3,288 total views
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾಪೂರ್ಯನಾಯಕ್ ರವರು ಕ್ಷೇತ್ರದ ಮಲೆನಾಡು ಭಾಗದಲ್ಲಿ ಹೆಚ್ಚಾದ ಆನೆಗಳ ಹಾವಳಿ ವೀಕ್ಷಣೆಗೆ ಬಂದಿದ್ದು ಮಂಜರಿಕೊಪ್ಪ. ಮಲೆ ಶಂಕರ. ಕೂಡಿ ಎರೆ ಬೀಸು. ಬುತ್ತಿ ಹಳ್ಳ ಸಂಪಿಗೆ ಹಳ್ಳ. ಸಿರಿಗೆರೆ. ಕಲ್ಲು ಕೊಪ್ಪ ಈ ಭಾಗಗಳಲ್ಲಿ ಆನೆಗಳು ಪ್ರತಿದಿನ ಸಂಜೆ ರೈತರು ಬೀಕರ ಬರಗಾಲದಲ್ಲಿಯೂ ಸಹ ಕಷ್ಟಪಟ್ಟು ಬೆಳೆದ ಜೋಳ ಬತ್ತ ಅಡಿಕೆ ಬಾಳೆ ಎಲ್ಲಾ ರೀತಿಯ ಬೆಳೆಗಳನ್ನು ತಿಂದು ತುಳಿದು ಹಾಳು ಮಾಡುತ್ತಿದ್ದು ಅರಣ್ಯ ಇಲಾಖೆಯವರು ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಶಾಸಕರು ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಆನೆಗಳು ಹಾವಳಿ ಮಾಡಿದ ರೈತರ ಬೆಳೆಗಳನ್ನು ವೀಕ್ಷಿಸಿ ಇದೇ ಗುರುವಾರ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಆಯಾಯ ಭಾಗದ ಮುಖಂಡರುಗಳು ಕಲ್ಲು ಕೊಪ್ಪ ನಾರಾಯಣ ಗೌಡರು . ಆಯನೂರಿನ ಬಸಪ್ಪ ಗೌಡ್ರು. ಕೆ ಸಿ ನಾಗರಾಜ್. ತಮ್ಮಡಿಹಳ್ಳಿ ಪಂಚಾಯಿತಿ ಅಧ್ಯಕ್ಷರಾದ ಪ್ರಕಾಶ್. ಇದ್ದರು.
ವರದಿ: ರಾಘವೇಂದ್ರ ಸಂಪೊಡಿ