್ಯದರ್ಶಿಯಾದ ಬ್ಯಾಬೇಜ್ ಮಿಲ್ಟನ್, ಸದಸ್ಯರಾದ ಸುಜಾತ ರಾಜು, ಕಾಲೇಜಿನ ಸಹಪ್ರಚಾರರಾದ ಹನುಮಂತಪ್ಪ. ಎಚ್. ಪ್ರಾಥಮಿಕ ಮುಖ್ಯೋಪಾಧ್ಯಾಯರಾದ ಪುಷ್ಪಾವತಿ, ತರಬೇತುದಾರರಾದ ಬಾಬುಸಾಬ್ ಮತ್ತು ಇನ್ನಿತರರಿದ್ದರು