3,637 total views
ಯಡ್ರಾಮಿ ಸುದ್ದಿ: ಪಟ್ಟಣದ ದೇಸಾಯಿ ಬಡಾವಣೆಯಲ್ಲಿ ನವರಾತ್ರಿ ಹಾಗೂ ದಸರಾ ಉತ್ಸವದ ಅಂಗವಾಗಿ ಅಂಬಾ ಭವಾನಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಗುಂಡು ಹಾಗೂ ಗೋಣಿಚೀಲ ಎತ್ತುವ ಪಂದ್ಯಾವಳಿಯಲ್ಲಿ ಕರೆಪ್ಪ ಹೊಸ್ಮನಿ ಇವರು 200 ಕೆಜಿ ಗೋಣಿಚೀಲ ಎತ್ತುವುದರ ಮೂಲಕ ಹಾಗೂ 175 ಕೆಜಿ ಗುಂಡು ಎತ್ತುವುದರ ಮೂಲಕ ಎರಡರಲ್ಲೂ ಪ್ರಥಮ ಸ್ಥಾನ ಗಿಟ್ಟಿಸಿಕೊಂಡ ಏಕೈಕ ವ್ಯಕ್ತಿ ಪೈಲ್ವಾನ್ ಕರೆಪ್ಪ ಹೊಸಮನಿ ಇವರಿಗೆ ಯಡ್ರಾಮಿ ಪಟ್ಟಣದ ವಿರಕ್ತ ಮಠದ ಮಠಾಧೀಶರಾದ ಶ್ರೀ ಶ ಬ್ರಹ್ಮ ಮು ಸಿದ್ದಲಿಂಗ ಸ್ವಾಮೀಜಿ ಅವರು 50 ಗ್ರಾಂ ಬೆಳ್ಳಿ ಖಡ್ಗ ಹಾಗೂ ನಗದು ಹಣ ಬಹುಮಾನ ವಿತರಿಸಿ ಸನ್ಮಾನಿಸಿದರು ದ್ವಿತೀಯ ಸ್ಥಾನ ಅಖಂಡ ಹಳ್ಳಿ ಪರಶುರಾಮ್ ಇವರ ಪಾಲಾಯಿತು ಈ ಸಂದರ್ಭದಲ್ಲಿ ಪಟ್ಟಣದ ಸ್ಥಳೀಯರು ರಾಮು ನಾವಿ ಸೋಮರಾಯ ಹೊಸಮನಿ ಮಾಂತೇಶ ಚೆಲುವಾದಿ ರಮೇಶ್ ಮೇಲಿನಮನಿ ಇನ್ನಿತರರು ಉಪಸ್ಥಿತರಿದ್ದರು
ವರದಿ:ವಿಜಯಕುಮಾರ್ ಜೆ ಮಲ್ಲೇದ್