2,449 total views
ಸುದ್ದಿಗಳನ್ನು ಸಂಗ್ರಹಿಸಲು ಮಾಧ್ಯಮ ಪ್ರತಿನಿಧಿಗಳು ತಮ್ಮದೇ ಆದ ಮೂಲಗಳನ್ನು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಯಾವುದೇ ತನಿಖೆಗಾಗಿ ಅವರ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಳ್ಳಬೇಕಾದ್ರೆ ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಬೇಕೆಂದು ಸುಪ್ರೀಂಕೋರ್ಟ್ ಈಗಾಗಲೇ ಆದೇಶ ಹೊರಡಿಸಿದೆ ಅದೇ ರೀತಿಯಾಗಿ ಫೌಂಡೇಶನ್ ಆಫ್ ಮೀಡಿಯಾ ಪ್ರೊಫೆಷನಲ್ ಎಂಬ ಸಂಸ್ಥೆಯು ಪತ್ರಕರ್ತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲು ಪ್ರತ್ಯೇಕ ಮಾರ್ಗಸೂಚಿ ಕೊರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ ಅವರ ನ್ಯಾಯಪೀಠ ವಿಚಾರಣೆ ನಡೆಸಿ ಆದೇಶ ನೀಡಿದೆ ಅದೇ ರೀತಿಯಾಗಿ ಪತ್ರಕರ್ತರ ಮೂಲಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ ಪ್ರತ್ಯೇಕ ಮಾರ್ಗಸೂಚಿ ರಚಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಇದನ್ನು ಕೇಂದ್ರ ಸರ್ಕಾರವೇ ರೂಪಿಸುವುದು ಸೂಕ್ತ ವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ ಅಷ್ಟೇ ಅಲ್ಲದೆ ಸರಿ ಸುಮಾರು ವರ್ಷಗಳಾದರೂ ಪತ್ರಕರ್ತರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯ ಹಾಗೂ ಕಾನೂನಾತ್ಮಕ ರಕ್ಷಣೆ ಆರ್ಥಿಕವಾಗಿ ಕೇಂದ್ರ ಸರ್ಕಾರದಿಂದ ಪತ್ರಕರ್ತರಗೆ ಸಿಗಬೇಕಾದ ಸೌಲಭ್ಯಗಳು ಇದುವರೆಗೂ ಸಿಕ್ಕಿಲ್ಲ ಪತ್ರಕರ್ತರಿಗೆ ಮನ್ನಣೆ ಸಿಗಬೇಕಾದರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪತ್ರಕರ್ತರಿಗೋಸ್ಕರ ವಿಶೇಷವಾದ ಪ್ಯಾಕೇಜ್ ಅನ್ನು ಘೋಷಣೆ ಮಾಡಬೇಕು ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗ ಹಾಗೂ ಈ ದೇಶದ ನಾಲ್ಕನೇ ಸೈನಿಕನೆಂದು ಪರಿಗಣಿಸಲಾಗಿದೆ ಇದರ ಬಗ್ಗೆ “ಕೇಂದ್ರ ಸರ್ಕಾರ ” ಗಂಭೀರವಾಗಿ ಚಿಂತಿಸಿ ಪರಿಹಾರ ಕಲ್ಪಿಸಬೇಕಿದೆ.!ಎಂದು ನ್ಯಾಷನಲ್ ಆಕ್ಟಿವ್ ರಿಪೋರ್ಟರ್ಸ್ ಅಸೋಸಿಯೇಷನ್ (ರಾಷ್ಟ್ರೀಯ ಸಕ್ರಿಯ ವರದಿಗಾರರ ಸಂಘ) ಕಲಬುರಗಿ ಜಿಲ್ಲಾಧ್ಯಕ್ಷರು ವಿಜಯ್ ಕುಮಾರ್ ಜೆ ಮಲ್ಲೆದ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.