2,615 total views
ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಹಪುರ್ ತಾಲೂಕಿನ ದಿ ಹವೆನ ಫೈಟರ ಸಂಸ್ಥೆಯ ವಿದ್ಯಾರ್ಥಿಗಳು..
ಶಿವಮೊಗ್ಗ ಜಿಲ್ಲೆಯಲ್ಲಿ ಹಮ್ಮಿಕೊಂಡ ರಾಜ್ಯ ಸರ್ಕಾರದ ಆದೇಶಧನ್ವಯ ಸರ್ಕಾರಿ ಕರಾಟೆ ಕ್ರೀಡಾಕೂಟದಲ್ಲಿ ದಿನಾಂಕ 21-11-2023 ಹಾಗೂ 22-11-2023 ರಂದು ಎರಡು ದಿನದ ಕರಾಟೆ ಕ್ರೀಡ ಕೂಟದಲ್ಲಿ ಶಹಾಪುರ ತಾಲೂಕಿನ ದಿ ಹವೆನ ಫೈಟರ್ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಜಯಶಾಲಿಗಳಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಶಹಪುರ್ ತಾಲೂಕಿನ ಕರಾಟೆ ಶಿಕ್ಷಕ ಭೀಮಾಶಂಕರ್ ಗೋಗಿಯವರು ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ 17 ವರ್ಷದೊಳಗಿನ ವಯೋಮಾನದ ಕರಾಟೆ ಕ್ರೀಡಾಕೂಟದಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ
ಶ್ರೀಶೈಲ್ ತಂದೆ ನಾಗಪ್ಪ. ಪ್ರಥಮ ಸ್ಥಾನ
ಬಸವರಾಜ್ ತಂದೆ ನಾಗಪ್ಪ ಪ್ರಥಮ ಸ್ಥಾನ
ಸುದರ್ಶನ್ ತಂದೆ ಮಹೇಶ್ ಪ್ರಥಮ ಸ್ಥಾನ
ಶ್ರೀದೇವಿ ತಂದೆ ಬಾಲರಾಜ್. ಪ್ರಥಮ ಸ್ಥಾನ
ಶ್ರೀಶೈಲ್ ತಂದೆ ಬಾಲರಾಜ್ ದ್ವಿತೀಯ ಸ್ಥಾನ
ಗಗನ್ ತಂದೆ ರಾಘವೇಂದ್ರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಹಾಗು ರಾಷ್ಟ್ರಮಟ್ಟದಲ್ಲಿ ಇನ್ನು ಹೆಚ್ಚಿನ ರೀತಿಯ ಪ್ರಶಸ್ತಿಗಳನ್ನು ಗೆದ್ದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ ಎಂದು ದಿ ಹವೆನ ಫೈಟರ್ ಸಂಸ್ಥೆಯ ಉಪ ನಿರ್ದೇಶಕರು ಹಾಗೂ ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಮಾಸ್ಟರ್ ಮನೋಹರ ಕುಮಾರ್ ಬಿರನುರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