3,633 total views
ಕಾರವಾರ:ಮಾಜಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸೋಲಿಗೆ ಕಾರಣ ಏನು ಎಂಬುದು ಅವಲೋಕನ ಮಾಡಿಕೊಳ್ಳಲಿ ಡಿಸಿಸಿ ಉಪಾಧ್ಯಕ್ಷ ಆರ್ ಎಚ್ ನಾಯ್ಕ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಕ್ರಮವನ್ನು ರಾಜ್ಯದ ಜನ ಮೆಚ್ಚಿಕೊಂಡಿದ್ದಾರೆ. ಆದರೆ ಮಾಜಿ ಶಾಸಕರು ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿ ಅನೇಕ ನಾಯಕರು ಸೋಲಿನ ಹತಾಶೆ ಇಂದ ನಮ್ಮ ಪಕ್ಷದ ವಿರುದ್ದ ಕೆಲವು ದಿನಗಳ ಹಿಂದೆ ಪ್ರತಿಭಟಿಸಿ ಕಾಂಗ್ರೆಸ್ ಪಕ್ಷವು ಜನರ ಪರವಾಗಿ ಕೆಲಸ ಮಾಡಿಲ್ಲ. ಭ್ರಷ್ಟಚಾರದ ಮೂಲಕ ಹಣ ಸಂಗ್ರಹಿಸಿಸುತ್ತಿದೆ ಎಂದು ಪ್ರತಿಭಟನೆಯಲ್ಲಿ ಆರೋಪ ಮಾಡಿದರು. ಇವರು ನಮ್ಮ ಗ್ಯಾರಂಟಿ ಯೋಜನೆಗಳಿಂದ ಹತಾಶರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದು ಅರಿವಾಗಿದೆ.ಇವರೆಲ್ಲಾ ಮನಸಿಗ್ಗೆ ಬಂದಂತೆ ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದಿದ್ದೇವೆ. ಒಳ್ಳೆಯ ಯೋಜನೆಗಳ ವಿರುದ್ದ ಆಪಾದನೆ ಮಾಡಿ ಜನರಲ್ಲಿ ತಪ್ಪು ಸಂದೇಶ್ ರವಾನಿಸಿ ಜನರಲ್ಲಿ ಗೊಂದಲ ಸ್ರಷ್ಟಿ ಮಾಡುವುದೇ ಇವರ ಕೆಲಸವಾಗಿದೆ.ದೇಶಕ್ಕೆ ಸ್ವಾತಂತ್ರ ಸಿಕ್ಕ ಸಂಧರ್ಭದಲ್ಲಿ ಜವಾಹರಲಾಲ್ ನೆಹರು ಪಂಚವಾರ್ಷಿಕ ಯೋಜನೆಯ ಮೂಲಕ ಕೃಷಿ ಕೈಗಾರಿಕೆ,ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸುಧಾರಣೆ ಅಪಾರ ಜಾರಿಗೆ ತಂದು ಪ್ರತಿವರ್ಷ ಅಭಿವೃದ್ಧಿಯೂ ಇಂತೀಷ್ಟು ಆಗಬೇಕೆಂಬ ದೂರಾಲೋಚನೆಯಿಂದಲೇ ನಮ್ಮ ದೇಶ ಅಭಿವೃದ್ಧಿಯ ದಾಪುಗಾಲು ಹೊಂದುತ್ತಿದೆ.ಇಂದಿರಾ ಗಾಂಧಿಯವರು ಕೂಡ ವಿಧವಾ ವೇತನ,ವ್ರದ್ಯಾಪ ವೇತನ,ಸೂರಿಲ್ಲದವರಿಗೆ ಹಾಗೂ ಬಡವರಿಗೆ ಮನೆ ನೀಡುವುದು ೨೦ ಅಂಶದ ಕಾರ್ಯಕ್ರಮದ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋದರು. ದೀನ ದಲಿತ್ ಬಡವ ಅಲ್ಪಸಂಖ್ಯಾತರನ್ನು ಮೇಲಕ್ಕೆತ್ತುವ ಕಾರ್ಯ ಆ ಯೋಜನೆಗಳಿಂದ ಆಗಿದೆ. ಕ್ರಷಿ ಅಭಿವೃದ್ಧಿಯ ಮೂಲಕ ಸ್ವಂತ ಕಾಲ ಮೇಲೆ ನಿಲ್ಲಲಿಕ್ಕೆ ಶಕ್ತಿಗಳಿಸಿಕೊಳ್ಳಲು ಕಾರಣ ನಮ್ಮ ಕಾಂಗ್ರೆಸ್ ಸರ್ಕಾರ ಎಂದರು.