2,885 total views
ಭಟ್ಕಳ-ಶ್ರೀಮಹಾಗಣಪತಿ-ಮಹಾಸತಿ (ಎಂ.ಜಿ.ಎಂ) ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ, ಸರ್ಪನಕಟ್ಟೆ ತಾ|| ಭಟ್ಕಳ (ಉ.ಕ) ಸಹಕಾರಿಯ 9ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ದಿನಾಂಕ:11-09-2023 ರಂದು 11.00ಕ್ಕೆ ಸಹಕಾರಿಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಹಕಾರಿಯ ಅಧ್ಯಕ್ಷರಾದ ಶ್ರೀ ಈರಪ್ಪ ಮಂಜಪ್ಪ ನಾಯ್ಕ. ಗರ್ಡೀಕರ ವಹಿಸಿದ್ದು, ಸಹಕಾರಿಯ ಉಪಾಧ್ಯಕ್ಷರು. ನಿರ್ದೇಶಕರು. ಸಹಕಾರಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಸಹಕಾರಿಯು 2014 ರಂದು ಪ್ರಾರಂಭವಾಗಿ 9 ವರ್ಷ ಪೂರೈಸುತ್ತಿದ್ದು, ಪ್ರತಿವರ್ಷವೂ ಲಾಭಗಳಿಸುತ್ತಿದ್ದು ಪ್ರಗತಿ ಪಥದಲ್ಲಿ ಮುಂದುವರಿಯುತ್ತಿದ್ದು ಶ್ರೀಮಹಾಗಣಪತಿ-ಮಹಾಸತಿ (ಎಂ.ಜಿ.ಎಂ) ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ, ಸರ್ಪನಕಟ್ಟೆ , ಭಟ್ಕಳ ಕಳೆದ ಆರ್ಥಿಕ ವರ್ಷದಲ್ಲಿ 40.97 ಲಕ್ಷ ರೂಪಾಯಿ ಲಾಭ ಗಳಿಸಿದೆ. ಸಭೆಯಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀ ಈರಪ್ಪ ನಾಯ್ಕ ಗರ್ಡೀಕರ, ಉಪಾಧ್ಯಕ್ಷರಾದ ಶ್ರೀ ಎಂ.ಜಿ.ಅರುಣಕುಮಾರ್, ನಿರ್ದೇಶಕರುಗಳಾದ ಶ್ರೀಮತಿ ಜ್ಯೋತಿ ನಾಯ್ಕ, ಶ್ರೀ ಮಂಜುನಾಥ ನಾಯ್ಕ, ಶ್ರೀ ಉದಯ ನಾಯ್ಕ, ಶ್ರೀ ಸುರೇಶ ನಾಯ್ಕ, ಶ್ರೀ ವಿಶ್ವನಾಥ ಶೆಟ್ಟಿ, ಶ್ರೀ ಮಾದೇವ ನಾಯ್ಕ, ಶ್ರೀಮತಿ ಸವಿತಾ ನಾಯ್ಕ, ಶ್ರೀಮತಿ ಆಶಾ ನಾಯ್ಕ, ಶ್ರೀ ನಾಗಪ್ಪ ನಾಯ್ಕ, ಶ್ರೀ ಈಶ್ವರ ಮೊಗೇರ್, ಶ್ರೀ ನವನೀತ್ ನಾಯ್ಕ, ಶ್ರೀ ಜಗದೀಶ ನಾಯ್ಕ, ಶ್ರೀ ಜಗದೀಶ ಗೊಂಡ ಉಪಸ್ಥಿತರಿದ್ದರು. ಹಿಂದಿನ ವಾರ್ಷಿಕ ಸರ್ವಸಾಧಾರಣ ಸಭೆಯ ನಡೆವಳಿಯನ್ನು ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಕೃಷ್ಣ ಎಂ ನಾಯ್ಕ ಓದಿದರು. ಪ್ರಧಾನ ಕಛೇರಿಯ ವ್ಯವಸ್ಥಾಪಕರಾದ ಶ್ರೀ ವಿಶ್ವನಾಥ ನಾಯ್ಕ ವಂದಿಸಿದರು.