3,284 total views
ಕಾಳಗಿ:ಪಟ್ಟಣದ ಭರತನೂರ ರಸ್ತೆಯಲ್ಲಿರುವ ಪೂಜ್ಯ ಲಿಂ.ಶ್ರೀಹಾರಕೂಡ ಸಿದ್ಧಲಿಂಗ ಶಿವಾಚಾರ್ಯರ ಲಿಂಗ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣದ ಅದ್ಧೂರಿ ಸಮಾರಂಭವನ್ನು ದಿನಾಂಕ:19-11-2023ರ ರವಿವಾರ ಬೆಳಗ್ಗೆ 11-00ಕ್ಕೆ ನೆರವೇರಲಿದೆ ಎಂದು ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾದ ರಾಜೇಶ್ ಗುತ್ತೇದಾರ ಕಾಳಗಿ ಅವರು ತಿಳಿಸಿದ್ದಾರೆ.
ಪಟ್ಟಣದ ಪ್ರಮುಖರು ಸೇರಿ ಶುಕ್ರವಾರ ಪಟ್ಟಣ್ಣದ ಸಿದ್ಧಲಿಂಗ ಶಿವಾಚಾರ್ಯರ ದೇವಸ್ಥಾನದ ಗದ್ದುಗೆ ಆವರಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಂದೂರು, ಶಿವಲಿಂಗೇಶ್ವರನೆಂದೇ ಹೆಸರುವಾಸಿಯಾಗಿರುವ ಪೂಜ್ಯ ಲಿಂ.ಶ್ರೀಹಾರಕೂಡ ಸಿದ್ಧಲಿಂಗ ಶಿವಾಚಾರ್ಯರ ಗದ್ದುಗೆಯ ಹಳೆ ದೇವಾಲಯವು ಪಟ್ಟಣದ ಸದ್ಭಕ್ತರ ಸಹಕಾರದಿಂದ ಸಂಪೂರ್ಣ ನವೀಕರಣಗೊಂಡು, ಲಿಂಗ ಪ್ರತಿಷ್ಠಾಪನೆ ಮೂಲಕ ಕಳಸಾರೋಹಣಕ್ಕೆ ಸಜ್ಜಾಗಿ ನಿಂತಿರುವ ಈ ಸಮಾರಂಭವು ಜಾತಿ-ಧರ್ಮ, ಭೇದ-ಭಾವಗಳಿಲ್ಲದೇ ಹಿಂದೂ-ಮುಸ್ಲಿಂ ಎಲ್ಲರನ್ನೊಳಗೊಂಡು ನೆರವೇರಲಿರುವ ಈ ಕಾರ್ಯಕ್ರಮವು ಭಾವೈಕ್ಯತೆಗೆ ಸಾಕ್ಷಿಯಾಗಲಿದೆ ಎಂದರು.ಅಂದು ರವಿವಾರ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ರುದ್ರಾಭಿಷೇಕ, ಧಾರಾಭಿಷೇಕ, ಹೋಮ-ಹವನಗಳು ನಡೆಯಲಿದ್ದು, ಧರ್ಮ ರತ್ನ ಹಾರಕೂಡ ಡಾ.ಚನ್ನವೀರ ಶಿವಾಚಾರ್ಯರನ್ನು ಕುಂಭ-ಕಳಶಗಳೊಂದಿಗೆ ಅಂಬೇಡ್ಕರ್ ವೃತ್ತದಿಂದ ಭವ್ಯ ಮೆರವಣಿಗೆಯೊಂದಿಗೆ ಸಾಗಿಬಂದು ಹಳೆ ಬಸ್ ನಿಲ್ದಾಣದಲ್ಲಿ ಸರ್ವಧರ್ಮಗಳ ಮುಖಂಡರಿಂದ ಶ್ರೀ ಗಳು ಮೇಲೆ ಹೂ…ಮಳೆಯನ್ನು ಸುರಿಸಲಾಗುವುದು.