ಕಾಗೇರಿ ಅವರು ಸುಳ್ಳು ಹೇಳುವ ಮೊದಲು ಇತಿಹಾಸ ಒಮ್ಮೆ ತೆರೆದು ನೋಡಲಿ. ಮುಂದಿನ ಲೋಕಸಭಾ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಭ್ರಷ್ಟಾಚಾರ ಮೂಲಕ ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎನ್ನುವ ಸುಳ್ಳು ಆಪಾದನೆ ಮಾಡುತ್ತಿದ್ದಾರೆ.ಪ್ರಜಾಸತ್ತಾತ್ಕವಾಗಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಭ್ರಷ್ಟಚಾರವನ್ನು ಮಾಡಿದವ್ರು ಯಾರು? ಮುಂಬೈ ನಲ್ಲಿ ಶಾಸಕರನ್ನು ಕಳುಹಿಸಿ ಭ್ರಷ್ಟಚಾರ ಸರ್ಕಾರ ನಡೆಸಿದ್ದು ಯಾರು ಅಂತಾ ಜನಸಾಮಾನ್ಯರಿಗೆ ಅರಿವಾಗಿದೆ . ಮಾಡಾಳ್ ವಿರೂಪಾಕ್ಷ ಕಚೇರಿ ಮೇಲೆ ರೈಡ ಆದ ಎರಡು ಕೋಟಿ ಹಣ ಮಗನ ಮನೆಯಲ್ಲಿ ಆರು ಕೋಟಿ ಸಾಬೂನು ಮಾರ್ಜಕ್ ಕಛೇರಿಯಲ್ಲಿ ಎರಡು ಕೋಟಿ ದೊರೆಯಿತು.ಯಾರದ್ದೋ ಮನೆಯಲ್ಲಿ ಸಿಕ್ಕ ಹಣವನ್ನು ಕಾಂಗ್ರೆಸ್ ನವರ ಮನೆಯಲ್ಲಿ ಸಿಕ್ಕಿದ್ದು ಎಂದು ಸುಳ್ಳು ಸುದ್ದಿ ಹರಡಿಸುವ ಕೆಲಸ ಬಿಜೆಪಿಗರಿಂದಲೇ ಆಗುತ್ತಿದೆ.ಅಂದು ಇವರದ್ದೇ ಸರ್ಕಾರ ಇದ್ದಾಗ ಪಂಚಾಯತ್ ರಾಜ್ ಸಚಿವರಾಗಿದ್ದ ಈಶ್ವರಪ್ಪ ಮನೆಯಲ್ಲಿ ಹಣ ಎಣಿಸುವ ಮಷಿನ್ ಲೋಕಾಯುಕ್ತರು ಹಿಡಿದಿದ್ದರು.ಹಿಂದೆಯೂ ಭ್ರಷ್ಟಚಾರ ಸರ್ಕಾರದಲ್ಲಿದ್ದಾಗಲೂ ಭ್ರಷ್ಟಚಾರ ಮುಂದೆ ಅಧಿಕಾರಕ್ಕೆ ಬರಲು ಭ್ರಷ್ಟಚಾರ ಮಾಡುತ್ತಿರುವುದು ಬಿಜೆಪಿ. ಆಡಳಿತ ಕೊನೆಯ ಸಮಯದಲ್ಲಿ ಸಾವಿರಾರು ಕೋಟಿ ನಿಯಮ ಮೀರಿ ಮಂಜೂರಿಸಿದ ಕಾಮಗಾರಿಗಳ ಬಿಲ್ ಪಾವತಿ ಮಾಡುವ ಹೊಣೆ ನಮ್ಮ ಸರ್ಕಾರದ ಮೇಲಿದೆ. ಮಾಡಿದ ಕಾಮಗಾರಿ ಕೂಡ ಕಳಪೆ ಮಟ್ಟದ್ದು ಇವರ ಭ್ರಷ್ಟಚಾರ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಈಗಾಗಲೇ ರಚನೆಯಾಗಿದೆ ಎಂದು ತಿಳಿಸಿದರು ಈ ಪತ್ರಿಕಾಗೋಷ್ಠಿಯಲ್ಲಿ ಗಾಂಧೀಜಿ ಆರ್ ನಾಯ್ಕ್,ಮೋಹನ್ ಆಚಾರಿ,ಕೃಷ್ಣ ಮಾರಿಮನೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.