2,141 total views
ನೂರೊಂದು ಭಾವ ತುಂಬಿದೆ
ನನ್ನ ಹೃದಯದ ಗೂಡಿನಲ್ಲಿ
ನೂರೊಂದು ಕನಸು ತುಂಬಿದೆ
ನನ್ನ ಮನದಾಳದ ಗೂಡಿನಲ್ಲಿ||
ಮೌನದ ರೂಪದ ಚಲುವಿಗೆ
ಮನವು ಸೋತು ಸೊರಗಿದೆ
ಚಂದುಳ್ಳ ಚಲುವಿನ ಮೊಗದಲಿ
ಕಾಂತಿಯ ನೋಟವು ತುಂಬಿದೆ||
ಅಂದ ಚೆಂದದ ಮಲ್ಲಿಗೆ ನೋಟವು
ದುಂಬಿಯು ಹೀರುವ ಸವಿ ನೋಟ
ಅಂತರಂಗದ ಪರಿಮಳ ಆಟವು
ಎನತಂಹ! ಬಣ್ಣಿಸಲಿ ಸವಿದೂಟ||
ಕಾನನ ಮಡಿಲಲ್ಲಿ ಬೆಳೆಯದು
ಮಾನವಗೆ ದಾನವಾಗಿ ಮುಡಿದು
ನಿನ್ನ ಪರಿಮಳದ ಕಾಂತಿ ಹರಡಿ
ಚಂದುಳ್ಳ ಚಲುವಿನ ನೋಟ ಸಾಕ್ಷಿ||
ನೂರೊಂದು ಭಾವ ತುಂಬಿದೆ
ಎನ್ನ ಹೃದಯ ಗೂಡಿನ ಹಂದರಲಿ
ಕುಸುಮಾಲೆ ಅರಳಿ ಬೀರುವೆ
ಸುವಾಸನೆ ಸುಂದರ ಸುಮಧುರ||
ಶ್ರೀ ಮಹಾಂತೇಶ ಎನ್ ಪಾಟೀಲ
ಯುವ ಕವಿ ಯಾತನೂರ
ಸ,ಶಿ,ರಂಜಣಗಿ