2,613 total views
ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆಗಳ ಸಭೆ ಸಬ್ ಇನ್ಸ್ಪೆಕ್ಟರ್ ರಾಜೇಶ್ವರಿ ರವರ ನೇತೃತ್ವದಲ್ಲಿ ಸಭೆ ನಡೆಯಿತು. ನಂತರ ದಿಬ್ಬೂರಹಳ್ಳಿ ಗ್ರಾಮದ ದಲಿತ ಮುಖಂಡ K D S S ಮಂಜುನಾಥ ರವರು ಮಾತನಾಡಿ ನಮ್ಮ ಸಭೆಗೆ ಮಾಹಿತಿಯನ್ನು ತಿಳಿಸುವುದಿಲ್ಲ ಒಂದು ಸಭೆಗೆ ತಿಳಿಸಿದರೆ ಮಾತೊಂದು ಸಭೆಗೆ ತಿಳಿಸುವುದಿಲ್ಲ ಮತ್ತೆ ಇಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳಿಗೆ ಯಾವ ರೀತಿ ಕ್ರಮ ಕೈಗೊಂಡಿದ್ದೀರಾ ಎಂದು ಅಕ್ರೊಶ ವ್ಯಕ್ತಪಡಿಸಿದರು. ಸರ್ಕಾರದ ಸುತ್ತೋಲೆಯಂತೆ ಪ್ರತಿ ತಿಂಗಳ ಮೂರನೇ ಭಾನುವಾರದಂದು ಆದೇಶದಂತೆ ದಲಿತರ ಕುಂದು ಕೊರತೆಗಳ ಸಭೆಯನ್ನು ನಡೆಸಬೇಕು ಒಂದು ಭಾನುವಾರ ನಡೆಸಿದರೆ ಇನ್ನೊಂದು ಭಾನುವಾರ ನಡೆಸಿಲ್ಲ ಮತ್ತು ದಲಿತ ಮುಖಂಡರಿಗೆ ಯಾವುದೇ ಮಾಹಿತಿ ತಿಳಿಸುವುದಿಲ್ಲ ಹಾಗೂ ಠಾಣಾಧಿಕಾರಿಗಳು ದಲಿತರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಜೀತಾ ವಿಮುಕ್ತಿ ಜಿವೀಕ ಸಂಘದ ತಾಲ್ಲೂಕು ಸಂಚಾಲಕರಾದ ಶ್ರೀನಿವಾಸ್ ರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ . ಈ ಸಂದರ್ಭದಲ್ಲಿ ಪಿಎಸ್ಐ ಎ.ನಾಗರಾಜು,K D S S ಜಿಲ್ಲಾ ಅಧ್ಯಕ್ಷರು ಗೊರ್ಲಪ್ಪ, ಚಿಕ್ಕನರಸಿಂಹಯ್ಯ, ಜಾಂಬವ ಯುವಸೇನಾ ತಾಲೂಕ ಅಧ್ಯಕ್ಷರು ಶ್ರೀನಿವಾಸ, ಇನ್ನೂ ಹಲವಾರು ದಲಿತ ಮುಖಂಡರು ಹಾಜರಿದ್ದರು…
ವರದಿ.ವೆಂಕಟೇಶ್ ಸಿ