2,615 total views
ಕಲಬುರಗಿ:- ಸಮಗ್ರ ಕರ್ನಾಟಕ ಉಪಾಧ್ಯಯರ ಪ್ರಗತಿಪರ ಸಂಘ ದಿಂದ ಕಲಬುರಗಿ ಗೀತಾ ನಗರದ ಬ್ರಹ್ಮಕುಮಾರಿ ಸಂಭಾಗಣದಲ್ಲಿ ನಡೆದ ಆದರ್ಶ ಉಪಾಧ್ಯಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದವರಾದ ಹಾಗೂ ಕಲಬುರಗಿ ಜಿಲ್ಲೆಯ ಪ್ರಸಿದ್ಧ ಆನ್ ಸ್ಪಾಟ್ ನ್ಯೂಸ್ ಸ್ಥಳೀಯ ಕೇಬಲ ವಾಹಿನಿಯ ಮುಖ್ಯಸ್ಥರಾದ ಅಕ್ರಂಪಾಶಾ ಮೋಮಿನ್ ಅವರ ಮಾದ್ಯಮ ಕ್ಷೇತ್ರದ 9 ವರ್ಷದ ಸೇವೆಯನ್ನು ಗುರುತಿಸಿ ಆದರ್ಶ ಉಪಾಧ್ಯಯರು ಪ್ರಶಸ್ತಿಯನ್ನು ಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುರೇಶ ಸಜ್ಜನ ಪ್ರದಾನ ಮಾಡಿದ್ದರು. ಹರ್ಷ: ಅಕ್ರಂಪಾಶಾ ಮೋಮಿನ್ ಅವರಿಗೆ ಆದರ್ಶ ಉಪಾಧ್ಯಯರು ಪ್ರಶಸ್ತಿ ಸಿಕ್ಕಿರುವ ನಿಮಿತ್ಯ ಕಾಳಗಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ರೇವಣ ಸಿದ್ದಬಡಾ, ಸುಲೇಪೇಟ ಗ್ರಾಮದ ಮಾಜಿ ಗ್ರಾ.ಪಂ ಅಧ್ಯಕ್ಷ ಜಹೀರ ಪಟೇಲ್, ಚಿಂಚೋಳಿ ತಾಲೂಕಿನಮಜ್ಲಿಸ್ ಎ ಟಿಪ್ಪು ಸುಲ್ತಾನ ಕಮಿಟಿ ತಾಲೂಕು ಅಧ್ಯಕ್ಷ ಮೋಹಿನ್ ಮೋಮಿನ, ನಾಗೇಶ ತೇಲ್ಕೂರ, ಬುರಾನ ಪಟೇಲ್ , ಕರ್ನಾಟ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ , ಸೇರಿದಂತೆ ಅನೇಕ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿಗಾರರು-ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್