2,736 total views
ಮಂದಗೆರೆ ಕಲೆ -ಸಾಹಿತ್ಯ – ಸಾಂಸ್ಕೃತಿಕ ವೇದಿಕೆ , ಮತ್ತು ಮಂದಗೆರೆ ಮಾಧ್ಯಮ ಸಂಪರ್ಕ ಕೇಂದ್ರ. ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ಆಯ್ಕೆ ಮಾಡಲಾಗಿದ್ದು. ಅವರನ್ನು ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 01:11:2023ಗೌರವಿಸಲಾಯಿತು ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕಿ ಆದಂತಹ, ಹೆಚ್. ಎಸ್. ಪ್ರತಿಮಾ ಹಾಸನ್ ರವರು, ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಸಾಹಿತಿ, ಮತ್ತು ಕನಸಿನ ಭಾರತ ಪತ್ರಿಕೆಯ ಜಿಲ್ಲಾ ವರದಿಗಾರ್ತಿಯಾಗಿ, ಸಮಾಜ ಸೇವಕಿಯಾಗಿ, ಅಂಕಣಗಾರ್ತಿಯಾಗಿ, ಹಲವಾರು ಸಂಸ್ಥೆಗಳಲ್ಲಿ ಸಂಘಗಳಲ್ಲಿ ಜಿಲ್ಲಾಧ್ಯಕ್ಷರಾಗಿ, ಮಹಿಳಾ ಹೋರಾಟಗಾರ್ತಿಯಾಗಿ, ಗಾಯಕಿಯಾಗಿ, ವೃದ್ಧಾಶ್ರಮದಲ್ಲಿ ಕಾರ್ಯಕರ್ತೆಯಾಗಿ, ಬಾಲ ಮಂದಿರಗಳಲ್ಲಿನ ಸೇವೆ ಮತ್ತು , ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದಂತಹ ಸೇವೆಯನ್ನು ನಿಷ್ಕಲ್ಮಶವಾಗಿ ಮಾಡುತ್ತಿರುವ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹೆಚ್ಎಸ್ ಪ್ರತಿಮಾ ಹಾಸನ್ ರವರು ಕನ್ನಡದ ಬಗೆಗೆ ಕವನ ವಾಚನವನ್ನು ಮಾಡಿ, ಮೆಚ್ಚುಗೆಯನ್ನು ಪಡೆದರು, ಪ್ರಶಸ್ತಿಯನ್ನು ಪಡೆದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಮಂದಗೆರೆ ರಾಜಕುಮಾರ್, ಹಾಸನದ ಸುಮಾ ರಮೇಶ್, ಅನಿತ. ಪಿ. ಕೆ. ಮತ್ತು ಚಂಪಾ ಚಿನಿವಾರ್. ಕರುನಾಡ ಟಿ. ವಿ. ಯ ಶ್ರೀ ಮೊಹಮ್ಮದ್ ಹನಿಫ್, ಡಾ. ಅಂಬರೀಶ್ ಜೀ. ಗೌರವಧ್ಯಕ್ಷರು ಇನ್ನೂ ಹಲವರು ಉಪಸ್ಥಿತರಿದ್ದರು.