2,660 total views
ಕಲಬುರಗಿ:- ಜಿಲ್ಲೆಯಲ್ಲಿ 11 ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಿಸಲಾಗಿದೆ. ಆ ಪೈಕಿ ಹನ್ನೊಂಧು ತಾಲ್ಲೂಕುಗಳ ಮಾಹಿತಿ ಪ್ರಸ್ತುತ ಕ್ರಾಪ್ ಲಾಸ್ ಗ್ರೌಂಡ್ ಟ್ರುಥಿಂಗ್ ವೆಬ್ ಅಪ್ಲಿಕೇಷನ್ನಲ್ಲಿ ಲಭ್ಯವಿದೆ. ಅದರಂತೆ ಒಟ್ಟು 2,76,368 ಹೆಕ್ಟರ್ ಬೆಳೆಗೆ ಹಾನಿಯಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 3,95,751 ರೈತರು ಫ್ರೂಟ್ ಪೋರ್ಟಲ್ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇದರಿಂದಾಗಿ ಬರಗಾಲ ಹಾಗೂ ನೆಟೆರೋಗ ಪರಿಹಾರ ಸೇರಿದಂತೆ ಕೃಷಿ ಇಲಾಖೆಯ ಇತರೆ ಪರಿಹಾರಗಳು ಸಿಗಲಿವೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕಳೆದ 5ರವರೆಗೆ ಕೃಷಿ ಇಲಾಖೆ ವತಿಯಿಂದ ಕೈಗೊಂಡ ಬೆಳೆ ಸರ್ವೆ ಪ್ರಕಾರ ಮುಂಗಾರು ಹಂಗಾಮಿನಲಿ 8,72,701 ಹೆಕ್ಟೆರ್ ಬಿತ್ತನೆಯಾಗಿದ್ದು, 2,76,368 ಹೆಕ್ಟೆರ್ ಬೆಳೆ ಹಾನಿಯಾಗಿದೆ. ಹಿಂಗಾರು ಹಂಗಾಮಿನಲ್ಲಿ 91,018 ಹೆಕ್ಟೆರ್ ಬಿತ್ತನೆಯಾಗಿದೆ. ತೋಟಗಾರಿಕೆ ಇಲಾಖೆಯ ಸರ್ವೆ ಪ್ರಕಾರ ಮುಂಗಾರು ಹಂಗಾಮಿನಲ್ಲಿ 14,350 ಹೆಕ್ಟೆರ್ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ 4,707 (33.42ರಷ್ಟು) ಹೆಕ್ಟೆರ್ ಬಿತ್ತನೆಯಾಗಿದ್ದು, ಅದರಲ್ಲಿ ಪೂರ್ವ ಮುಂಗಾರಿನಲ್ಲಿ 100.82 ಹೆಕ್ಟರ್ ನಷ್ಟವಾಗಿದೆ. ಹಿಂಗಾರು ಹಂಗಾಮಿನಲ್ಲಿ 2,630 ಹೆಕ್ಟೆರ್ ಬಿತ್ತನೆ ಗುರಿ ನಿಗದಿಯಾಗಿತ್ತು. ಅದರಲ್ಲಿ 1.133 ಹೆಕ್ಟರ್ ಬಿತ್ತನೆಯಾಗಿದೆ. ಆದ ನಷ್ಟ ಪರಿಹಾರ ಕೋರಿ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಎಸ್ಡಿಆರ್ಎಫ್ ಮಾರ್ಗಸೂಚಿಯ ಪ್ರಕಾರ ಶೇಕಡಾ 33ಕ್ಕಿಂತ ಬೆಳೆ ನಷ್ಟವಾಗಿರುವ ರೈತರಿಗೆ ಕೃಷಿ ಪರಿಕರಗಳ ಸಹಾಯಧನ ನೀಡಲು ಮಳೆ ಆಶ್ರಿತ ಪ್ರದೇಶಗಳಲ್ಲಿ ಪ್ರತಿ ಹೆಕ್ಟೆರ್ಗೆ 8500ರೂ.ಗಳು ಹಾಗೂ ನೀರಾವರಿ ಪ್ರದೇಶದ ರೈತರಿಗೆ 17,000ರೂ.ಗಳನ್ನು ನೀಡಲಾಗುವುದು. ಬೆಳೆ ವಿಮೆ 2022ರ ಮುಂಗಾರು ಹಂಗಾಮಿನಲ್ಲಿ 1,88,000 ರೈತರು ಹಾಗೂ 2023ರ ಮುಂಗಾರು ಹಂಗಾಮಿನಲ್ಲಿ 1,62,066 ರೈತರು ಬೆಳೆ ವಿಮೆಗೆ ನೊಂದಾಯಿಸಿದ್ದಾರೆ. 