3,617 total views
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಪ್ರಾಚೀನ ಪುರಾತನ ಶೈಲಿಯ ವಿಶಿಷ್ಟ ವಾಸ್ತು ಶಿಲ್ಪ ಕಲೆಯ ಕೇತ್ತನೆಯಿಂದ ಕೂಡಿದ ಐತಿಹಾಸಿಕ ಪೌರಾಣಿಕ ಹಿನ್ನೆಲೆಯುಳ್ಳ ಈಶ್ವರ ಲಿಂಗ ಮಂದಿರ ಬಿಳವಾರ ಗ್ರಾಮದಲ್ಲಿ ಇರುವುದು ವಿಶೇಷವಾಗಿದ್ದು ಅಲ್ಲದೆ ಇದುವರೆಗೆ ಈ ದೇವಸ್ಥಾನದ ಬಗ್ಗೆ ಸಂಶೋಧನೆಯಾಗಲಿ ಅಥವಾ ಪುನರ ನಿರ್ಮಾಣ ಕಾರ್ಯವಾಗಲಿ ಅಥವಾ ದೇವಸ್ಥಾನ ಉಳಿವಿನ ಬಗ್ಗೆ ಪ್ರವಾಸೋದ್ಯಮ ಇಲಾಖೆಯವರು ಅಥವಾ ಪ್ರಾಚ್ಯ ವಸ್ತು ಇಲಾಖೆಯವರು ಗಮನ ಕೊಡದಿರುವುದು ವಿಪರ್ಯಾಸವೇ ಸರಿ. ಎಂದು ಕನಕ ಕಾರ್ಮಿಕ ಕಲ್ಯಾಣ ಸಂಘ ಯುವ ಘಟಕದ ರಾಜ್ಯಾಧ್ಯಕ್ಷರಾದ ಮಲ್ಲಣ್ಣ ಎಂ ಪೂಜಾರಿಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ .
ಅಷ್ಟೇ ಅಲ್ಲದೆ ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಬೇಟಿಕೊಟ್ಟು ಮುಂದಿನ ಯುವ ಪೀಳಿಗೆಗಾಗಿ ಇಂಥಹ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸ ಈಗಿನ ಆಳುವ ಸರ್ಕಾರ ಮಾಡಬೇಕಿದೆ. ಅಲ್ಲದೆ ತಾಲೂಕಿನ ಜನಪ್ರತಿನಿಧಿ ಗಳು ಹಾಗೂ ಯಡ್ರಾಮಿ ತಾಲೂಕಿನ ಹಾಗೂ ಜೇವರ್ಗಿ ತಾಲೂಕಿನ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸುವರೊ ಇಲ್ಲವೋ ಕಾದುನೋಡಬೇಕಿದೆ ಇದುವರೆಗೂ ಈ ಐತಿಹಾಸಿಕ ದೇವಸ್ಥಾನದ ಬಗ್ಗೆ ಗಮನ ಹರಿಸದಿರುವುದು ದುರ್ದೈವದ ಸಂಗತಿ ಎಂದು ಕನಕ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರು ಬೀರೇಶ್ ಎಂ ಪೂಜಾರಿ ಕಳವಳ ವ್ಯಕ್ತಪಡಿಸಿದ್ದಾರೆ .ಇನ್ನು ಮುಂದಾದರು ಇಂತಹ ಐತಿಹಾಸಿಕ ಸ್ಮಾರಕಗಳ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಮಲ್ಲಣ್ಣ ಎಂ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