2,578 total views
ಕಲಬುರಗಿ: – ಮನುಷ್ಯನಿಗೆ ಭಗವಂತ ಏನೆಲ್ಲ ನೀಡಿದ್ದರು ನಮ್ಮ ಸ್ವಾರ್ಥ ಜೀವನದಲ್ಲಿ ಆತ್ಮ ತೃಪ್ತಿಯನ್ನು ಕಳೆದುಕೊಂಡಿದ್ದೇವೆ. ಸಮಾಜಿಕ ಸೇವೆಯಲ್ಲಿ ಒಂದಾದ (ಸ್ವಚ್ಛತೆ ಕುರಿತು ಕಾರ್ಯವನ್ನು). ಅಂದರೆ (ಅನಾಥರಿಗೆ.) ಅಂಗವಿಕಲರಿಗೆ. ಪೌರ ಕಾರ್ಮಿಕರಿಗೆ ಉಚಿತ ಕ್ಷೌರ ಸೇವೆಯನ್ನು ಇಂದು ವಿಶ್ವ ಕ್ಷೌರಿಕರ ದಿನಾಚರಣೆ ದಿನದಂದು ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಜನಪ್ರೀಯ ಹೇರ್ ಸಲೂನ್ ಅಂಗಡಿಯಲ್ಲಿ ಉಚಿತ ಕ್ಷೌರ ಸೇವೆ ಮಾಡಿದ ಸಮಾಜದ ಸೇವಕ – ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಅನಾಥರಿಗೆ. ಅಂಗವಿಕಲರಿಗೆ. ಪೌರ ಕಾರ್ಮಿಕರಿಗೆ ಈ ವಿಭಿನ್ನ. ರೀತಿಯ ಮೂಲಕ ಉಚಿತ ಕ್ಷೌರ ಸೇವೆ ಮಾಡಿದಾಗ ಅದರಿಂದ ಸಿಗುವ ಆತ್ಮತೃಪ್ತಿಯೂ ಬೇರೆಲ್ಲಿಯೂ ಸಿಗುವುದಿಲ್ಲಾ ಎಂದು ಡಾ.ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಯವರು ತಿಳಿಸಿದರು.
ನಾಲವಾರ ಪಟ್ಟಣದ ಅವರ ಜನಪ್ರಿಯ ಹೇರ್ ಸಲೂನ್ ಅಂಗಡಿಯಲ್ಲಿ ಅನಾಥ ಅಂಧ ಮಕ್ಕಳಿಗೆ. ಅಂಗವಿಕಲರಿಗೆ, ಪೌರ ಕಾರ್ಮಿಕರಿಗೆ. ಇಂದು ‘ವಿಶ್ವ- ಕ್ಷೌರಿಕರ ದಿನಾಚರಣೆ” ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಯಿಸಿ ಮಾತನಾಡುತ ಅವರು ಇಂದು ವಿಶ್ವ ಕ್ಷೌರಿಕ ರ ದಿನವನ್ನು ಈ ರೀತಿಯಾಗಿ ನಾವು ಸಂತೋಷ ಸಂಭ್ರಮದಿಂದ ಕೂಡಿ, ಈ ದಿನ ಗ್ರಾಹಕರಿಗೆ ಈ ಸೇವೆ ಮಾಡುವುದರಿಂದ ಆತ್ಮ ತೃಪ್ತಿಯ ಜೊತೆಗೆ ಸಾರ್ವಜನಿಕರಲ್ಲಿ ಈ ಸೇವೆ ಸಲ್ಲಿಸಿದ ಕೀರ್ತಿ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ತನ್ನಂತಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ ಯುವ ಪಿಳಿಗೆಗೆ ಸಾಮಾಜಿಕ ಸಂಘಟನೆಯ ಜೊತೆಗೆ ಈ ರೀತಿಯ ವಿಭಿನ್ನ ಸೇವೆಯನ್ನು ಮಾಡಬೇಕು ಎಂದು ಜಾಗೃತಿ ಹಾಗೂ ಸಮಾಜದ ಜವಬ್ದಾರಿಯನ್ನು ತರುವುದು ಅವಶ್ಯವಾಗಿದೆ
ಅಂತಹ ಕೆಲಸವನ್ನು ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಳು ಹಾಗೂ ಕಲಬುರಗಿ ಜಿಲ್ಲಾ ಹಡಪದ (ಅಪ್ಪಣ್ಣ) ಸಮಾಜದ ಸಹಯೋಗದಲ್ಲಿ ಇಂದು ವಿಶ್ವ ಕ್ಷೌರಿಕರ ದಿನದಂದು ಉಚಿತ ಕ್ಷೌರ ಸೇವೆ ಹಮ್ಮಿಕೊಳ್ಳಲಾಗಿದೆ ಇದರಲ್ಲಿ ನಮ್ಮ ಸಮಾಜದ ಸಂಘಟನೆಯ ಜೊತೆಗೆ ಸಾಮಾಜಿಕ ಜವಬ್ದಾರಿಯನ್ನು ನಿರ್ವಹಿಸಿದ್ದು. ನಮಗೆ ಹೆಮ್ಮೆ ಎನ್ನಿಸುತ್ತದೆ.