2,218 total views
ಯಡ್ರಾಮಿ ಸುದ್ದಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಯಡ್ರಾಮಿಯಲ್ಲಿ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರದೆ ನಿರ್ಲಕ್ಷ ಧೋರಣೆಯಿಂದ ಕಾರ್ಯನಿರ್ವಹಿಸುತ್ತಿರುವುದು ವಿಪರ್ಯಾಸದ ಸಂಗತಿ ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಔಷಧಿ ಹೊರಗಡೆ ಚೀಟಿಯಲ್ಲಿ ಬರೆದು ಕೊಡುತ್ತಿದ್ದಾರೆ. ಸರ್ಕಾರದಿಂದ ನೇಮಕವಾದ ಕಾಯಂ ವೈದ್ಯರಿಲ್ಲ ಮತ್ತು ಸರಿಯಾದ ಸಮಯಕ್ಕೆ ಸಮುದಾಯ ಅರೋಗ್ಯ ಕೇಂದ್ರ ಯಡ್ರಾಮಿಗೆ ಸಿಬ್ಬಂದಿಗಳು ಬಂದು ಕಾರ್ಯನಿರ್ವಹಿಸುವುದಿಲ್ಲ ಬೆಳಗ್ಗೆ 11 ಗಂಟೆಗೆ ಬಂದು ಸಾಯಂಕಾಲ 4:00 ಗಂಟೆಗೆ ಹೋಗುತ್ತಾರೆ ಹೀಗಾದರೆ ಯಡ್ರಾಮಿ ತಾಲೂಕಿನ 63 ಹಳ್ಳಿಗಳಿಂದ ಬರುವ ರೋಗಿಗಳ ಪರಸ್ಥಿತಿ ಏನಾಗಬೇಕು?” ವೈದ್ಯ ಹರಿಯೋ ನಾರಾಯಣ” ಎಂಬಂತೆ ವೈದ್ಯರನ್ನು ದೇವರೆಂದು ನಂಬಿರುವ ರೋಗಿಗಳಿಗೆ 24/7 ಸ್ವಿಫ್ಟ್ ವೈಸ್ ಕಾರ್ಯನಿರ್ವಹಿಸಬೇಕಾದ ನರ್ಸ್ ಗಳು ಹಾಗೂ ವೈದ್ಯರು ಇರುವುದಿಲ್ಲ ಗ್ರೂಪ್ ಡಿ ಸಿಬ್ಬಂದಿಗಳು ಡ್ರೆಸ್ ಕೋಡ್ ಇಲ್ಲದೆ ಕಲರ್ ಬಟ್ಟೆ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ ಹೃದಯ ಸಂಬಂಧಿ ಕಾಯಿಲೆ ತುರ್ತು ಸೇವಾ ಚಿಕಿತ್ಸೆಯಿಂದ ರೋಗಿಗಳು ವೈದ್ಯರ ಕೊರತೆಯಿಂದ ಆರೋಗ್ಯ ತಪಾಸಣೆ ಸಂಕಷ್ಟ ಅನುಭವಿಸುತ್ತಿದ್ದಾರೆ ಆಸ್ಪತ್ರೆ ಸ್ಟಾಪ್ ನರ್ಸ್ ಗಳು ಹಾಗೂ ಸಿಬ್ಬಂದಿಗಳು ಹೊರರೂಗಿಗಳಿಗೆ ಮತ್ತು ಒಳರೋಗಿಗಳಿಗೆ ತಾಳ್ಮೆ ಹಾಗೂ ಶಾಂತಿ ಸಮಾಧಾನ ವರ್ತನೆ ಮೂಲಕ ರೋಗಿಗಳಿಗೆ ಧೈರ್ಯ ತುಂಬಿ ಆರೋಗ್ಯ ತಪಾಸಣೆ ಮಾಡಿದರೆ 50% ಪರ್ಸೆಂಟೇಜ್ ಕಾಯಿಲೆ ವಾಸಿಯಾಗುವುದು ಆದರೆ ಸರಿಯಾಗಿ ಶಾಂತಿ ಸಮಾಧಾನದವರ್ತನೆ ಮೂಲಕ ರೋಗಿಗಳಿಗೆ ಸ್ಪಂದಿಸುವುದು ವೈದ್ಯರ ಹಾಗೂ ಸಿಬ್ಬಂದಿಗಳ ಕರ್ತವ್ಯ ಮತ್ತು ಜವಾಬ್ದಾರಿ ಕೂಡ ಹೌದು
ಹೀಗಿರುವಾಗ ಯಡ್ರಾಮಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇವೆಲ್ಲವೂ ತದ್ವಿರುದ್ಧವಾಗಿ ನಡೆಯುತ್ತಿವೆ ತಾಲೂಕು ಕೇಂದ್ರವಾಗಿರುವ ಯಡ್ರಾಮಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಇದ್ದರೆ ರೋಗಿಗಳು ಗುಣಮುಖವಾಗುವುದು ಹೇಗೆ ಹಾಗೂ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೆ ಔಷಧಿ ಕೊರತೆ ಬಗ್ಗೆ ವಿಚಾರಿಸಿದಾಗ ವೈದ್ಯರು ನಮಗೆ ಎಷ್ಟು ಔಷಧಿ ಕೊಡುತ್ತಾರೆ ಅಷ್ಟು ಮಾತ್ರ ನಾವು ರೋಗಿಗಳಿಗೆ ವಿತರಿಸುತ್ತೇವೆ ಹೆಚ್ಚಿನ ಮಾಹಿತಿ ಇಂಚಾರ್ಜ್ ವೈದ್ಯರಾದ ಡಾಕ್ಟರ್ ಶರ್ಮಾ ಅವರಿಗೆ ಕೇಳಿ ಎಂದು ಗಡಸು ಧ್ವನಿಯಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಈ ಎಲ್ಲಾ ವ್ಯವಸ್ಥೆ ಅತಿ ಶೀಘ್ರದಲ್ಲಿ ಬದಲಾವಣೆ ಆಗಬೇಕು ಮತ್ತು ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಈ ಎಲ್ಲಾ ಸಮಸ್ಯೆಗೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಎಲ್ಲಾ ಕನ್ನಡ ಪರ ಹಾಗೂ ರೈತಪರ ಸಂಘಟನೆಗಳು ಉಪವಾಸ ಧರಣಿ ಸತ್ಯಾಗ್ರಹ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವೀರೇಶ್ ಕವಲ್ದಾರ್ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಡ್ರಾಮಿ ತಾಲೂಕ ಅಧ್ಯಕ್ಷರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ವರದಿ :ವಿಜಯಕುಮಾರ್ ಜೆ ಮಲ್ಲೆದ