32 total views
ಯಡ್ರಾಮಿ ಸುದ್ದಿ: ಯಡ್ರಾಮಿ ತಾಲೂಕಿನ 63 ಹಳ್ಳಿಗಳಲ್ಲಿ ಸರಿ ಸುಮಾರು 57 ಹಳ್ಳಿಗಳ ರೈತರಿಗೆ ನೀರಿನ ಆಹಾಕಾರ ಇದೆ ರಾಜ್ಯ ಸರ್ಕಾರ ವಾರ ಬಂದಿ ರೈತರ ಹೊಲಕ್ಕೆ ನೀರು ಬಿಡುವ ಯೋಜನೆ ಮಾಡಿದೆ ಆದರೆ ಕೃಷ್ಣ ಮೇಲ್ದಂಡೆ ಯೋಜನೆ ಅರ್ಥಾರ್ಥ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಅಧಿಕಾರಿಗಳು ಯಡ್ರಾಮಿ ತಾಲೂಕಿಗೆ ಮಲತಾಯಿ ಧೋರಣೆ ಹಾಗೂ ನಿರ್ಲಕ್ಷ ಧೋರಣೆ ತೋರುತ್ತಿರುವುದು ವಿಪರ್ಯಾಸದ ಸಂಗತಿ ರಾಜ್ಯ ಸರ್ಕಾರ ವಾರ ಬಂದಿ ಮಾಡಿದರು ಸಹ ಸರಿಯಾಗಿ ಒಂದು ವಾರ ನೀರು ರೈತರ ಹೊಲಕ್ಕೆ ಬಿಡುವುದಿಲ್ಲ ಇದಕ್ಕೆ ಹೊಣೆ ಯಾರು? ರಾಜ್ಯ ಸರ್ಕಾರವೇ ಅಥವಾ ಕೃಷ್ಣ ಮೇಲ್ದಂಡೆ ಯೋಜನೆ ಅಧಿಕಾರಿಗಳೇ ಈಗಾಗಲೇ ಬರಗಾಲದಿಂದ ಯಡ್ರಾಮಿ ತಾಲೂಕಿನ ರೈತರು ತತ್ತರಿಸಿ !ಕಂಗಲಾಗಿದ್ದಾರೆ..! ಈಗಿರುವಾಗ ವಾರ ಬಂದಿ ಕೂಡ ಸರಿಯಾಗಿ ನೀರು ಬಿಡದಿದ್ದರೆ ರೈತರು ಬದುಕು ಕಟ್ಟಿಕೊಂಡು ಜೀವನ ಸಾಗಿಸುವುದು ಹೇಗೆ? ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿರುವ ಯಡ್ರಾಮಿ ತಾಲೂಕಿನ ರೈತರು ಬದುಕುವುದು ಹೇಗೆ? ಕೃಷಿಯ ಮೇಲೆ ಅವಲಂಬಿತ ರಾಗಿರುವ ರೈತಾಪಿ ಜನರ ಜೀವನ ಸಂಕಷ್ಟದಲ್ಲಿದೆ.! ರಾಜ್ಯ ಸರ್ಕಾರ ಇನ್ನೂ ಬರ ಪರಿಹಾರ ಹಣ ರೈತರ ಖಾತೆಗೆ ಬಿಡುಗಡೆ ಅಥವಾ ಜಮಾ ಮಾಡಿಲ್ಲ ಹೀಗಿರುವಾಗ ಕೃಷ್ಣ ಮೇಲ್ದಂಡೆ ಯೋಜನೆ ಕಾಲುವೆಗೆ ಸರಿಯಾಗಿ ನೀರು ಬಿಡದಿದ್ದರೆ ರೈತರಿಗೆ ಕೈಗೆ ಬಂದ ತುತ್ತು, ಬಾಯಿಗೆ ಬರದ ಹಾಗೆ ಹಾಗಿದೆ ಹತ್ತಿ ಬೆಳೆ ನೀರಿಲ್ಲದೆ ಒಣಗಿ ಸುಟ್ಟಿರುವ ಹಾಗೆ ಬೆಳೆ ನಾಶವಾಗಿ ನಶಿಸಿ ಹೋದಂತೆ ಕಾಣುತ್ತಿದೆ ಎಂದು ಸುಶೀಲಾ ಬಾಯಿ ಗಂಡ ಮಾರುತಿ ಸೂರ್ಯವಂಶಿ ಸುಂಬಡ್ ಇವರು ಇಡಿ ಶಾಪ ಹಾಕುತ್ತಿದ್ದಾರೆ ಕೃಷ್ಣ ಮೇಲ್ದಂಡೆ ಯೋಜನೆಗೆ ಸರಿಯಾಗಿ ಸಂಪೂರ್ಣ ವಾರ ಬಂದಿ ನೀರು ಬಿಡದೆ ಹೊಲಕ್ಕೆ ನೀರಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಪ್ರಜಾಪ್ರಭುತ್ವ ಆಡಳಿತದಲ್ಲಿ ಮಲತಾಯಿ ಧೋರಣೆ ಹಾಗೂ ನಿರ್ಲಕ್ಷ ಧೋರಣೆ ನೀತಿಯನ್ನು ನಾವು ಖಂಡಿಸುತ್ತೇವೆ ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಯಡ್ರಾಮಿ ತಾಲೂಕಿನ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಬೇಕು ಮತ್ತು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಅಧಿಕಾರಿಗಳು ಯಡ್ರಾಮಿ ತಾಲೂಕಿಗೆ ಕೃಷ್ಣ ಮೇಲ್ದಂಡೆ ಯೋಜನೆ ಕಾಲುವೆಗೆ ಸಂಪೂರ್ಣ ವಾರ ಬಂದಿ ನೀರು ಹರಿಸಬೇಕು. ಒಂದು ವೇಳೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಮತ್ತು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಅಧಿಕಾರಿಗಳು ನಿರ್ಲಕ್ಷ ಧೋರಣೆ ತೋರಿದರೆ ಮುಂದಿನ ದಿನಮಾನಗಳಲ್ಲಿ ಯಡ್ರಾಮಿ ತಾಲೂಕಿನ ರೈತರು ಹಾಗೂ ಎಲ್ಲಾ ರೈತ ಪರ ಸಂಘಟನೆಗಳು ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿಸಿಲು ನಾಡಿನ ಹಸಿರು ಸೇನೆ ಎಸ್ ಸಿ ಎಸ್ ಟಿ ಮೋರ್ಚಾ ಯಡ್ರಾಮಿ ತಾಲೂಕ ಅಧ್ಯಕ್ಷರು ಸುರೇಶ್ ಭಜಂತ್ರಿ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವರದಿ :ವಿಜಯಕುಮಾರ್ ಜೆ ಮಲ್ಲೆದ