3,639 total views
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಟಿಕೆಟ್ ಗಟ್ಟಿಸಿಕೊಳ್ಳಲು ರಾಜ್ಯ ನಾಯಕರ ಭೇಟಿಯಾಗಿ ಲೋಕಸಭಾ ಟಿಕೆಟ್ ಗಾಗಿ ಬೇಡಿಕೆ ಇಟ್ಟಿರುವ ಮಾಹಿತಿ ಲಭ್ಯವಾಗಿದೆ.
ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ನಿವಾಸದಲ್ಲಿ ಭೇಟಿಯಾಗಿ ರಾಜಕೀಯದ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಕುಮಟಾ -ಹೊನ್ನಾವರ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಹೊರಹೊಮ್ಮಿದ ಕಾಂಗ್ರೆಸ್ ಪಕ್ಷದ ಮುಖಂಡರಾದ ಆರ್ ಎಚ್ ನಾಯ್ಕ್ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ಮೂಲಕ ಕೇಂದ್ರ ಚುನಾವಣಾ ಸಮಿತಿಯಲ್ಲಿ ತಮ್ಮ ಹೆಸರು ತಲುಪಿಸುವಂತೆ ಜಾರಕಿಹೊಳಿ ಅವರಿಗೆ ಮನವಿ ಮಾಡಿ ಕೊಂಡಿದ್ದರು. ಕೊನೆಯ ಹಂತದವರೆಗೂ ಟಿಕೆಟಗಾಗಿ ಪ್ರಯತ್ನ ಮಾಡಿ.ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿತ್ತು.ಘೋಷಣೆ ಆದ ಅಭ್ಯರ್ಥಿಪರ ಪ್ರಚಾರದಲ್ಲಿ ತೊಡಗಿಕೊಂಡರು.ಇತ್ತೀಚಿಗೆ ಅಷ್ಟೇ ಉತ್ತರಕನ್ನಡ ಜಿಲ್ಲಾ ಉಪಾಧ್ಯಕ್ಷರ ಹುದ್ದೆ ಲಭಿಸಿದ್ದು.ಮುಂಬರುವ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.ಕಳೆದ ಬಾರಿಯೂ ದೆಹಲಿ ನಾಯಕರನ್ನು ಭೇಟಿ ಮಾಡಿ ಟಿಕೆಟ್ ಬೇಡಿಕೆ ಇಟ್ಟಿದ್ದು .ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಟಿಕೆಟ್ ನೀಡುವಂತೆ ಲೋಕೋಪಯೋಗಿ ಸಚಿವರ ಮೂಲಕ ತಮ್ಮ ಹೆಸರು ಶಿಫಾರಸು ಮಾಡಲು ಮನವಿ ಮಾಡಿಕೊಂಡಿದ್ದಾರೆ. ಈ ಬಾರಿಯಾದರು ಅದ್ರಷ್ಟ ಒಲಿಯಲಿದೆಯಾ ಕಾದುನೋಡಬೇಕಾಗಿದೆ.