3,548 total views
ಶಿರಸಿ: ನಗರದ ಸಾಮ್ರಾಟದ ವಿನಾಯಕ ಸಭಾಂಗಣದಲ್ಲಿ ಶನಿವಾರ ಉತ್ತರಕನ್ನಡ ಜಿಲ್ಲಾ ಶಿಕ್ಷಕಿಯರ ನಿರಂತರ ಸಹಾಯವಾಣಿ ಹಾಗೂ ಅನಿಷ್ ಡಿಸೈನರ್ ಬುಟೀಕ್ ವತಿಯಿಂದ ಹಮ್ಮಿಕೊಂಡ ಮಹಿಳೆಯರಿಗೆ ಫ್ಯಾಶನ್ ಡಿಸೈನರ್ ಒಂದು ದಿನದ ಉಚಿತ ಕಾರ್ಯಾಗಾರವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಸ್ವಾಲಂಬಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಎಲ್ಲರಲ್ಲಿಯೂ ಇದೆ. ವಿಶ್ವನಾಥ ಗೌಡ ಅವರು ನೋಂದ ಕುಟುಂಬಕ್ಕೆ ಆರ್ಥಿಕ ಶಕ್ತಿ ನೀಡಬೇಕೆಂಬ ಉದ್ದೇಶದಿಂದ ಅವರು ಏರ್ಪಡಿಸುತ್ತಿರುವ ಕಾರ್ಯಕ್ರಮ ಉಳಿದವರಿಗೆ ಮಾದರಿ ಎಂದರು.
ಸ್ವಾವಲಂಬಿ ಜೀವನ ನಡೆಸಲು ಇನ್ನೂ ಸರಿಯಾದ ಅನುಕೂಲವಾಗಿಲ್ಲ. ಆದರೆ ಅದು ಸಾಧ್ಯವಾಗಿಸುವ ಕಾರ್ಯವಾಗಬೇಕು. ಆಸಕ್ತ ವಿಷಯದ ಮೂಲಕ ಕಲೆ ನಡೆದರೆ ಆರ್ಥಿಕ ಭದ್ರತೆ ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡುತ್ತಿದ್ದು, ಮಹಿಳೆಯರು ಅದರ ಅದುಪಯೋಗ ಪಡೆದುಕೊಳ್ಳಬೇಕು. ಸರಿಯಾದ ಮಾರ್ಗದರ್ಶನ ಅವಕಾಶ ಅವಶ್ಯ. ಶಿಕ್ಷಣಕ್ಕಾಗಿ ಎಲ್ಲರೂ ಶಿಕ್ಷಣ ಪಡೆಯಬೇಕು ಉತ್ತಮ ಸಂಸ್ಕಾರವಿದ್ದಾಗ ಮಾತ್ರ ಬೆಳವಣಿಗೆ ಸಾಧ್ಯ. ಉತ್ತಮ ವ್ಯಕ್ತಿತ್ವ ಅವಶ್ಯ. ಇದು ಇದ್ದಾಗ ಎಲ್ಲವೂ ಉತ್ತಮವಾಗಲು ಸಾಧ್ಯ ಎಂದರು. ಪತ್ರಕರ್ತೆ ವಿನುತಾ ಹೆಗಡೆ ಮಾತನಾಡಿ, ಕೈಗಾರಿಕೆಯು ಆರ್ಥಿಕತೆಯ ೨ ನೆಯ ಭಾಗವಾಗಿ ಕಾರ್ಯನಿರ್ವಹಿಸುತ್ತದೆ. ಬಟ್ಟೆ ಡಿಸೈನಿಂಗ್ ಗೆ ಆಧುನಿಕತೆ ಸ್ಪರ್ಶ ನೀಡಿದಾಗ, ಹೆಚ್ಚು ಬೇಡಿಕೆ ಸಿಗುತ್ತದೆ. ಮಹಿಳೆಯರು ಕಾರ್ಯಾಗಾರಗಳನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕ ಸ್ವಾವಲಂಬಿಯಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಉಪನ್ಯಾಸಕ ಗಣೇಶ ಹೆಗಡೆ, ಪ್ರಕಾಶ ಪಾಲಂಕರ, ಉತ್ತರಕನ್ನಡ ಜಿಲ್ಲಾ ಶಿಕ್ಷಕಿಯರ ನಿರಂತರ ಸಹಾಯವಾಣಿ ಅಧ್ಯಕ್ಷ ವಿಶ್ವನಾಥ ಗೌಡ, ಸರೋಜಾ ಮಡಗಾಂವಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವೈಷ್ಣವಿ ಪ್ರಾಸ್ತಾವಿಕ ಮಾತನಾಡಿದರು. ದಿವ್ಯಾ ಶೇಟ್ ಪ್ರಾರ್ಥಿಸಿದರು.