3,284 total views
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿ. ಪುರುಷ ಮತ್ತು ಮಹಿಳೆಯರ ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಪಂದಾವಳಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿಯಲ್ಲಿ ದಿನಾಂಕ 17.11.2023 ಮತ್ತು 18.11.2023ರಂದು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ ಪ್ರಥಮ ಸ್ಥಾನ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ ದ್ವಿತೀಯ ಸ್ಥಾನ, ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ತೃತೀಯ ಸ್ಥಾನ, ಶ್ರೀ ಶಿವಲಿಂಗೇಶ್ವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಗಿರಿ ನಾಲ್ಕನೇ ಸ್ಥಾನವನ್ನು ಪಡೆದು ಕಾಲೇಜಿಗೆ ಮತ್ತು ವಿಶ್ವ ವಿದ್ಯಾನಿಲಯಕ್ಕೆ ಕೀರ್ತಿ ತಂದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಜಿ ಧನಂಜಯ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು. ಈ ಸಮಾರಂಭದಲ್ಲಿ ಪ್ರೊ. ಡಿ ಸಿ ಪಾಟೀಲ್, ಗ್ರಂಥಪಾಲಕರಾದ ಪ್ರೊ. ಎಂ ನಾಗರಾಜ ನಾಯ್ಕ ಕ್ರೀಡಾ ಆಯೋಜಕರಾದ ಡಾ. ಹರೀಶ ಪಿ ಎಸ್, ಬೆಳ್ಳುಳ್ಳಿ ಕೊಟ್ರೇಶ, ಹೆಚ್ ವಿ ಗೀತಾ, ಅಮೂಲ್ಯ ಆರ್ ಹೆಚ್, ಡಾ. ಮಂಜುನಾಥ ಗುರು ವಿ ಜಿ ದಾವಣಗೆರೆ ವಿಶ್ವವಿದ್ಯಾನಿಲಯ ಕ್ರೀಡಾಧಿಕಾರಿಗಳಾದ ಡಾ. ವೀರಪ್ಪ ಬಿ ಹೆಚ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ಚಂದ್ರಶೇಖರ್ ಸಿ, ಡಾ. ರೇಖಾ ಎಂ ಆರ್, ಗಿರೀಶ್ ಎಂ ಎಸ್, ಬಾಲಚಂದ್ರಣ್ಣ ಬಿ. ಆರ್. ಕಲ್ಲೇಶಪ್ಪ ಹರೀಶ್ ಕೆ ಎಂ , ತೀರ್ಪುಗಾರರಾದ ಆಶಿಕ್ ಮತ್ತು ಕಲೀಲ್, ಇಬ್ರಾಹಿಂ ಜಾಫರ್ ಮುಖ್ಯ ಮುಖ್ಯ ತೀರ್ಪುಗಾರರಾದ ಪರಮೇಶ್ವರಪ್ಪ ಮತ್ತು ನಮ್ಮ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು
ವರದಿ ಭರ್ಮಪ್ಪ ಮಾಗಳದ