2,472 total views
ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಮತ್ತು ಸುತ್ತಮುತ್ತಲ ಹಳ್ಳಿಗಳ ವಿಶ್ವಕರ್ಮ ಕುಲ ಬಾಂಧವರಿಂದ ಪಂಚಾಯಿತಿಯಲ್ಲಿ ಕುಲ ವೃತ್ತಿಯಲ್ಲಿ ಸಾಧನೆ ಗೈದ ಹಿರಿಯ ಮುಖಂಡರಿಗೆ ಸನ್ಮಾನ ಹಾಗೂ ಇದರ ಜೊತೆಗೆ ಉತ್ತಮ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದರೊಂದಿಗೆ ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಎಲ್ಲಾ ಕುಲ ಬಾಂಧವರು ಸೇರಿ ಮೊದಲಿಗೆ ವಿಶ್ವಕರ್ಮ ಕುಲದೇವತೆಯಾದ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತದ ನಂತರ ಡೋಲು ಮೇಳಗಳ ಸಮೇತ ವಿಶ್ವಕರ್ಮ ಹಾಗೂ ವೀರ ಬ್ರಹ್ಮೇಂದ್ರ ಸ್ವಾಮಿ ಪೋಟೋ ದೊಂದಿಗೆ ದಿಬ್ಬೂರಹಳ್ಳಿ ವೃತ್ತದಿಂದ ಪಂಚಾಯಿತಿ ಹತ್ತಿರ ಬಂದು ದೀಪ ಬೆಳಗಿಸಿ ಉದ್ಘಾಟನೆ ಪ್ರಾರಂಭಿಸಿದ ನಂತರ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಡಾ// ಧನುಂಜಯರೆಡ್ಡಿಯವರು ವಿಶ್ವಕರ್ಮ ಎಂಬುವರು ಸೃಷ್ಟಿಯ ದೇವರು ವಿಶ್ವಕರ್ಮ ಭಗವಂತ ವಿಶ್ವಕರ್ಮ ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನ ಏಳನೇ ಮಗ ಎಂದು ನಂಬಲಾಗಿದೆ. ವಿಶ್ವಕರ್ಮರನ್ನು ನಿರ್ಮಾಣದ ದೇವರು ಎಂದು ಪರಿಗಣಿಸಲಾಗಿದೆ. ರಾವಣನಿಗಾಗಿ ಲಂಕೆಯನ್ನು, ಪಾಂಡವರಿಗೆ ಇಂದ್ರಪ್ರಸ್ಥವನ್ನು ಮತ್ತು ಶ್ರೀಕೃಷ್ಣನಿಗೆ ದ್ವಾರಕವನ್ನು ವಿಶ್ವಕರ್ಮನು ನಿರ್ಮಿಸಿದನು ಎಂದು ಹೇಳಲಾಗುತ್ತದೆ.
ಭಗವಂತ ವಿಶ್ವಕರ್ಮನನ್ನು ವಾದ್ಯಗಳು, ಉಪಕರಣಗಳು ಮತ್ತು ಸಲಕರಣೆಗಳ ದೇವರು ಎಂದು ಪರಿಗಣಿಸಲಾಗುತ್ತದೆ. ಅವನ ಐದು ಜನ ಮಕ್ಕಳು ಮನು, ಮಯ, ತ್ವಷ್ಟ್ರು, ಶಿಲ್ಪಿ, ವಿಶ್ವಜ್ಞ ಎಂಬ ಹೆಸರುಗಳಿವೆ. ಅವರೇ ಕಬ್ಬಿಣ, ಮರ, ಕಂಚು, ಶಿಲೆ ಮತ್ತು ಸುವರ್ಣಾದಿಗಳಲ್ಲಿ ಕೆಲಸ ಮಾಡುವ ಪಾಂಚಾಳರು. ಇವರು ವಿಶ್ವಕರ್ಮನ ಗೋತ್ರೋದ್ಭವರು. ಎಂದು ವಿಶ್ವಕರ್ಮರವರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷರಾದ ವೆಂಕಟಲಕ್ಷ್ಮಮ್ಮ, ಉಪಾಧ್ಯಕ್ಷರಾದ ಅನುರಾಧ ಕೃಷ್ಣಮೂರ್ತಿ, ಸದಸ್ಯರುಗಳಾದ ನಾಗರತ್ನಮ್ಮ, ನಿಶ್ಚಿತ ಮಂಜುನಾಥ, ನಾರಾಯಣಸ್ವಾಮಿ, ಮಂಜುನಾಥ, ಶ್ರೀನಿವಾಸ್, ಊರಿನ ಹಿರಿಯ ಮುಖಂಡರಾದ ಶಿವಣ್ಣ ಹಾಗೂ ವಿಶ್ವಕರ್ಮ ಎಲ್ಲಾ ಕುಲ ಬಾಂಧವರು ಸೇರಿದ್ದರು.