2,628 total views
ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ವಿಜಯದಶಮಿಯ ನಿಮಿತ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೆಟಗುಡ್ಡ ಹೊಬಳಿ ಇವರು ಪಥಸಂಚಲನ ಆಯೋಜಿಸಿದ್ದರು. ಪಥಸಂಚಲನದಲ್ಲಿ ಯಾದವಾಡ ಗ್ರಾಮದ ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಕರು ಯುವಕರು ಘನವೇಷವನ್ನು ( ಬಿಳಿ ಷರ್ಟ, ಕಾಖಿ ಪ್ಯಾಂಟ್, ಲಾಟಿ, ಬಟ್ಟೆಯಿಂದ ತಯಾರಿಸಿದ ಬೆಲ್ಟ, ಖಾಕಿ ಸ್ವಾಕ್ಸ್, ಕರಿ ಷೂಜ್. ಕರಿ ಟೋಫಿ,) ಧರಿಸಿ ಸುಮಾರು 260 ಘನವೇ಼ಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು . ಪಥಸಂಚಲನವು ಯಾದವಾಡ ಗ್ರಾಮದ ಘಟ್ಟಗಿಬಸವೇಶ್ವರ ದೇವಸ್ಥಾನದಿಂದ ಆರಂಭವಾಗಿ ಗ್ರಾಮದ ಗೌರಿಕಟ್ಟಿ,ಮಾಚಕಟ್ಟಿ ಓಣಿ, ಶ್ರೀ ರಾಘವೇಂದ್ರ ಸ್ವಾಮಿ ಮಠ, ಪೇಠೆಯ ಹನುಮಾನ ಮಂದಿರ ಕಾಮನಕಟ್ಟೆಯಿಂದ ಬಸವೇಶ್ವರ ಸರ್ಕಲ ಮಾರ್ಗವಾಗಿ ಜಿ.ಎನ್.ಎಸ್. ಹೈಸ್ಕೂಲನಲ್ಲಿ ಭವ್ಯವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುಲಕ ಪಥಸಂಚಲನ ಮುಕ್ತಾಯವಾಯಿತು. ರಸ್ತೆಯುದ್ದಕ್ಕೂ ಗ್ರಾಮಸ್ಥರು ರಂಗೋಲಿ ಹಾಕಿ ಪಥಸಂಚಲನದಲ್ಲಿ ಭಾಗವಹಿಸಿದ ರಾಷ್ಟ್ರೀಯ ಸ್ವಯಂ ಸೇವಕರಿಗೆ ಪುಷ್ಪಗಳನ್ನು ಎಸೆಯುವದರ ಮುಲಕ ಪಥಸಂಚಲನಕ್ಕೆ ಗ್ರಾಮಸ್ಥರು ಭವ್ಯವಾದ ಸ್ವಾಗತವನ್ನು ಕೋರಿದರು.
ಕಾರ್ಯಕ್ರಮವು ಹಿಂದೂ ದ್ವಜಾರೋಹನ ಪ್ರಾರ್ಥನೆ ಸಲ್ಲಿಸುವ ಮುಲಕ ಆರಂಭಗೊಂಡಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಗ್ರಾಮದ ಡಾ: ವಿಶ್ವನಾಥ ತಂವಶಿ ಅವರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು 1925 ರಲ್ಲಿ ವಿಜಯದಶಮಿಯ ದಿವಸ ಡಾ: ಕೇಶವ ಬಲರಾಮ ಹೆಡ್ಗೆವಾರರವರು ಹುಟ್ಟುಹಾಕಿದರು ಎಂದರು. ದೇಶದಲ್ಲಿ ಸ್ವಾತಂತ್ರ್ಯ ಎಕತೆ ಮತ್ತು ಅಖಂಡತೆಯ ಉದ್ದೇಶದಿಂದ ಆರ್ ಎಸ್. ಎಸ್. ಅನ್ನುವ ಸಂಘಟನೆಯನ್ನು ಡಾ: ಕೇಶವ ಬಲರಾಮ ಹೆಡ್ಗೆವಾರರವರು ಕಟ್ಟಿದರು ಎಂದರು. ವಿಜಯಪೂರ ವಿಭಾಗದ ಪ್ರಚಾರಕರಾದ ಶ್ರೀ ರಾವಜಿ ಅವರು ಮಾತನಾಡಿ ಆರ್. ಎಸ್ ಎಸ್. ಸಂಘಟನೆಯ ತತ್ವ ಸಿದ್ದಾಂತಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿಗೂ ಕೋಮವಾದವನ್ನು ಪ್ರಚೋದಿಸುವುದಿಲ್ಲ. ದೇಶ ಸೇವೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ಎಕತೆ , ಇಲ್ಲಿನ ಸಂಸ್ಕ್ರತಿ ನೆಲ , ಜಲ, ಭಾಷೆ ಉಳಿಸುವಲ್ಲಿ ಕೆಲಸ ಮಾಡುತ್ತಿದೆ ಸಂಘವು ವ್ಯಕ್ತಿ ಚಾರಿತ್ರ್ಯವನ್ನು ಬದಲಾವಣೆ ಮಾಡಿ ರಾಷ್ಟ್ರೀಯ ಚಾರಿತ್ರ್ಯವನ್ನು ಬದಲಾವಣೆ ಮಾಡುತ್ತದೆ ಎಂದರು. ಯಾದವಾಡ ಗ್ರಾಮದ ಯುವಕರ ಉತ್ಸಾಹವನ್ನು ಕಂಡು ತುಂಬಾ ಸಂತೋಷವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರದಲ್ಲಿ ವಿಜಯಪೂರ ವಿಭಾಗದ ಪ್ರಚಾರಕರಾದ ಶ್ರೀ ರಾವಜಿ , ಮತ್ತು ಶ್ರೀ ಡಾ: ವಿಶ್ವನಾಥ ತಂವಶಿ ಗ್ರಾಮಪಂಚಾಯತಿಯ ಅಧ್ಯಕ್ಷರಾದ ಬಸವರಾಜ ಭೂತಾಳಿ, ಉಪಾಧ್ಯಕ್ಷರಾದ ಕಲ್ಮೇಶ ಗಾಣಗಿ , ಬಸಲಿಂಗಪ್ಪ ಢವಳೇಶ್ವರ, ರಾಜು ಕಲ್ಯಾಣಿ, ರಾಜೇಶ ಪಟೇಲ, ಎಸ್.ಜಿ. ಕಂಠಿಗಾವಿ, ಸುರೇಶ ವನಕಿ, ಚರಂತಯ್ಯ ಮಳ್ಳಿಮಠ , ಅಶೋಕ ಮಹಾಲಿಂಗಪೂರ ಮತ್ತು ಯಾದವಾಡ ಗ್ರಾಮದ ಗುರು ಹಿರಿಯರು ಮಾತೆಯರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.