2,605 total views
ಯಡ್ರಾಮಿ ಸುದ್ದಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಠಾಣೆಯ ಉಪ ನಿರೀಕ್ಷಕರಾದ ಸುಖದೇವ್ ಸಿಂಗೆ ಅವರು ಮಾತನಾಡಿ ಹಬ್ಬಗಳನ್ನು ಎಲ್ಲರೂ ಸೇರಿ ಭಾವೈಕ್ಯತೆಯಿಂದ ಆಚರಣೆ ಮಾಡಬೇಕು ಹಬ್ಬಗಳಲ್ಲಿ ಗಲಭೆ ಸೃಷ್ಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.. ಗಣೇಶ್ ವಿಸರ್ಜನೆ ಸಂದರ್ಭದಲ್ಲಿ ಮಕ್ಕಳು ಹೋಗಲಾರದಂತೆ ನಿಗ ವಹಿಸಬೇಕು.. ಗಣೇಶ ವಿಸರ್ಜನೆ ಹಾಗೂ ಈದ್ ಮಿಲಾದ್ ನಲ್ಲಿ ಡಿಜೆ ಬಳಸುವಂತಿಲ್ಲ. ಮೈಕ್ ಪರವಾನಗಿ ಹಾಗೂ ಜೆಸ್ಕಾಂ ಅವರ ಪರವಾನಗಿ ಪಡೆದುಕೊಳ್ಳಲು ಸೂಚನೆ ನೀಡಿದರು. ಆದಷ್ಟು ಪರಿಸರ ಪ್ರೇಮಿ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ ಮತ್ತು ಅಹಿತಕರ ಘಟನೆ ನಡೆಯದಂತೆ ಹಬ್ಬಗಳನ್ನು ಆಚರಿಸಿ ಎಂದು ಯಡ್ರಾಮಿ ಪೊಲೀಸ್ ಠಾಣೆ ಪಿಎಸ್ಐ ಸುಖಾನಂದ ಸಿಂಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ …!. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮತ್ತು ಜೆಸ್ಕಾಂ ಅಧಿಕಾರಿಗಳು ಹಾಗೂ ಯಡ್ರಾಮಿ ಪಟ್ಟಣದ ಹಿರಿಯರು ಮುಖಂಡರು ಉಪಸ್ಥಿತರಿದ್ದರು…!
ವರದಿ: ವಿಜಯಕುಮಾರ್ ಜೆ ಮಲ್ಲೇದ