2,573 total views
ದಿನಾಂಕ -17-9-2023 ರಂದು ಮಿನಿ ವಿಧಾನ ಸೌಧ ಶಿರಸಿ ಇಲ್ಲಿ ಸರಕಾರದ ವತಿಯಿಂದ ವಿಶ್ವಕರ್ಮ ಜಯಂತಿ ಯನ್ನು ಆಚರಿಸಲಾಯಿತು ಸಭೆಯಲ್ಲಿ ಭೀಮಣ್ಣ ಟಿ ನಾಯ್ಕ್ ಶಾಸಕರು ಶಿರಸಿ ಸಿದ್ದಾಪುರ ಹಾಗೂ grade2 ತಹಶೀಲ್ದಾರ ರಾದ ರಮೇಶ್ ಹೆಗ್ಡೆ ಯವ್ರು ಹಾಗೂ ಶಿರಸಿ ಘಟಕದ ತಾಲೂಕ ಅಧ್ಯಕ್ಷರಾದ ಶ್ರೀ ವಿಶ್ವನಾಥ
ಆಚಾರ್ಯ ರವರು ಹಾಗೂ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಮಾಲಿನಿ ಆಚಾರ್ಯ ರವರು ಹಾಗೂ ಇ ಡಿ ಕಮ್ಮಾರ್ ರವರು ಉಪಸ್ಥಿತರಿದ್ದರು. ಮಾರಿಕಾಂಬಾ ದೇವಸ್ಥಾನದಿಂದ ಹೊರಟ ವಿಶ್ವಕರ್ಮ ರಥವು ದೇ
ವಿಕೆರೆ ಅಶ್ವಿನಿ ಸರ್ಕಲ್ ಮಾರ್ಗವಾಗಿ ಮಿನಿ ವಿಧಾಸೌದ ತಲುಪಿತು. ಶಾಸಕರಾದ ಭೀಮಣ್ಣ ನಾಯ್ಕ್ ರವರು ವಿಶ್ವಕರ್ಮನಿಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರುಸಭೆಯನ್ನು ಉದ್ದೇಶಿಸಿ
ಮಾತನಾಡಿದ ಅವರು ವಿಶ್ವಕರ್ಮ ಸಮಾಜದ ಏಳಿಗೆಯ ಬಗ್ಗೆ ಎಲ್ಲಾರೀತಿಯ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ ಆಚಾರ್ಯ ವಿಶ್ವಕರ್ಮ ಏಳಿಗೆಗೆ ಸರ್ಕಾರ ಗಮನ ಹರಿಸಬೇಕು ವಿಶ್ವಕರ್ಮ ಸಮಾಜದ ಸಾಧಕರನ್ನು ಗುರುತಿಸಿ ವಿಶ್ವಕರ್ಮ ಪ್ರಶಸ್ತಿಯನ್ನು ಸರಕಾರ ಘೋಷಿಸಬೇಕು ಎಂದು ಮನವಿ ಮಾಡಿದರು. ಸುಧಾ ಸೀತಾರಾಮ್ ಆಚಾರ್ಯ ಶಿಕ್ಷಕರು ಕೊರ್ಲಕಟ್ಟಾ ಇವರು ವಿಶ್ವಕರ್ಮನ ಚರಿತ್ರೆ ಯನ್ನು ಸುಂದರ ವಾಗಿ ಎಲ್ಲರ ಮನ ಮುಟ್ಟುವಂತೆ ಮಾತನಾಡಿದರು. ಕೊನೆಯಲ್ಲಿ ಆನಂದ ಆಚಾರ್ಯ ಅವರು ಎಲ್ಲರನ್ನು ವಂಧಿಸಿದರು.ಕಾರ್ಯ ಕ್ರಮದ ಆರಂಭದಿಂದ ಕೊನೆಯ ವರೆಗೂ ಎಲ್ಲರನ್ನು ಗಮನಸೆಳೆದ ಅಂಕೋಲಾದ ಕಾಣಗೇರಿಯ ಧವನ್ ರವೀಂದ್ರ ಆಚಾರ್ಯ ಇವನು ವಿಶ್ವಕರ್ಮ ಸ್ವಾಮಿಯ ವೇಷಧಾರಿಯಾಗಿ ಎಲ್ಲರ ಗಮನವಸೆಳೆದರು. ಸಮಾಜದ ವತಿಯಿಂದ ಶಾಸಕರಾದ ಭೀಮಣ್ಣ ನಾಯ್ಕ್ ರನ್ನು ಸನ್ಮಾನಿಸಿ ನೆನಪಿನ ಕಾಣಿಕೆಯಾಗಿ ವಿಶ್ವಕರ್ಮ ಮೂರ್ತಿಯನ್ನು ನೀಡಲಾಯಿತು ಹಾಗೂ ಗ್ರೇಡ್ 2 ತಶೀಲ್ದಾರರಾದ ರಮೇಶ್ ಹೆಗ್ಡೆ ಯವರಿಗೂ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು