2,625 total views
ಜೇವರ್ಗಿ ಸುದ್ದಿ: ನಮ್ಮ ರಾಜ್ಯದಲ್ಲಿ ಹಿಂದುಳಿದ ಬೃಹತ್ ಜನ ಸಮೂಹವನ್ನು ಸಬಲರನ್ನಾಗಿಸಲು ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು 1921 ರಲ್ಲಿ ಮಿಲ್ಲರ್ ಆಯೋಗದ ವರದಿಯ ಸಿಪಾರಸ್ಸುಗಳನ್ನು ಆಧರಿಸಿ ರಾಜ್ಯದ ಸರ್ಕಾರಿ ಉದ್ಯೋಗಗಳಲ್ಲಿ ಬ್ರಾಹ್ಮಣೇತರರಿಗೆ 75 ಶೇಕಡಾ ಮೀಸಲಾತಿಯನ್ನು ನೀಡಿದರು ಈ ಮೀಸಲಾತಿಯ ಫಲಾನುಭವಿಗಳಾದ ಲಿಂಗಾಯತ- ಒಕ್ಕಲಿಗ ಸಮಾಜಗಳು ಸಾಮಾಜಿಕವಾಗಿ ಆರ್ಥಿಕವಾಗಿ ಹೆಚ್ಚು ಬಲಿಷ್ಠರಾದವು 1947ರ ನಂತರ ಬ್ರಾಹ್ಮಣ -ಲಿಂಗಾಯತ- ಒಕ್ಕಲಿಗ ನೇತೃತ್ವದ ಎಲ್ಲಾ ಸರ್ಕಾರಗಳು ಮಿಲ್ಲರ್ ವರದಿಯ ಆಶಯವನ್ನು ಮಣ್ಣು ಪಾಲು ಮಾಡಿದವು ಸರ್ಕಾರದ ಎಲ್ಲಾ ಪ್ರಮುಖ ಹುದ್ದೆಗಳಲ್ಲೂ ತಮ್ಮ ಬಳಗದವರನ್ನೇ ತುಂಬಿಸಿದರು ಸಾಲದ್ದಕ್ಕೆ ತಮ್ಮದೇ ಆದ ವಿದ್ಯಾಸಂಸ್ಥೆಗಳನ್ನು ಆರಂಭಿಸಿ ಸರ್ಕಾರಿ ಶಾಲೆಗಳನ್ನು ಮೂಲೆಗುಂಪು ಮಾಡಿದರು ಬಹುಪಾಲು ಹಿಂದುಳಿದ ವರ್ಗದ ಮಕ್ಕಳೇ ಕಲಿಯುತ್ತಿದ್ದ ಅಗತ್ಯ ಆರ್ಥಿಕ ನೆರವು ನೀಡದೆ ಯಾವುದೇ ಸೌಲಭ್ಯಗಳಿಲ್ಲದಂತೆ ಮಾಡಿದರು ಇದರಿಂದಾಗಿ ಅತಿ ಹಿಂದುಳಿದ ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದು ದುಸ್ತರವಾಯಿತು. ಪರಿಶಿಷ್ಟ ಜಾತಿಗಳಿಗೆ 1935 ರಲ್ಲಿ ಪರಿಶಿಷ್ಟ ವರ್ಗಗಳಿಗೆ 1950 ರಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಕ್ರಮವಾಗಿ 15% ಮತ್ತು 7.5 ಶೇಕಡಾ (ರಾಜ್ಯದಲ್ಲಿ 3%) ರಷ್ಟು ಮೀಸಲಾತಿ ದೊರಕಿದ ಪರಿಣಾಮ ಅವರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು ಆದರೆ ಇತರೆ ಹಿಂದುಳಿದ ವರ್ಗಗಳ ಬದುಕು ಇಂದಿಗೂ ಹೀನಾಯ ಸ್ಥಿತಿಯಲ್ಲಿದೆ ಇಂತಹ ಪರಸ್ಥಿತಿಯನ್ನು ಮೊದಲೇ ಮನಗಂಡಿದ್ದ ಬಾಬಾ ಸಾಹೇಬರು ನಮ್ಮ ಸಂವಿಧಾನದಲ್ಲಿ ಅನುಚ್ಛೇದ 340ನ್ನು ಅಡಕ ಗೊಳಿಸಿದರು ಈ ಅನುಚ್ಛೇದದ ಪ್ರಕಾರ ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ಸ್ಥಿತಿ ಗತಿ ಅಧ್ಯಯನಕ್ಕೆ ಒಂದು ಆಯೋಗವನ್ನು ನೇಮಿಸಿ ಅದರ ಶಿಪಾರಸ್ಸುಗಳನ್ನು ಜಾರಿಗೆ ತಂದು ಅಭಿವೃದ್ಧಿ ಮಾಡಬೇಕಾಗಿತ್ತು ಆದರೆ ಆ ಅನುಚ್ಛೇದದ ಪ್ರಕಾರ 1957ರಲ್ಲಿ ರಚಿಸಲ್ಪಟ್ಟ ಕಾಕಾ ಕಾಲೇಲ್ಕರ್ ಆಯೋಗವು ನೀಡಿದ ವರದಿಯನ್ನು ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರವು ತಿರಸ್ಕರಿಸಿತು ಅಲ್ಲದೆ ಓಬಿಸಿ ಗಳ ಮೀಸಲಾತಿಯ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ಆದೇಶ ಹೊರಡಿಸಿತು. ಇದರ ನಂತರ ಮೈಸೂರು ರಾಜ್ಯ ಸರ್ಕಾರವು 1956 ರಲ್ಲಿ ನೇಮಿಸಿದ ನಾಗನಗೌಡ ಸಮಿತಿಯು ಲಿಂಗಾಯತ-ಒಕ್ಕಲಿಗರು ಸೇರಿದಂತೆ ಒಬಿಸಿ ಗಳಿಗೆ 69 ಶೇಕಡ ಮೀಸಲಾತಿ ಶಿಫಾರಸ್ಸು ಮಾಡಿತು.ಈ ಶಿಫಾರಸ್ಸಿನ ವಿರುದ್ಧ ಬಾಲಾಜಿ ಎನ್ನುವವರು ಅವರು 69 ಶೇಕಡ ಪ್ರಶ್ನೆ ಮಾಡಿದರು ಆದ್ದರಿಂದ ಬಹುಜನ ಸಮಾಜ ಪಾರ್ಟಿ ಕರ್ನಾಟಕ ರಾಜ್ಯ ಘಟಕ ವತಿಯಿಂದ 21.11.2023 ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು ಎಂದು ಭೀಮು ನೆಲೋಗಿ ಬಿಎಸ್ಪಿ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ವಿಜಯಕುಮಾರ್ ಜೆ ಮಲ್ಲೇದ್