ನಂತರ ಶ್ರೀ ಗಳ ಅಮೃತ ಹಸ್ತದಿಂದ ಲಿಂಗ ಪ್ರತಿಷ್ಠಾಪನೆ ಮಾಡಿ ಸಳಸಾರೋಹಣ ನೆರವೇರಿ ನಂತರ ನಡೆಯುವ ಧರ್ಮ ಸಭೆಯಲ್ಲಿ ಹರ-ಗುರು ಚರಮೂರ್ತಿಗಳು, ರಾಜಕೀಯ ಗಣ್ಯಮಾನ್ಯರು, ಸಾವಿರಾರು ಜನ ಸದ್ಭಕ್ತರು ಬಾಗವಹಿಸುವರು.ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಲಾಗುವುದು.ಹಿರಿಯ ಜೀವಿ ನೀಲಕಂಠಪ್ಪ ಕುಡ್ಡಳ್ಳಿ, ರಾಘವೇಂದ್ರ ಗುತ್ತೇದಾರ, ಸಂತೋಷ ಪತಂಗೆ, ಮುನೀರಬೇಗ ಬಿಜಾಪೂರ, ಭೀಮರಾಯ ಮಲಘಾಣ, ತಮೀಜಮಿಯ್ಯಾ, ಅನೀಲ ಗುತ್ತೇದಾರ, ರವಿದಾಸ ಪತಂಗೆ, ಜಗನ್ನಾಥ ಚಂದನಕೇರಿ, ಸಂತೋಷ ನರನಾಳ, ಗೌರಿಶಂಕರ ವನಮಾಲಿ, ಗುರು ಮದ್ದೂರ, ನಾಗರಾಜ ತೇಲ್ಕೂರ, ಸುನೀಲ ರಾಜಾಪುರ, ವಸಂತ ಜಾಧವ, ಚಂದ್ರಕಾಂತ ಸುಂಠಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಸಾದ್ ವಿಷೇಶ: ಹುರಣಗಡಬು ತುಪ್ಪದ ಪ್ರಸಾದ್ ತಯ್ಯಾರಿ:ಸಮಾರಂಭಕ್ಕೆ ಬಂದ ಸಾವಿರಾರು ಭಕ್ತರಿಗಾಗಿ ಹುರಣಗಡಬು ತುಪ್ಪದ ಪ್ರಸಾದ ವಿಷೇಶವಾಗಲಿದೆ.ಶ್ರೀಗಳಿಗೆ ನಾಣ್ಯದಲ್ಲಿ ತುಲಾಭಾರ: ಧರ್ಮರತ್ನ ಡಾ.ಚನ್ನವೀರ ಶಿವಾಚಾರ್ಯರರಿಗೆ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಅವರಿಂದ ನಾಣ್ಯಗಳಲ್ಲಿ ತುಲಾಭಾರ ಮಾಡಲಾಗುವುದು. ಸಮಾರಂಭಕ್ಕೆ ಸಾಕ್ಷಿಯಾಗಲಿರುವವರು: ಭರತನೂರಿನ ಚಿಕ್ಕ ಗುರುನಂಜೇಶ್ವರ ಶ್ರೀಗಳು, ಕಾಳಗಿ ನೀಲಕಂಠ ಮರಿದೇವರು. ಶಾಸಕ ಅವಿನಾಶ್ ಜಾಧವ, ಸಚಿವ ಶರಣಬಸಪ್ಪ ಗೌಡ ದರ್ಶನಾಪೂರ, ಶಾಸಕ ಅಲ್ಲಮಪ್ರಭು ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಜಗದೇವ ಗುತ್ತೇದಾರ, ಸುಭಾಷ ರಾಠೋಡ, ಮಾದನಹಿಪ್ಪರಗಾ ನೇಕಾರ ಸಂಘದ ಅಧ್ಯಕ್ಷ ಗುರುನಾಥ ಸೊನ್ನದ.