2022-2023ರಲ್ಲಿ 108.59 ಕೋಟಿ ರೂ.ಗಳ ವಿಮಾ ಹಣ ರೈತರಿಗೆ ಜಮಾ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ವರ್ಷ 2,22,442 ಹೆಕ್ಟರ್ ಹಿಂಗಾರು ಬಿತ್ತನೆ ಗುರಿ ಇದ್ದು, ಈಗಾಗಲೇ 91,018 ಹೆಕ್ಟರ್ ಬಿತ್ತನೆಯಾಗಿದೆ. ಈ ವರ್ಷ ಆಯವ್ಯಯದಡಿ 13,900 ಲಕ್ಷ ರೂ.ಗಳನ್ನು ಹಿಂಗಾರು ಕೃಷಿ ಪರಿಕರಗಳ ಸಹಾಯಧನ ಅಡಿಯಲ್ಲಿ ಈಗಾಗಲೇ ಬಿತ್ತನೆ ಬೀಜ, ಲಘು ಪೋಷಕಾಂಶಗಳು, ಸಸ್ಯ ಸಂರಕ್ಷಣೆ, ಹಸಿರೆಲೆ ಬಿತ್ತನೆ ಬೀಜ ವಿತರಣೆ, ಮಿನಿ ಕಿಟ್ ಬಿತ್ತನೆ ಬೀಜ ವಿತರಣೆಗೆ ವೆಚ್ಚವಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಸ್ಪಿಲ್ ಓವರ್ 731 ಕೃಷಿ ಹೊಂಡಗಳ ಪೈಕಿ 635 ಹಾಗೂ 2023-2024ರ ಸಾಲಿನ 458 ಪೈಕಿ 91 ಕೃಷಿ ಹೊಂಡಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಲಾನಯನ ಅಭಿವೃದ್ಧಿ ಇಲಾಖೆಯ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ 36 ಫಲಾನುಭವಿಗಳಿಗೆ 60 ಲಕ್ಷ ರೂ.ಗಳು, ಪಿಎಂಕೆಎಸ್ವೈ (ಓಐ) ಯೋಜನೆಯಡಿಯಲ್ಲಿ 1,722 ಫಲಾನುಭವಿಗಳಿಗೆ 105.71 ಲಕ್ಷ ರೂ.ಗಳು, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 3,47,250 ಫಲಾನುಭವಿಗಳಿಗೆ 1,416.01 ಲಕ್ಷ ರೂ.ಗಳು, ರಾಷ್ಟ್ರೀಯ ಸುಸ್ತಿರ ಕೃಷಿ ಅಭಿಯಾನ ಯೋಜನೆಯಡಿಯಲ್ಲಿ 120 ಫಲಾನುಭವಿಗಳಿಗೆ 85 ಲಕ್ಷ ರೂ.ಗಳು, ಪಿಎಂಕೆಎಸ್ವೈ ಯೋಜನೆಯಡಿಯಲ್ಲಿ 3,265 ಫಲಾನುಭವಿಗಳಿಗೆ 876.11 ಲಕ್ಷ ರೂ.ಗಳು, ರಿವಾರ್ಡ್ ಯೋಜನೆಯಡಿಯಲ್ಲಿ 1,432 ಫಲಾನುಭವಿಗಳಿಗೆ530 ಲಕ್ಷ ರೂ.ಗಳನ್ನು ನೀಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಜಲಾನಯನ ಇಲಾಖೆಯಿಂದ 3,53,825 ಫಲಾನುಭವಿಗಳಿಗೆ ಸುಮಾರು 3072.83 ಲಕ್ಷ ರೂ.ಗಳಷ್ಟು ಸಹಾಯಧನ ನೀಡಲಾಗಿದೆ. ಕರ್ನಾಟಕ ನರೇಗಾ ಅಡಿಯಲ್ಲಿ ಜೂನ್ ತಿಂಗಳಿನಿಂದ ಅಕ್ಟೋಬರ್ವರೆಗೆ 50.03 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ವರದಿಗಾರರು ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್