3,626 total views
ರನ್ನ ಬೆಳಗಲಿ: 14.,- ರನ್ನ ಬೆಳಗಲಿ ಪಟ್ಟಣದ ಶ್ರೀ ಬಂದಲಕ್ಷ್ಮೀ ದೇವಿ ಪಾದಗಟ್ಟಿ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನೆರವೇರಿದವು ಮಹಿಳೆಯರ ಬಾಕ್ ಹ್ಯಾಂಡಲ್ ಸೈಕಲ್ ಸ್ಪರ್ಧೆಯ ಉದ್ಘಾಟಕರಾಗಿ ನಿವೃತ ಸೈನಿಕರಾದ ಶ್ರೀಶೈಲ ಭಜಂತ್ರಿ ರವರು ಉದ್ಘಾಟಿಸಿ, ಕ್ರೀಡೆಗಳು ಆರೋಗ್ಯಕ್ಕೆ ವರದಾನಗಳಾಗಿವೆ. ಇಂದಿನ ಸ್ಥಳೀಯ ಜಾತ್ರಾ ಮಹೋತ್ಸವಗಳಲ್ಲಿ ಕ್ರೀಡೆಗಳನ್ನು ಉತ್ತೇಜಿಸುವುದರೊಂದಿಗೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸಂತಸವಾಗಿದೆ. ಯುವ ಸಮುದಾಯ ಕ್ರೀಡೆಗಳನ್ನು ಮೈಗೂಡಿಸಿಕೊಂಡರೆ ಆರೋಗ್ಯ ಕೂಡ ತಮ್ಮದಾಗುತ್ತದೆ. ಉತ್ತಮ ಆರೋಗ್ಯದ ಜೊತೆಗೆ ಉತ್ತಮ ಸಾಧನೆಗೈಯಲು ಸಾಧ್ಯ ಎಂದು ತಿಳಿಸಿದರು.
ಪುರುಷರ ಓಟದ ಸ್ಪರ್ಧೆ, ಮಹಿಳಾ ಮತ್ತು ಪುರುಷರ ಬಾಕ್ ಹ್ಯಾಂಡಲ್ ಸೈಕಲ್ ಸ್ಪರ್ಧೆ, ಪುರುಷರ ಸಾದಾ ಹ್ಯಾಂಡಲ್ ಸೈಕಲ್ ಸ್ಪರ್ಧೆಗಳು ಯಶಸ್ವಿಯಾಗಿ ಜರುಗಿದವು. ಈ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ದಾಳುಗಳಿಗೆ, ನಗದು ಪುರಸ್ಕಾರ ಜೊತೆಗೆ ಸನ್ಮಾನಿಸಿ ಗೌರವಿಸಲಾಯಿತು.
ಮಹಾಲಿಂಗಪ್ಪ ಪುರಾಣಿಕ ಮಾಜಿ ಪಟ್ಟಣ ಪಂಚಾಯತ್ ಸದಸ್ಯರು, ಡಿ.ಕೆ ದುರ್ಗಪ್ಪ ಪೂಜೆರಿ, ಈರಯ್ಯ ಮಠಪತಿ ಗುತ್ತಿಗೆದಾರರು.ಬಸವರಾಜ ಹಿಕಡಿ ಪಿಕೆಪಿಎಸ್ ಕಾರ್ಯದರ್ಶಿಗಳು, ಕೃಷ್ಣ ಗುರವ ಶಿಕ್ಷಕರು,ದುಂಡಪ್ಪ ಹೊಸೂರ, ವಿಠ್ಠಲ ಮುಗಳಖೋಡ, ಗಂಗಪ್ಪ ಹೊಸೂರ, ಈಶ್ವರ ಹೆಗ್ಗನ್ನವರ ಗುತ್ತಿಗೆದಾರರು,ಪ್ರಕಾಶ ನಾವಿ, ಹನಮಂತ ಹೊಸೂರ, ರಾಹುಲ ಸುರಮಂಜಿ, ಮಹಾದೇವ ಕೊಟ್ರ್ಯಾಗೋಳ, ಸದಾಶಿವ ಮುಧೋಳ, ವಿಠ್ಠಲ ಬಿಸಗುಪ್ಪಿ ಶಿಕ್ಷಕರು, ಬಸವರಾಜ ನೀಲನ್ನವರಗುತ್ತಿಗೆದಾರರು ಈ ಎಲ್ಲ ಅತಿಥಿಗಳು ನಗದು ಬಹುಮಾನವನ್ನು ಕೊಡ ಮಾಡಿದರು. ಕಾರ್ಯಕ್ರಮದ ನಿರ್ಣಾಯಕರಾಗಿ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ, ವಾಯ್. ಎಚ್. ಪೂಜಾರಿ ಮತ್ತು ಯಲ್ಲಪ್ಪ ದೋಬಸಿ, ರಾಮಲಿಂಗ ಹುದ್ದಾರ, ಅಡಿವೆಪ್ಪ ಸಿದ್ದಾಪೂರ,ಮಹಾಲಿಂಗಪ್ಪ ನೀಲಣ್ಣವರ, ರಾಮಪ್ಪ ಕಾನಟ್ಟಿ, ಶ್ರೀಶೈಲ ಚೌಲಿ, ಯಮನಪ್ಪ ಎಳ್ಳಮವಾಸಿ, ಶಿವಲಿಂಗ ಕಾನಟ್ಟಿ, ಗುರುನಾಥ ಚನ್ನಾಳ ,ಅಪ್ಪು ನಾವಿ, ಗಂಗಾಧರ ಗುರವ, ಬಸವರಾಜ ರವಾಳ, ಮುಂತಾದವರು ಉಪಸ್ಥಿತರಿದ್ದರು.