3,241 total views
ಕೃಷ್ಣ ನದಿಯ ಬಲದಂಡೆ ವ್ಯಾಪ್ತಿಯ ರೈತರ ಬೆಳೆದಿದ್ದ ಭತ್ತವು ಕಟ್ಟಾವಿಗೆ ಬಂದಿದ್ದು ಉತ್ತಮ ತರದ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಮಳೆ ಕೊರತೆಯಿಂದಾಗಿ ಜುಲೈ -ಆಗಸ್ಟಿನಲ್ಲಿ ನಾಟಿ ಮಾಡಿದ್ದು ಮಳೆ , ವಿದ್ಯುತ್ ಕೊರತೆ ಮಧ್ಯೆಯು ರೈತರು ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ಪಸಲು ಬೆಳೆಸಿದ್ದು ಕೈಗೆ ಬಂದಿದೆ. ಇಂತಹ ಬರದಂತ ತತ್ತರಿಸಿದ ರೈತರಿಗೆ ಯಂತ್ರಗಳ ಬಾಡಿಗೆ ದುಬಾರಿಯಾಗಿದೆ ಭತ್ತ ಕಟಾವಿಗೆ ಪ್ರತಿ ಗಂಟೆಗೆ 2500 ರಿಂದ 3200 ರೂ ತನಕ ಏರಿಕೆಯಾಗಿದ್ದು, ಇದರ ಮಧ್ಯೆ ದಲ್ಲಾಳಿಗಳಿಗೂ ಹಣಕೊಟ್ಟರೆ ಮಾತ್ರ ಯಂತ್ರ ಕಳಿಸುತ್ತಾರೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ ಆದ ಕಾರಣ ತಾವುಗಳು ಒಂದು ನಿರ್ದಿಷ್ಟವಾದ ದರವನ್ನು ನಿಗದಿಪಡಿಸಿ. ರೈತರಿಂದ ಹೆಚ್ಚು ಹಣ ವಸೂಲಿ ಮಾಡುವವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಅಧ್ಯಕ್ಷರಾದ ಸೊಪಣ್ಣ ಹಳಿಸಗರವರು ಮಾನ್ಯ ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಶೋಕ್ ಡಿಚ್ಚಿ ತಳವಾರ ಜಿಲ್ಲಾ ಉಪಾಧ್ಯಕ್ಷರು, ಬಸ್ಸು ರತ್ತಾಳ ತಾಲೂಕು ಗೌರವಾಧ್ಯಕ್ಷರು, ವೆಂಕಟೇಶ್ ಆಲ್ದಾಳ ತಾಲೂಕ ಕಾರ್ಯಧ್ಯಕ್ಷರು, ಬಸವರಾಜ್ ಜಲದುರ್ಗ, ಉಪಸ್ಥಿತರಿದ್ದರು.
ವರದಿ ಕಾಸಿಂಸಾಬ್