2,906 total views
ಕಾಸರಗೋಡು: ಇತ್ತೀಚೆಗೆ ನಡೆದ ಕಾಸರಗೋಡು ಕನ್ನಡ ಗ್ರಾಮೋತ್ಸವವನ್ನು ಸಾಹಿತಿ, ಕನ್ನಡಪರ ಹೋರಾಟಗಾರ್ತಿ, ಪ್ರತಿಮಾ ಹಾಸನ್ ಉದ್ಘಾಟಿಸಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡ ಮಾಡುವ 2023ನೇ ಸಾಲಿನ ಕನ್ನಡ ಗ್ರಾಮೋತ್ಸವ ಪ್ರಶಸ್ತಿಯನ್ನು ನೀಡಲಾಯಿತು.
ಈ ಸಂದರ್ಭ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾದ ಅಧ್ಯಕ್ಷ ಶಿವರಾಮ ಕಾಸರಗೋಡು 58ನೇ ಜನ್ಮದಿನಾಚರಣೆ ಮತ್ತು ಅಮ್ಮ ಈವೆಂಟ್ಸ್ ನ 50ನೇ ಕಾರ್ಯಕ್ರಮ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಬಂದ ಉದ್ಘಾಟಕಿಯಾಗಿದ್ದ ಪ್ರತಿಮಾ ಹಾಸನ್ ಅವರನ್ನು ಮಾತನಾಡಿ ಗಡಿನಾಡಿನ ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವಂತಹ,ಕನ್ನಡವನ್ನು ಬೆಳೆಸುವಂತಹ, ಕಲಿಸುವಂತ ಕಾರ್ಯಗಳು ಆಗುತ್ತಿರುವುದು ಶ್ಲಾಘನೀಯ ಎಂದು ಇವರ ಕನ್ನಡಪರದ ಕೆಲಸ ಹೀಗೆ ಮುಂದುವರೆಯಲೆಂದು. ತಾನು ಕೊನೆಯ ಉಸಿರಿರುವವರೆಗೂ ಕನ್ನಡ ತಾಯಿಯ ಸೇವೆ ಮಾಡುವುದಾಗಿ ತಿಳಿಸಿ. ಪ್ರತಿಷ್ಠಾನದ ಕಾರ್ಯಗಳು ಹೀಗೆ ಮುಂದುವರಿಯಲಿ ಎಂದು ಆಶಿಸಿದರು. ನಂತರ ಹೆಚ್. ಎಸ್. ಪ್ರತಿಮಾ ಹಾಸನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಶಶಿಧರ್ ಶೆಟ್ಟಿ, ಕವಿ ಶಿವಪ್ರಸಾದ್ ಕೊಕ್ಕಡ, ಕಾಸರಗೋಡು ನಗರಸಭಾ ಮಾಜಿ ಸದಸ್ಯ ಶಂಕರ ಜೆ ಪಿ ನಗರ, ಕವಿ ಎಂ ಪಿ ಜಿಲ್ ಜಿಲ್, ಹರಿದಾಸ ಜಯಾನಂದ ಕುಮಾರ್, ಹೊಸದುರ್ಗ ಮತ್ತಿತರು ಉಪಸ್ಥಿತರಿದ್ದರು.