2,663 total views
ಉತ್ತರಕನ್ನಡ: ಕುಮಟಾದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಮಟಾ ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಶಾಸಕ ದಿನಕರ ಶೆಟ್ಟಿಯವರು ಉದ್ಘಾಟನೆ ಮಾಡಿದರು. ಕರ್ನಾಟಕ ಸರ್ಕಾರ, ಜಿ. ಪಂ. ಉತ್ತರಕನ್ನಡ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಇವರ ಸಹಯೋಗದೊಂದಿಗೆ ಈ ಕ್ರೀಡಾಕೂಟವು ನೆರವೇರಿತು.
ತಾ. ಪಂ. ಆಡಳಿತಧಿಕಾರಿ ಹಾಗೂ ಡಯಟ್ ಉಪನಿರ್ದೇಶಕ(ಅಭಿವೃದ್ಧಿ) ಎನ್. ಜಿ. ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್, ಪುರಸಭಾ ಸದಸ್ಯ ಸೂರ್ಯಕಾಂತ್ ಗೌಡ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ರೇಖಾ ನಾಯ್ಕ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್. ಬಿ. ನಾಯ್ಕ್, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಅನಂದು ಗಾಂವಕರ ಮತ್ತು ತಾಲೂಕಾ ಅಧ್ಯಕ್ಷ ರವೀಂದ್ರ ಭಟ್ ಸೂರಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ದೀಪಕ ನಾಯ್ಕ್, ನಾಡುಮಾಸ್ಕೇರಿ ಗ್ರಾ. ಪಂ. ಸದಸ್ಯ ರಾಜೇಶ್ ನಾಯಕ, ವೇದಿಕೆಯಲ್ಲಿ ಇದ್ದರು.