3,567 total views
ತಾಲೂಕಾ ಮಟ್ಟದ ಟಾಸ್ಕ್ ಫೋರ್ಸ್ ತಂಡದ ಅಧಿಕಾರಿಗಳ ಸಭೆಯನ್ನು ಕುಮಟಾದ ಆಡಳಿತಸೌಧದಲ್ಲಿ ನಡೆಸಲಾಯಿತು.ಬರ ನಿರ್ವಹಣೆಗೆ ಸಂಬಂಧಿಸಿದ ತಾಲೂಕಾ ಮಟ್ಟದ ಟಾಸ್ಕ್ ಫೋರ್ಸ್ ತಂಡದ ಅಧಿಕಾರಿಗಳ ಸಭೆಯನ್ನು ಕುಮಟಾದ ಆಡಳಿತಸೌಧದಲ್ಲಿ ನಿನ್ನೆ ನಡೆಸಲಾಯಿತು. ಮಳೆಯ ಅಭಾವದ ಪರಿಣಾಮ ತಾಲೂಕಿನ ರೈತರಿಗೆ ಉಂಟಾದ ನಷ್ಟದಬಗ್ಗೆ ಸಂಪೂರ್ಣ ವರದಿ ಸಂಗ್ರಹಿಸಿ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಟಾಸ್ಕ್ ಫೋರ್ಸ್ ತಂಡದ ಅಧಿಕಾರಿಗಳಿಗೆ ಸೂಚಿಸಲಾಯಿತು. ಗ್ರೇಡ್ 2 ತಹಶೀಲ್ದಾರ್ ಸತೀಶ್ ಗೌಡ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚೇತನ್ ನಾಯ್ಕ, ಪಿ. ಆರ್. ಇ. ಡಿ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ನಾಯ್ಕ, ಸಹಾಯಕ ಕೃಷಿ ಅಧಿಕಾರಿ ಚಂದ್ರಕಲಾ ಎಸ್. ಬರ್ಗಿ ಹಾಗೂ ಇತರ ಅಧಿಕಾರಿಗಳು ಇದ್ದರು.