2,626 total views
ಪುಣ್ಯಭೂಮಿ ಕರುನಾಡಿದು
ಸಂಸ್ಕಾರ ಸಂಸ್ಕೃತಿಯ ತವರೂರಿದು
ಪುಣ್ಯ ಪುರುಷರ ಜೇನಿನಗೂಡಿದು
ಕವಿ ಕೋಗಿಲೆಗಳ ಕನ್ನಡ ನಾಡಿದು
ಕಲೆ ಸಾಹಿತ್ಯದ ವೈಭವದ ಪರಿ
ಸಾರುವ ಅಪ್ಪಟ ಭುವನೇಶ್ವರಿ
ಸಾರಿ ವಿವಿಧತೆಯಲ್ಲಿ ಏಕತೆ
ಇದೇ ನಮ್ಮ ಭಾವೈಕ್ಯತೆ
ಅದೆಷ್ಟೋ ಭಾಷೆ ಧರ್ಮಗಳ ಬೀಡು
ಒಪ್ಪಿ ಅಪ್ಪಿಕೊಳ್ಳುವ ಕನ್ನಡ ನಾಡು
ವೀರಶೌರ್ಯತೆ ಬಿಂಬಿಸುವ ಬೀಡು
ಶಿಲ್ಪ ಕಲೆ ಸಾಹಿತ್ಯ ಗತ ವೈಭವದ ನಾಡು
ಕನ್ನಡದ ಕಂಪು ರಾಷ್ಟ್ರಕವಿ ಕುವೆಂಪು
ಬೇರೂರಿರುವ ವಿಶ್ವಮಾನವನ ಕಂಪು
ಶಿಲ್ಪಕಲೆಯ ತವರೂರು
ಹಳೇಬೀಡು ಬೇಲೂರು
ಕದಂಬ ಹೊಯ್ಸಳರ ನಾಡು
ಈ ಕರುನಾಡ ಬೀಡು
ಮುಗಿಲಿಗೇರುವ ಕನ್ನಡದ ಬಾವುಟ
ಜೋಗ ಜಲಪಾತದ ಆರ್ಭಟ
ಕವಿ ಕೋಗಿಲೆಗಳ ನೋಟ
ಸವಿ ಜೇನು ಕನ್ನಡದ ಊಟ
ಉದಯಿಸುವ ಕನ್ನಡದ ರವಿ
ಚೆಲುವ ಸಾರುವ ಕವಿ
ಹೆಮ್ಮೆಯಿಂದ ಹಾರಿಸೋಣ ಕನ್ನಡದ ಬಾವುಟ
ಅರಿಶಿಣ ಕುಂಕುಮದ ಕನ್ನಡದ ಭೂಪಟ
ಓದೋಣ ಕವಿ ಕುಸುಮಗಳ ಸಾಹಿತ್ಯದ ಸಾರ
ಎಳೆಯೋಣ ಕನ್ನಡದ ತಾಯಿಯ ತೇರ
ಗೀತಾ ವಿ ಆರ್ ಶಿಕ್ಷಕಿ
ಬ್ಲಾಸಂಸ್ ಶಾಲೆ ಬಾಗಲಗುಂಟೆ ಬೆಂಗಳೂರು