3,290 total views
ರನ್ನ ಬೆಳಗಲಿ:- ಪಟ್ಟಣದ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ರನ್ನ ಬೆಳಗಲಿಯಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಘವೇಂದ್ರ ನೀಲಣ್ಣವರ ರವರು ಸರ್ಕಾರದ ಮಹತ್ವದ ಕಾರ್ಯಕ್ರಮವಾದ ಸಂಭ್ರಮ ಶನಿವಾರವು ವಿದ್ಯಾರ್ಥಿಗಳನ್ನು ಶಾಲೆಗೆ ಆಕರ್ಷಿಸುವ ಕಾರ್ಯಕ್ರಮವಾಗಿದೆ. ಪ್ರತಿ ಮಕ್ಕಳಲ್ಲಿ ಅತ್ಯುತ್ತಮವಾದ ಪ್ರತಿಭೆಗಳು ಅಡಕವಾಗಿರುತ್ತವೆ. ಆ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಕಾರ್ಯಕ್ರಮವೇ ಈ ಸಂಭ್ರಮ ಶನಿವಾರವಾಗಿದೆ. ಹಾಗೆ ಪ್ರತಿಭೆಗಳ ಅನುವೇಷಣೆಗೆ ಮೀಸಲಾಗಲಿ ಸಂಭ್ರಮದ ಶನಿವಾರ. ಗುರುವಿಗೆ ವಿನಮ್ರರರಾಗಿ ವಿದ್ಯೆ ಕಲಿತು ವಿದ್ಯೆಯಲ್ಲಿ ಸಾಧನೆಗೈದರೆ ಅದೇ ಶಾಶ್ವತವಾದ ಸಾಧನೆ. ನಿಮ್ಮ ಅಂತರಾಳದಳಲ್ಲಿ ಪುಟ್ಟದ್ದೆಳುವ ಹೊಸ ಹೊಸ ವಿಚಾರಗಳನ್ನು ಶಿಕ್ಷಕರ ಮತ್ತು ಕುಟುಂಬದ ಜೊತೆಗೆ ಅವುಗಳನ್ನು ಕಾರ್ಯರೂಪಕ್ಕೆ ತಂದರೆ ಅದೂ ಕೂಡಾ ಸಾಧನೆ ಯಾಗುವುದು.ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ. ಸಾಧನೆಗೆ ನಿರಂತರ ಪರಿಶ್ರಮ ಮತ್ತು ತ್ಯಾಗ ಜೀವನವೇ ಮಾರ್ಗದಾರಿ ಎಂದು ಹೇಳಿದರು. ಆರ್. ಎಚ್. ಕಂಬಾರ ಶಾಲಾ ಮುಖ್ಯೋಪಾಧ್ಯರು ಅಧ್ಯಕ್ಷತೆ ವಹಿಸಿ, ಮನೇಲಿ ಬಳಕೆಯಾಗಿ ಉಳಿಯುವ ನಿರುಪಯುಕ್ತ ವಸ್ತುಗಳಿಂದ ಮಾಡುವ ಉಪಯುಕ್ತ ಕಲಾ ಕೃತಿಗಳೇ ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಇಂದು ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಸಂಭ್ರಮ ಶನಿವಾರದ ನಿಮಿತ್ಯವಾಗಿ ಮಹಾಂತೇಶ ಲೋಕಾಪುರ ನಮ್ಮ ಚಿತ್ರಕಲಾ ಶಿಕ್ಷಕರಾದ ಬಾಲಕೃಷ್ಣ ಚೋಪಡೆ ರವರ ಮಾರ್ಗದರ್ಶನದಲ್ಲಿ ಅತಿ ಸುಂದರ ಕಲಾಕೃತಿಗಳನ್ನು ರಚಿಸುವ ಬಗ್ಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿದ್ದು ಸಂತಸವಾಗಿದೆ ಎಂದು ತಿಳಿಸಿದರು. ಪ್ರಾತ್ಯಕ್ಷಿಕೆ ನೀಡಿದ ಹಳೆ ವಿದ್ಯಾರ್ಥಿಗೆ ಮುಖ್ಯ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಕುಮಾರ ಮಹಾಂತೇಶ ಲೋಕಾಪುರ ಕರಕುಶಲ ವಸ್ತುಗಳ ಪ್ರಾತ್ಯಕ್ಷಿಕೆ ಮತ್ತು ಕಾರ್ಯಗಾರವನ್ನು ನೀಡಿದರು. ಎಂ ಎಸ್ ಕಲ್ಯಾಣಿ, ಎಂ ವಿ ಹೊಸೂರ, ಎಸ್ ಎಂ ಮೇಗಾಡಿ, ಎಸ್ ಕೆ ಕಾಡದೇವರ, ಶೇಖರ ಬಾಗೆವಾಡಿ, ಎಸ್. ಎಂ ನೀಲನ್ನವರ. ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕರಾದ ಬಾಲಕೃಷ್ಣ ಚೋಪಡೆ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಎಂ.ಡಿ ಎಳೆಮ್ಮಿ ವಂದಿಸಿದರು.