2,564 total views
ಯಡ್ರಾಮಿ ಸುದ್ದಿ: ಪಟ್ಟಣದ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಗಣೇಶ್ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು.. ಈ ಸಭೆಯಲ್ಲಿ ಮಾತನಾಡಿದ ಕರವೇ (ಪ್ರವಿಣ ಶಟ್ಟಿ) ಬಣದ ಅಲ್ಪಸಂಖ್ಯಾತರ ತಾಲೂಕ ಅಧ್ಯಕ್ಷರಾದ ಅಫ್ರೋಜ್ ಯಡ್ರಾಮಿ ಮಾತನಾಡಿ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಶಾಂತಿಯ ಬೀಡು ವಿಶೇಷವಾಗಿ ಯಡ್ರಾಮಿ ತಾಲೂಕಿನ ಜನತೆ ಸೌಹಾರ್ದತೆಯಿಂದ ಬದುಕುತ್ತಿದ್ದು ತುಂಬಾ ಹೆಮ್ಮೆಯ ವಿಷಯ. ಯಾವುದೇ ಹಬ್ಬ ಹರಿದಿನಗಳಲ್ಲಿ ಎಲ್ಲಾ ಧರ್ಮವನ್ನು ಒಳಗೊಂಡು ಆಚರಣೆ ಮಾಡ್ತಾರೆ. ಯಡ್ರಾಮಿ ಪಟ್ಟಣದಲ್ಲಿ ಹಿಂದೆ ಯಾವುದೇ ಕೋಮು ಗಲಭೆಗಳು ನಡೆದಿಲ್ಲ ಮುಂದೆಯೂ ನಡೆಯದಂತೆ ನಾವು ಅಣ್ಣತಮ್ಮಂದಿರ ಹಾಗೆ ಬದುಕುತ್ತಿದ್ದೇವೆ. ಪ್ರಚೋದನಕಾರಿ ಹೇಳಿಕೆಗೆ ಒಳಗಾಗದೆ ಕೋಮು ಗಲಭೆಗಳಿಗೆ ಆಸ್ಪದ ನೀಡಬಾರದು ಅದರ ಜೊತೆಗೆ ಯಾವುದೇ ಹಬ್ಬಗಳನ್ನು ಕಾನೂನು ಚೌಕಟ್ಟಿನಲ್ಲಿ ಮಾಡೋಣ ಎಂದು ಹೇಳಿದರು.. ಮತ್ತು ಸಭೆಯನ್ನು ಉದ್ದೇಶಿಸಿ ಠಾಣೆಯ ಉಪ ನಿರೀಕ್ಷಕರಾದ ಸುಖದೇವ್ ಶಿಂಗೆ ಅವರು ಮಾತನಾಡಿ ಹಬ್ಬಗಳನ್ನು ಎಲ್ಲರೂ ಸೇರಿ ಭಾವೈಕ್ಯತೆಯಿಂದ ಆಚರಣೆ ಮಾಡಬೇಕು ಹಬ್ಬಗಳಲ್ಲಿ ಗಲಭೆ ಸೃಷ್ಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.. ಗಣೇಶ್ ವಿಸರ್ಜನೆ ಸಂದರ್ಭದಲ್ಲಿ ಮಕ್ಕಳು ಹೋಗಲಾರದಂತೆ ನಿಗ ವಹಿಸಬೇಕು.. ಗಣೇಶ ವಿಸರ್ಜನೆ ಹಾಗೂ ಈದ್ ಮಿಲಾದ್ ನಲ್ಲಿ ಡಿಜೆ ಬಳಸುವಂತಿಲ್ಲ. ಮೈಕ್ ಪರವಾನಗಿ ಹಾಗೂ ಜೆಸ್ಕಾಂ ಅವರ ಪರವಾನಗಿ ಪಡೆದುಕೊಳ್ಳಲು ಸೂಚನೆ ನೀಡಿದರು. ಆದಷ್ಟು ಪರಿಸರ ಪ್ರೇಮಿ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ ಮತ್ತು ಅಹಿತಕರ ಘಟನೆ ನಡೆಯದಂತೆ ಹಬ್ಬಗಳನ್ನು ಆಚರಿಸಿ ಎಂದು ಹೇಳಿದರು… ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮತ್ತು ಜೆಸ್ಕಾಂ ಅಧಿಕಾರಿಗಳು ಹಾಗೂ ಯಡ್ರಾಮಿ ಪಟ್ಟಣದ ಹಿರಿಯರಾದ ಶ್ರೀ ಇಬ್ರಾಹಿಂ ಸಾಬ್ ಉಸ್ತಾದ್. NR ಪಾಟೀಲ್. ಬಸವರಾಜ ಹೂಗಾರ. . ಅಜ್ಮೀರ್ ಪಟೇಲ್ ಚಿಂಚೋಳಿ. ಡಾ.ವಿಶ್ವನಾಥ್ ಜಿ ಪಾಟೀಲ್. ರಾಮು . ದಿಲೀಪ್ ಪವಾರ. ಆದಮ್ ಖುರೇಶಿ.ಚಿದಾನಂದ ಮೂಳ್ಳೋಳಿ. ಯಾಸೀನ್ ಅಲ್ಲಾಕೋಳ. ಪ್ರಭಾಕರ ರಾಥೋಡ್. ಇನ್ನು ಅನೇಕರು ಯಡ್ರಾಮಿ ಪಟ್ಟಣದ ಗಣ್ಯರು ಯುವಕರು. ಸಂಘಟನೆಯ ಸದಸ್ಯರುಗಳು ಹಾಗೂ ಯಡ್ರಾಮಿ ತಾಲೂಕಿನ ಎಲ್ಲಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ವರದಿ: ವಿಜಯಕುಮಾರ್ ಜೆ ಮಲ್ಲೇದ