2,534 total views
ಕಲಬುರಗಿ:- ಕಳೆದ ವಿಧಾನಸಭಾ ಚುನಾವಣೆಯ ವೇಳೆ ನೀತಿ ಸಂಹಿತೆ ಹಿನ್ನೆಲೆ ಹೋಸ ಪಡಿತರ ಚೀಟಿ ಅನುಮೋದನೆ ಕಾರ್ಯ ಸ್ಥಗಿತಗೊಳಿಸಲಾಗಿತ್ತು ಆದರೆ ಈ ಸರ್ಕಾರ ಬಂದು ಏಳು ತಿಂಗಳು ಕಳೆಯುತ್ತಾ ಬರುತ್ತಿದೆ ಆದರೆ ಇಲ್ಲಿಯವರೆಗೆ ಒಂದೇ ಒಂದು ಹೋಸ ಪಡಿತರ ಚೀಟಿ ನೀಡಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರರೂ ಆದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತಲ್ಕೂರ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೋಸ ಪಡಿತರ ಚೀಟಿ ಪಡೆಯಬೇಕು ಎಂದು ರಾಜ್ಯದಲ್ಲಿ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. ಎಲ್ಲಿ ಬಡವರಿಗೆ ಅನ್ನಭಾಗ್ಯದ ಹಣ ಹಾಗೂ ಗೃಹಲಕ್ಷ್ಮಿ ಹಣ ನೀಡಬೇಕಾಗಿ ಬರುತ್ತದೆ ಎನ್ನುವ ಭಯದಲ್ಲಿ ಸುಮಾರು 2ಲಕ್ಷ 95 ಸಾವಿರ ಕುಟುಂಬಗಳಿಗೆ ಪಡಿತರ ಚೀಟಿ ನೀಡದೇ ಬಾಕಿ ಉಳಿಸಿಕೊಂಡಂತೆ ಕಾಣುತ್ತಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ನೀಡುತ್ತಿದೆ. ನಿಮಗೆ ಅನ್ನಭಾಗ್ಯದ ಹಣ ಹಾಗೂ ಗೃಹ ಲಕ್ಷ್ಮಿ ಹಣ ನೀಡಲು ಹೊರೆಯಾಗುವ ಕಾರಣದಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಪಡಿತರ ಚೀಟಿ ನೀಡದೇ ಇರುವುದು ಖಂಡನೀಯ. ನಿಮ್ಮ ಆ ಎರಡು ಯೋಜನೆಗಳನ್ನು ಹೋರತುಪಡಿಸಿ ಸರ್ಕಾರದ ಅನೇಕ ಸೌಲಭ್ಯಗಳಿಂದ ಅರ್ಜಿದಾರರು ವಂಚಿತರಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಅನೇಕ ಕುಟುಂಬಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಲು ಸಾಧ್ಯವಾಗುತ್ತಿಲ್ಲ. ಶೈಕ್ಷಣಿಕ, ವೈದ್ಯಕೀಯ ನೆರವುಗಳಿಂದ ಜನರು ವಂಚಿತರಾಗುತ್ತಿದ್ದಾರೆ. ವೃದ್ಧರು ಪಿಂಚಣಿ, ವಿಧವೆಯರ ಮಾಸಿಕ ವೇತನ ಸೇರಿದಂತೆ ಹತ್ತು ಹಲವು ಸೇವೆಗಳಿಂದ ಜನರು ವಂಚಿತರಾಗುತ್ತಿದ್ದಾರೆ. ಕಾಟಾಚಾರಕ್ಕೆ ಕೆಲದಿನಗಳ ಹಿಂದೆ ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಅನುಮತಿ ನೀಡಿತ್ತಾದರೂ ಸರ್ವರ ಸಮಸ್ಯೆ ಮದ್ಯ ಸಿಲುಕಿಸಿ ಬಡ ಜನರನ್ನು ಆನ್ಲೈನ್ ಸೆಂಟರಗಳಿಗೆ ಅಲೆದಾಡಿಸುವ ಕೆಲಸ ಮಾಡಿದೆ. ಬಡ ಜನರ ಹತ್ತಾರು ಕೆಲಸ ಕಾರ್ಯಗಳಿಗೆ ಪಡಿತರ ಚೀಟಿ ಅನಿವಾರ್ಯತೆ ಇದ್ದು ಕೂಡಲೇ ಸರ್ಕಾರ ಬಾಕಿ ಉಳಿಸಿಕೊಂಡ ಪಡಿತರ ಚೀಟಿ ಅರ್ಜಿಗಳಿಗೆ ಅನುಮೋದನೆ ನೀಡಿ ನಡ ಜನರ ನೆರವಿಗೆ ಬರಬೇಕಿದೆ.
ವರದಿಗಾರರು – ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್