2,900 total views
ಕಲಬುರಗಿ:- ರಾಜ್ಯ ಬಿಜೆಪಿ ಸಾರಥ್ಯವನ್ನು ಬಿ.ವೈ ವಿಜಯೇಂದ್ರ ಅಣ್ಣ ಅವರಿಗೆ ನೀಡಿರುವುದನ್ನು ಚಿತ್ತಾಪುರ ತಾಲೂಕಿನ ಬಿಜೆಪಿ ಮುಖಂಡ ಡಾ. ಮಲ್ಲಿಕಾರ್ಜುನ ಬಿ. ಹಡಪದ ಅವರು ಸ್ವಾಗತಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಬಿಜೆಪಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದೆ.ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಯುವಕರ ಕಣ್ಮಣಿ, ಭಾರೀ ವರ್ಚಸ್ಸು ಹೊಂದಿರುವ ವಿಜಯೇಂದ್ರ ಅವರಿಗೆ ನೀಡುವ ಮೂಲಕ ಅತ್ಯಂತ ಸ್ಪಷ್ಟ ಹಾಗೂ ಸಮರ್ಥಿನೀಯ ಆಯ್ಕೆಯನ್ನು ಮಾಡಿದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನರ ಬಗೆಗಿನ ಅವರ ತುಡಿತ, ಯುವಕರು, ರೈತರ ಬಗೆಗಿನ ಕಾಳಜಿ ಅತ್ಯಂತ ಅಲ್ಪಾವಧಿಯಲ್ಲಿ ಪ್ರಭಾವಿ ಜನನಾಯಕನನ್ನಾಗಿ ರೂಪಿಸಿದೆ.ರಾಜ್ಯದ ಹೆಮ್ಮೆಯ ರೈತ ನಾಯಕನಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಂತೆ ಅವರ ಪುತ್ರ ಬಿ.ವೈ ವಿಜಯೇಂದ್ರ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸುವುದರಲ್ಲಿ ಎರಡು ಮಾತಿಲ್ಲ.ಲೋಕಸಭಾ ಚುನಾವಣೆ ಕೆಲವೇ ತಿಂಗಳುಗಳಲ್ಲಿ ಎದುರಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿಗೆ ವಿಜಯೇಂದ್ರರಂತಹ ಸಮರ್ಥ ನಾಯಕತ್ವ ಬೇಕಾಗಿತ್ತು.ಬಿಜೆಪಿ ಹೈಕಮಾಂಡ ಕಳೆದ ಐದು ವರ್ಷಗಳಿಂದ ರಾಜ್ಯಾದ್ಯಂತ ಮಿಂಚಿನ ಸಂಚಾರ ನಡೆಸಿ ಜನ ಬೆಂಬಲ ಪಡೆದ ವಿಜಯೇಂದ್ರ ಅವರ ಸೂಕ್ಷ್ಮ ನಾಯಕತ್ವ ಗುಣವನ್ನು ಗುರುತಿಸಿ ಅಧ್ಯಕ್ಷ ಹುದ್ದೆ ನೀಡಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಿದೆ.ಅವರ ಆಯ್ಕೆಯಿಂದ ಇಡೀ ರಾಜ್ಯದ ಕಮಲ ಪಾಳಯದಲ್ಲಿ ಹೊಸ ಅಲೆ ಕಂಡು ಬಂದಿದ್ದು ಭವಿಷ್ಯದಲ್ಲಿ ಬಿಜೆಪಿ ಮತ್ತೆ ನವ ಚೈತನ್ಯ ಕಾಣುವುದರಲ್ಲಿ ಯಾವ ಸಂದೇಹವೂ ಇಲ್ಲ. ವಿಜಯೇಂದ್ರ ಅವರು ಇಡೀ ರಾಜ್ಯಾದ್ಯಂತ ತಮ್ಮ ತಂದೆಯವರಂತೆ ಮಿಂಚಿನ ಸಂಚಾರ ನಡೆಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದೆ ತರುತ್ತಾರೆ.ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರ ಸಂಘಟಿತ ಮಾರ್ಗದರ್ಶನದಲ್ಲಿ ಅವರು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಮತ್ತೆ ಬಿಜೆಪಿ ಕಮಲ ಅರಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ.ಇವರ ಆಯ್ಕೆ ಅತ್ಯಂತ ಅಭಿನಂದನೀಯ ಎಂದು ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಹರ್ಷ ವ್ಯಕ್ತಪಡಿಸಿದರು.